ಆ್ಯಪ್ನಗರ

ನೀಲಗಿರಿ ಕಾವಲು ಗ್ರಾಮಸ್ಥರ ಪ್ರತಿಭಟನೆ

ನೀಲಗಿರಿ ಕಾವಲು ಗ್ರಾಮಸ್ಥರ ಪ್ರತಿಭಟನೆ * ಅಕ್ರಮ ಮದ್ಯ ಮಾರಾಟ, ಜೂಜು ನಿಯಂತ್ರಣಕ್ಕೆ ಆಗ್ರಹ ವಿಕ ಸುದ್ದಿಲೋಕ ಹಾಸನ ಅಕ್ರಮ ಮದ್ಯ ಮಾರಾಟ, ಜೂಜಾಟದಿಂದ ನೀಲಗಿರಿ ಕಾವಲು ...

Vijaya Karnataka 16 Oct 2018, 5:00 am
ಹಾಸನ: ಅಕ್ರಮ ಮದ್ಯ ಮಾರಾಟ, ಜೂಜಾಟದಿಂದ ನೀಲಗಿರಿ ಕಾವಲು ಗ್ರಾಮದಲ್ಲಿ ಅಶಾಂತಿ ವಾತಾವರಣ ಉಂಟಾಗಿದ್ದು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂಧು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web hassan illigual liquer selling neelagiri kaval villagers protest dc office
ನೀಲಗಿರಿ ಕಾವಲು ಗ್ರಾಮಸ್ಥರ ಪ್ರತಿಭಟನೆ


ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಅರಸೀಕೆರೆ ತಾಲೂಕು ಜಾವಗಲ್‌ ಹೋಬಳಿ ನೀಲಗಿರಿ ಕಾವಲಿನಲ್ಲಿ ಸುಮಾರು 6 ತಿಂಗಳಿನಿಂದ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಜೂಜಾಟ ಹೆಚ್ಚಾಗಿದೆ. ಗ್ರಾಮದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಕುಡಿಯುವುದರಿಂದ ಮನೆಗಳು ಹಾಳಾಗಿ ಬೀದಿಗೆ ಬಂದಿದೆ. ನೀಲಗಿರಿ ಕಾವಲಿನ ಗ್ರಾಮದ ವ್ಯಕ್ತಿಯೊಬ್ಬರು ಅಕ್ರಮವಾಗಿ ಬಟ್ಟಿ ಸಾರಾಯಿ ಮಾರಟ ಮಾಡುತ್ತಿದ್ದಾರೆ. ಕುಡುಕರು ಮದು ಸೇವಿಸಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಕುಟುಂಬದ ನೆಮ್ಮದಿ ಹಾಳಾಗಿದೆ. ಈ ಬಗ್ಗೆ ಜಾವಗಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಈವರೆಗೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕೃಷ್ಣದಾಸ್‌, ಭಾರತಿ, ಜ್ಯೋತಿ, ಚೈತ್ರಾ, ರೂಪ, ರೇಣುಕ, ಜಯ, ಮಂಜೂಳಾ, ಗೀತಾ, ಸುಮಿತ್ರಾ, ಕುಸುಮ, ಕಾಳಮ್ಮ, ಸಣ್ಣಮ್ಮ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ