ಆ್ಯಪ್ನಗರ

ಚನ್ನರಾಯಪಟ್ಟಣ: ಬಂದ್‌ಗೆ ಸಿಗದ ಬೆಂಬಲ

ಬಂದ್‌ಗೆ ಸಿಗದ ಬೆಂಬಲ * ಎಂದಿನಂತೆ ಜನ ಜೀವನ ---------- ವಿಕ ಸುದ್ದಿಲೋಕ ಚನ್ನರಾಯಪಟ್ಟಣ ಬಂದ್‌ ಹಿನ್ನೆಲೆಯಲ್ಲಿ ಸಂಜೆವರೆಗೆ ಸಾರಿಗೆ ಸಂಚಾರ ಪೂರ್ಣ ಸ್ಥಗಿತಗೊಂಡಿತ್ತು...

Vijaya Karnataka 11 Sep 2018, 5:00 am
ಚನ್ನರಾಯಪಟ್ಟಣ: ಬಂದ್‌ ಹಿನ್ನೆಲೆಯಲ್ಲಿ ಸಂಜೆವರೆಗೆ ಸಾರಿಗೆ ಸಂಚಾರ ಪೂರ್ಣ ಸ್ಥಗಿತಗೊಂಡಿತ್ತು. ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದು, ಎಂದಿನಂತೆ ನಗರ ಜೀವನ ಕಂಡು ಬಂತು. ಸಾರ್ವಜನಿಕರಿಂದ ಬಂದ್‌ಗೆ ಸರಿಯಾದ ಬೆಂಬಲ ಸಿಗಲಿಲ್ಲ.
Vijaya Karnataka Web hassan channarayapattana petrol disel prize hike jds congress protest
ಚನ್ನರಾಯಪಟ್ಟಣ: ಬಂದ್‌ಗೆ ಸಿಗದ ಬೆಂಬಲ


ಬಸ್‌ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. ಚಲನ ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದು ಮಾಡಲಾಗಿತ್ತು. ಬ್ಯಾಂಕ್‌ಗಳು, ವಿಮಾ ಕಚೇರಿ, ಅಂಚೆ ಕಚೇರಿ, ದೂರವಾಣಿ ಕಚೇರಿ ಹಾಗೂ ಹೊಟೆಲ್‌, ಬೇಕರಿ, ಅಂಗಡಿ ಮುಂಗಟ್ಟುಗಳು, ತರಕಾರಿ ಮಾರುಕಟ್ಟೆ ತೆರೆದಿದ್ದವು. ಆಟೋಗಳು, ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು. ಸರಕಾರಿ ಕಚೇರಿಗಳ ಬಳಿ ಜನರ ಸುಳಿವೂ ಇರಲಿಲ್ಲ.

ಪ್ರತ್ಯೇಕ ಪ್ರತಿಭಟನೆ:

ಕಾಂಗ್ರೆಸ್‌ ಕಾರ‍್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಿ.ಎಂ.ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ ಮಾತನಾಡಿ, ಬೆಲೆ ಏರಿಕೆ ತಡೆಯದಿದ್ದರೆ ಶ್ರೀಸಾಮಾನ್ಯನಿಗೆ ಇನ್ನಷ್ಟು ಹೊರೆಬೀಳಲಿದೆ ಎಂದರು. ಮುಖಂಡರಾದ ಜತ್ತೇನಹಳ್ಳಿ ರಾಮಚಂದ್ರ, ಎಪಿಎಂಸಿ ನಿರ್ದೇಶಕ ಎಂ.ಶಂಕರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎಚ್‌.ಎಸ್‌.ವಿಜಯಕುಮಾರ್‌, ಎಚ್‌.ಎಸ್‌.ಶ್ರೀಕಂಠಯ್ಯ, ಪುರಸಭಾ ಸದಸ್ಯ ಪ್ರಕಾಶ್‌, ಸುಜಾತಾ ಇದ್ದರು.

ನಂತರ ಕೆ.ಆರ್‌.ವೃತ್ತದವರೆಗೆ ಮೆರವಣಿಗೆ ನಡೆಸಿದ ಸಿಐಟಿಯು ಕಾರ‍್ಯಕರ್ತರು ಕೆ.ಆರ್‌.ವೃತ್ತದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವರ ಪ್ರತಿಕೃತಿ ದಹಿಸಿದರು. ಮುಖಂಡ ಮಂಜುನಾಥ್‌ ಮಾತನಾಡಿ, ಬೆಲೆ ಏರಿಕೆಯನ್ನು ತಗ್ಗಿಸುವ ಯಾವುದೇ ಕ್ರಮವನ್ನು ಕೇಂದ್ರ ಸರಕಾರ ಕೈಗೊಂಡಿಲ್ಲ. ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳ ಒತ್ತಾಸೆ ಬದಿಗಿಟ್ಟು ಜನಸಾಮಾನ್ಯರ ಪರವಾಗಿರಬೇಕು ಎಂದರು.

ರಾಘವೇಂದ್ರ, ಕರಿಯಪ್ಪ, ವಾಸುದೇವ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ