ಆ್ಯಪ್ನಗರ

ಎತ್ತಿನಹೊಳೆ: ಸುರಂಗ ಮಾರ್ಗ, ನಾಲಾ ಕಾಮಗಾರಿ ಕೈಬಿಡಲು ಆಗ್ರಹ

ಸುರಂಗ ಮಾರ್ಗ, ನಾಲಾ ಕಾಮಗಾರಿ ಕೈಬಿಡಲು ಆಗ್ರಹ *ಕಾನೂನು ಹೋರಾಟ ಮಾಡುವುದಾಗಿ ಬೆಳಗೋಡು ಎಪಿಎಂಸಿ ಸದಸ್ಯ ಹಾಗೂ ವಕೀಲ ಕವನಗೌಡ ಎಚ್ಚರಿಕೆ * ಪೈಪ್‌ ಲೈನ್‌ ಮೂಲಕವೇ ನೀರು ...

Vijaya Karnataka 18 Oct 2018, 5:00 am
ಹಾಸನ : ಎತ್ತಿನಹೊಳೆ ಯೋಜನೆ ಸಂಬಂಧ ಸುರಂಗ ಮಾರ್ಗ ಹಾಗೂ ನಾಲಾ ಕಾಮಗಾರಿಯನ್ನು ಕೈಬಿಟ್ಟು ಪೈಪ್‌ ಲೈನ್‌ ಮೂಲಕ ನೀರು ತೆಗೆದುಕೊಂಡು ಹೋಗಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಬೆಳಗೋಡು ಎಪಿಎಂಸಿ ಸದಸ್ಯ ಹಾಗೂ ವಕೀಲ ಕವನಗೌಡ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web hassan ettinahole under ground canel work left work process demand apmc member kavanagowda
ಎತ್ತಿನಹೊಳೆ: ಸುರಂಗ ಮಾರ್ಗ, ನಾಲಾ ಕಾಮಗಾರಿ ಕೈಬಿಡಲು ಆಗ್ರಹ


ಎತ್ತಿನಹೊಳೆ ಕುಡಿಯುವ ನೀರು ಯೋಜನೆ ಸಂಬಂಧ ಸುರಂಗ ಮಾರ್ಗ ಮತ್ತು ನಾಲಾ ಕಾಮಗಾರಿಯು ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ, ಮುಗಲಿ, ಕುಡನಹಳ್ಳಿ, ಬೆಳಗೋಡು ಮತ್ತು ಬೆಳಮೆ ಗ್ರಾಮದವರೆಗೆ 00ಯಿಂದ 7 ಕಿಮೀ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಈ ಪೈಕಿ 00ಯಿಂದ 1.156 ಕಿಮೀ ವರೆಗೆ ಸುರಂಗ ಮಾರ್ಗ (ಟನಲ್‌) ಮತ್ತು ಉಳಿದಂತೆ 1.157 ಕಿಮೀ ನಿಂದ 7 ಕಿಮೀವರೆಗೆ ತೆರೆದ ನಾಲೆ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ. ಜೊತೆಗೆ ಬೇಲೂರು ಬಸವಾಪುರ, ಮಾದೀಹಳ್ಳಿ ಮತ್ತು ಬೆಟ್ಟದಾಲೂರು ವ್ಯಾಪ್ತಿಯಲ್ಲಿ 29 ಕಿಮೀ ನಿಂದ 31 ಕಿಮೀ ವರೆಗೆ ಸುರಂಗ ಮಾರ್ಗ ಮತ್ತು ತೆರೆದ ನಾಲೆ ನಿರ್ಮಾಣ ಕಾಮಗಾರಿಗೆ ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ ಒಟ್ಟಾರೆ 337 ಕೋಟಿ ರೂ. ಅನುದಾನವನ್ನು ನೀಡಿ ಕಾಮಗಾರಿಯನ್ನು ಬೆಂಗಳೂರಿನ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಎತ್ತಿನಹೊಳೆ ಯೋಜನೆ ಸಂಬಂಧ ನಾಲಾ ಕಾಮಗಾರಿಯನ್ನು ಗುತ್ತಿಗೆದಾರರು ಈಗಾಗಲೇ ಪ್ರಾರಂಭ ಮಾಡಿದ್ದಾರೆ. ಇವರು ಸ್ಫೋಟಕ ಬಳಿಸಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಎತ್ತಿನಹೊಳೆಯಿಂದ ಬಯಲು ಸೀಮೆ ಪ್ರದೇಶಗಳಿಗೆ ನೀರು ಕೊಡುವ ಸಲುವಾಗಿ ಸುರಂಗ ಮಾರ್ಗ ಮತ್ತು ತೆರೆದ ನಾಲೆಯ ಮೂಲಕ ನೀರು ಹರಿಸುವುದರಿಂದ ಮಲೆನಾಡು ಭಾಗದಲ್ಲಿ ಅಂತರ್ಜಲ ಬತ್ತಿ ಹೋಗಲಿದೆ. ಇದರಿಂದ ಅಕ್ಕ ಪಕ್ಕದಲ್ಲಿನ ಕೊಳವೆ ಬಾವಿಗಳು, ಕೆರೆಕಟ್ಟೆಗಳು ನಶಿಸಿ ಹೋಗಲಿದೆ. ಹೀಗಾಗಿ ಮಲೆನಾಡು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದರು.

ಇದೇ ಯೋಜನೆಯು ಬೇರೆ ಕಡೆಗಳಲ್ಲಿ ಪೈಪ್‌ ಲೈನ್‌ ಮೂಲಕ ನೀರನ್ನು ಹರಿಸಲು ಕಾಮಗಾರಿ ನಡೆಸಲಾಗಿದೆ. ಆದರೆ, ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ, ಮುಗಲಿ, ಕುಡನಹಳ್ಳಿ, ಬೆಳಗೋಡು ಮತ್ತು ಬೆಳಮೆ ಗ್ರಾಮಗಳು ಮತ್ತು ಬೇಲೂರು ತಾಲೂಕಿನ ಬಸವಾರ, ಮಾದೀಹಳ್ಳಿ ಮತ್ತು ಬೆಟ್ಟದಾಲೂರು ವ್ಯಾಪ್ತಿಯಲ್ಲಿ ಮಾತ್ರ ಸುರಂಗ ಮಾರ್ಗ ಮತ್ತು ತೆರೆದ ನಾಲೆಗಳನ್ನು ನಿರ್ಮಾಣ ಮಾಡಿ ನೀರು ಹರಿಸಲು ಕಾಮಗಾರಿ ನಡೆಸಲಾಗುತ್ತಿದೆ. ಸುರಂಗ ಮಾರ್ಗದ ಮೂಲಕ ನೀರು ಹರಿಸಿದರೆ ಬಾಗೂರು-ನವಿಲೆ ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯಂತೆ ಮಲೆನಾಡು ಭಾಗದಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ಇದರಿಂದ ಅಂತರ್ಜಲ ಬತ್ತಿ ಹೋಗಲಿದೆ. 30ರಿಂದ 80 ಅಡಿಗಳಷ್ಟು ಆಳದಲ್ಲಿ ಸುರಂಗ ಮಾರ್ಗ ಹಾದು ಹೋಗುವುದರಿಂದ ಈ ಇಲ್ಲಿನ ಕೊಳವೆ ಬಾವಿಗಳು ನಶಿಸಿ ಹೋಗಲಿದೆ. ಯೋಜನೆಗೆ ಭೂಮಿ ಕೊಟ್ಟಿರುವ ರೈತರಿಗೆ ಹೆಚ್ಚಿನ ಪರಿಹಾರ ನೀಡಲಿ. ಅದನ್ನು ಬಿಟ್ಟು ಈ ರೀತಿಯಾಗಿ ದುಂದು ವೆಚ್ಚ ಮಾಡುವುದು ಸರಿಯಲ್ಲ. ರೈತರ ಹಿತ ಕಾಯಬೇಕಾದ ಸರಕಾರ ಮಾರಕವಾಗಿ ನಡೆದುಕೊಳ್ಳುತ್ತಿದೆ. ಸುರಂಗ ಮಾರ್ಗ ಮತ್ತು ತೆರೆ ನಾಲಾ ಕಾಮಗಾರಿಯನ್ನು ನಿಲ್ಲಿಸಿ ಪೈಪ್‌ಲೈನ್‌ ಮೂಲಕ ನೀರು ಹರಿಸಲು ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಈ ವಿರುದ್ಧ ಜನಾಂದೋಲನ ರೂಪಿಸಿ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಹೇಳಿದರು.

ಕಾಫಿ ಬೆಳೆಗಾರ ಧಾರೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ