Please enable javascript.ಸಹಾಯಧನ ಜನವರಿಯಿಂದ ನೇರ ಖಾತೆಗೆ: ಜಿಲ್ಲಾಧಿಕಾರಿ - Hassan, cooking gas, subsidy, Bank Account, DC, - Vijay Karnataka

ಸಹಾಯಧನ ಜನವರಿಯಿಂದ ನೇರ ಖಾತೆಗೆ: ಜಿಲ್ಲಾಧಿಕಾರಿ

Vijaya Karnataka Web 20 Dec 2014, 5:28 am
Subscribe

ಕೇಂದ್ರ ಸರಕಾರ ಅಡುಗೆ ಅನಿಲ ಗೃಹಬಳಕೆದಾರರಿಗೆ 2015 ರ ಜ.1 ರಿಂದ ಸಹಾಯಧನವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲು ತೀರ್ಮಾನ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.

hassan cooking gas subsidy bank account dc
ಸಹಾಯಧನ ಜನವರಿಯಿಂದ ನೇರ ಖಾತೆಗೆ: ಜಿಲ್ಲಾಧಿಕಾರಿ
ಹಾಸನ: ಕೇಂದ್ರ ಸರಕಾರ ಅಡುಗೆ ಅನಿಲ ಗೃಹಬಳಕೆದಾರರಿಗೆ ೨೦೧೫ ರ ಜ.೧ ರಿಂದ ಸಹಾಯಧನವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲು ತೀರ್ಮಾನ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.

ಡಿಸಿ ಕಚೇರಿ ಸಭಾಂಗಣದಲ್ಲಿ ಅಡುಗೆ ಅನಿಲ ಸಹಾಯಧನವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದರು. ಎಲ್ಲಾ ಗ್ರಾಹಕರು ಸೌಲಭ್ಯವನ್ನು ಪಡೆಯಲು ನೆರವಾಗುವಂತೆ ಕರಪತ್ರ, ಪೋಸ್ಟರ್‌ಗಳ ಮೂಲಕ ಹೆಚ್ಚಿನ ಅರಿವು ಮೂಡಿಸಲು ಅಡುಗೆ ಅನಿಲ ಸರಬರಾಜು ಕಂಪನಿಯವರಿಗೆ ಹಾಗೂ ವಿತರಕರಿಗೆ ಸೂಚಿಸಿದರು. ಅಡುಗೆ ಅನಿಲ ಗೃಹಬಳಕೆದಾರರು ಸಹಾಯಧನ ಸೌಲಭ್ಯ ಪಡೆಯಲು ನಿಗದಿತ ನಮೂನೆಯಲ್ಲಿ ಗ್ರಾಹಕರ ಸಂಖ್ಯೆ ಜತೆಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಅಡುಗೆ ಅನಿಲ ವಿತರಕರಿಗೆ ನೀಡಿದಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು. ಜಿಲ್ಲೆಯಲ್ಲಿ ಶೇ.೮೧ ರಷ್ಟು ಜನ ಆಧಾರ್ ಕಾರ್ಡ್ ಸೌಲಭ್ಯ ಹೊಂದಿದ್ದಾರೆ. ಉಳಿದವರು ಆಧಾರ್ ಕಾರ್ಡ್ ಪಡೆಯಲು ಅನುಕೂಲವಾಗುವಂತೆ ಎಲ್ಲಾ ನಾಡ ಕಚೇರಿಯಲ್ಲಿ ಆಧಾರ್ ಸೆಂಟರ್ ತೆರೆಯಲು ಸೂಚಿಸಿದರು. ಪ್ರತಿ ತಾಲೂಕಿನಲ್ಲಿ ಎಷ್ಟು ಜನ ಆಧಾರ್ ಕಾರ್ಡ್ ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.

ಗ್ರಾಮೀಣ ಪ್ರದೇಶದ ಗ್ರಾಹಕರು ಸಹಾಯಧನ ಸೌಲಭ್ಯ ಪಡೆಯಲು ಅಧಿಕಾರಿಗಳು ಅರಿವು ಮೂಡಿಸುವಂತೆ ತಿಳಿಸಿದರು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹೆಚ್ಚಿನ ಕಾಳಜಿ ವಹಿಸಬೇಕು. ಸಾರ್ವಜನಿಕರಿಗೆ ಮಾಹಿತಿ ನೀಡಲು ಅಡುಗೆ ಅನಿಲ ಸರಬರಾಜು ಕಂಪನಿಗಳು ಸಹಾಯವಾಣಿ ತೆರೆಯುವಂತೆ ಸೂಚಿಸಿದರು. ಜಿಪಂ ಸಿಇಒ ಉಪೇಂದ್ರಪ್ರತಾಪ್ ಸಿಂಗ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಹದೇವಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಾಂತರಾಜು, ತಹಸೀಲ್ದಾರ್ ಹಾಗೂ ವಿವಿಧ ಅಧಿಕಾರಿಗಳು ಮತ್ತು ಆಯಿಲ್ ಕಂಪನಿಗಳ ಪ್ರತಿನಿಧಿಗಳು, ಅಡುಗೆ ಅನಿಲ ವಿತರಕರು ಸಭೆಯಲ್ಲಿ ಹಾಜರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ