ಆ್ಯಪ್ನಗರ

ಬೇಲೂರು: ನಾಳೆ ರಾಜ್ಯ ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ

ಬೇಲೂರು: ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಡಿ.23ರಂದು ಸೋಂಪುರ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಜೈ ಭಜರಂಗಿ ಯುವಕ ಸಂಘದ ಅಧ್ಯಕ್ಷ ಧರಣೇಶ್‌ ಗೌಡ ತಿಳಿಸಿದ್ದಾರೆ.

Vijaya Karnataka 22 Dec 2018, 5:00 am
ಬೇಲೂರು: ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಡಿ.23ರಂದು ಸೋಂಪುರ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಜೈ ಭಜರಂಗಿ ಯುವಕ ಸಂಘದ ಅಧ್ಯಕ್ಷ ಧರಣೇಶ್‌ ಗೌಡ ತಿಳಿಸಿದ್ದಾರೆ.
Vijaya Karnataka Web hassan beluru state level bullock cart race
ಬೇಲೂರು: ನಾಳೆ ರಾಜ್ಯ ಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ


ವಿಜೇತರಿಗೆ ಪ್ರಥಮ ಬಹುಮಾನ 40 ಸಾವಿರ ರೂ., ದ್ವಿತೀಯ 30 ಸಾವಿರ, ತೃತೀಯ 20ಸಾವಿರ, ನಾಲ್ಕನೇ ಬಹುಮಾನ 10 ಸಾವಿರ, 5ನೇ ಸ್ಥಾನಕ್ಕೆ 5 ಸಾವಿರ ರೂ. ನಗದು ಬಹುಮಾನ ಮತ್ತು ಪಾರಿತೋಷಕ ನೀಡಲಾಗುತ್ತದೆ. ಕಳೆದ ವರ್ಷ 40 ಜೋಡಿ ಎತ್ತುಗಳು ಪಾಲ್ಗೊಂಡಿದ್ದವು. ಈ ಬಾರಿ 60 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಗ್ರಾಮೀಣ ರೈತರಿಗೆ ಉಪಯುಕ್ತವಾಗುವಂತೆ ಕೃಷಿ ವಿಚಾರ ಸಂವಾದ, ರಾಸುಗಳನ್ನು ಸಾಕುವುದು, ದೇಶಿ ತಳಿ ಹಸುಗಳ ಕುರಿತು ನುರಿತ ತಜ್ಞರಿಂದ ಉಪನ್ಯಾಸ, ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಥಿಗಳಿಗೆ ಊಟ, ಉಪಹಾರ, ರಾಸುಗಳಿಗೂ ಮೇವಿನ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಸುನಿ, ಕರುಣಸಾಗರ್‌, ಕರಣ್‌, ಶಶಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ