ಆ್ಯಪ್ನಗರ

ಹಾಸನದಲ್ಲಿ 278 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ

ಹಾಸನ ಹಾಲು ಒಕ್ಕೂಟದಿಂದ 278.46 ಕೋಟಿ ವೆಚ್ಚದಲ್ಲಿ ಮೆಗಾ ಡೈರಿಯನ್ನು ಸ್ಥಾಪಿಸಲಾಗುತ್ತದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಹೇಳಿದ್ದಾರೆ. ​ಮೆಗಾ ಡೈರಿ ನಿತ್ಯ 10ಲಕ್ಷ ಲೀ.ಸಾಮರ್ಥ್ಯ ಹೊಂದಿದ್ದು, 30 ಲಕ್ಷ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಹಾಲಿನಪುಡಿ ಘಟಕ ಸ್ಥಾಪನೆಯಾಗಲಿದೆ.

Vijaya Karnataka 27 May 2020, 8:08 am
ಹಾಸನ: ಹಾಸನ ಹಾಲು ಒಕ್ಕೂಟದಿಂದ 278.46 ಕೋಟಿ ವೆಚ್ಚದಲ್ಲಿ ಕೌಶಿಕ ಕೈಗಾರಿಕಾ ಪ್ರದೇಶದಲ್ಲಿ ಮೆಗಾ ಡೈರಿ ಸ್ಥಾಪನೆಗೆ ಮಂಜೂರು ದೊರೆತು, ಕೆಐಎಡಿಬಿಯಿಂದ ಜಮೀನು ಖರೀದಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ತಿಳಿಸಿದರು.
Vijaya Karnataka Web ಸಾಂದರ್ಭಿಕ ಚಿತ್ರ


ಮೆಗಾ ಡೈರಿ ನಿತ್ಯ 10 ಲಕ್ಷ ಲೀ.ಸಾಮರ್ಥ್ಯ ಹೊಂದಿದ್ದು, 30 ಲಕ್ಷ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಹಾಲಿನಪುಡಿ ಘಟಕ ಸ್ಥಾಪನೆಯಾಗಲಿದೆ ಎಂದು ಹೇಳಿದರು.

ಯುಎಚ್‌ಟಿ ಸುವಾಸಿತ ಹಾಲಿನ ಪೆಟ್‌ಬಾಟಲ್‌ ಗಂಟೆಗೆ 30 ಸಾವಿರ ಸಾಮರ್ಥ್ಯದ ಘಟಕ 136.20 ಕೋಟಿ ವೆಚ್ಚದಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲೇ ಆರಂಭಿಸಲು ಉದ್ದೇಶಿಸಿದ್ದು, ಸಿವಿಲ್‌ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಇಟಲಿಯಿಂದ ಯಂತ್ರಗಳು ಬಂದಿವೆ. ಯುಎಚ್‌ಟಿ ಹಾಲಿನ ಘಟಕದ ಸಾಮರ್ಥ್ಯವನ್ನು ನಿತ್ಯ 2 ಲಕ್ಷ ಲೀಟರ್‌ನಿಂದ ನಾಲ್ಕು ಲಕ್ಷ ಲೀಟರ್‌ ಹೆಚ್ಚಿಸಲು 66.85 ಕೋಟಿ ರೂ. ಯೋಜನೆ ಪೂರ್ಣಗೊಂಡಿದೆ. ಹಾಸನ ಡೇರಿಯಲ್ಲಿ ಹಾಲಿನ ಸಂಸ್ಕರಣಾ ಸಾಮರ್ಥ್ಯ 3 ಲಕ್ಷದಿಂದ 5 ಲಕ್ಷ ಲೀಟರ್‌ಗೆ ಹೆಚ್ಚಿಸಲು 22.51 ಕೋಟಿ ವೆಚ್ಚದಲ್ಲಿ ಟರ್ನ್‌ ಕೀ ಆಧಾರದಲ್ಲಿ ನಿರ್ವಹಿಸಲು ಪತ್ರ ವ್ಯವಹಾರ ನಡೆದಿದೆ ಎಂದು ಮಾಹಿತಿ ನೀಡಿದರು.

ರೈತ ಸಭಾಂಗಣ ಕಟ್ಟಡಕ್ಕೆ ಅಗತ್ಯ ಸಿವಿಲ್‌ ಕಾಮಗಾರಿ 1.38 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ ಎಂದರು. ಆಡಳಿತ ಸಂಕೀರ್ಣ ಕಟ್ಟಡ ನಿರ್ಮಾಣ 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹೊಳೆನರಸೀಪುರದಲ್ಲಿ ಶೀತಲೀಕರಣ ಕೇಂದ್ರ ರೆಫ್ರಿಜಿರೇಷನ್‌ ಕೊಠಡಿ, ಕೊಡಗು ಜಿಲ್ಲೆ ಕೂಡಿಗೆ ಡೇರಿ ವಿಸ್ತರಣಾ ಕಾಮಗಾರಿಯನ್ನು ಟರ್ನ್‌ ಕೀ ಆಧಾರದಲ್ಲಿ ನಿರ್ವಹಿಸಲು ಪತ್ರ ಬರೆಯಲಾಗಿದೆ.

ಹಾಸನ ಹಾಲು ಒಕ್ಕೂಟ 1,400 ಕೋಟಿ ವಹಿವಾಟು ನಡೆಸುವಂತಾಗಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಒಕ್ಕೂಟದ ಅಧ್ಯಕ್ಷರಾದ ಎಚ್‌.ಡಿ.ರೇವಣ್ಣ ಅವರ ಶ್ರಮ ಅಪಾರ.
- ಗೋಪಾಲಯ್ಯ ವ್ಯವಸ್ಥಾಪಕ ನಿರ್ದೇಶಕ ಹಾಸನ ಹಾಲು ಉತ್ಪಾದಕರ ಒಕ್ಕೂಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ