ಆ್ಯಪ್ನಗರ

​ ಆರೋಗ್ಯವಂತ ಸಮಾಜ ಕಟ್ಟಲು ಸಾಹಿತ್ಯ ಸಹಕಾರಿ

ಸಾಹಿತ್ಯವು ಸಮಾಜದೊಳಗೆ ಇದ್ದುಕೊಂಡು ಅಲ್ಲಿನ ದೌರ್ಬಲ್ಯಗಳು ಹಾಗೂ ಕೊಳಕನ್ನು ಶುದ್ದೀಕರಣಗೊಳಿಸುವ ಕೆಲಸ ಮಾಡುತ್ತದೆ ಎಂದು ಕಡೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ದೊರೇಶ್ ಅಭಿಪ್ರಾಯಪಟ್ಟರು.

Vijaya Karnataka Web 13 Apr 2017, 5:15 am
ಜಾವಗಲ್: ಸಾಹಿತ್ಯವು ಸಮಾಜದೊಳಗೆ ಇದ್ದುಕೊಂಡು ಅಲ್ಲಿನ ದೌರ್ಬಲ್ಯಗಳು ಹಾಗೂ ಕೊಳಕನ್ನು ಶುದ್ದೀಕರಣಗೊಳಿಸುವ ಕೆಲಸ ಮಾಡುತ್ತದೆ ಎಂದು ಕಡೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ದೊರೇಶ್ ಅಭಿಪ್ರಾಯಪಟ್ಟರು.
Vijaya Karnataka Web hassan javagal health social welfare
​ ಆರೋಗ್ಯವಂತ ಸಮಾಜ ಕಟ್ಟಲು ಸಾಹಿತ್ಯ ಸಹಕಾರಿ


ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ‌್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯವನ್ನು ಬಿಟ್ಟು ಸಮಾಜವನ್ನು ಶುದ್ದೀಕರಣಗೊಳಿಸಲು ಸಾಧ್ಯವಿಲ್ಲ. ಮಾನವನು ಸಂಘಜೀವಿ ಯಾಗಿದ್ದು, ಸಾಹಿತ್ಯವಿಲ್ಲದೆ ಬದುಕಲು ಸಾಧ್ಯವಿಲ್ಲ. ಗಾಧೆಗಳು ಕನ್ನಡ ಸಾಹಿತ್ಯದ ಜೀವನಾನುಭವದ ಅಂಗವಾಗಿವೆ. ಉತ್ತಮ ಸಮಾಜದ ನಿರ್ಮಾಣ ,ಸಮಾಜದ ಪರಿವರ್ತನೆ ಮಾಡುವ ಗುಣವನ್ನು ಸಾಹಿತ್ಯ ಹೊಂದಿದೆ ಎಂದರು.

ಆರೋಗ್ಯವೆಂದರೆ ದೈಹಿಕ ಕಾಯಿಲೆ ಎಂದರ್ಥವಲ್ಲ. ಬದಲಿಗೆ ಅರಿಷಡ್ವರ್ಗಗಳನ್ನು ಸಮತೋಲನದಲ್ಲಿ ಕಾಪಾಡಿಕೊಂಡು ಬದುಕುವುದೇ ಆರೋಗ್ಯ. ಕನ್ನಡ ಸಾಹಿತ್ಯ ಪ್ರಾರಂಭವಾದಾಗಿನಿಂದಲೂ ಪ್ರಸ್ತುತ ಕಾಲದವರೆಗೆ ಹಳೆಗನ್ನಡ ,ನಡುಗನ್ನಡ ಹಾಗೂ ಆಧುನಿಕ ಕನ್ನಡ ಸಾಹಿತ್ಯ ವ್ಯಾಪ್ತಿ ಯಲ್ಲಿ ಬರುವ ಚಂಪುಕಾವ್ಯ ,ರಗಳೆ, ವಚನಗಳು ,ದ್ವಿಪದಿ, ತ್ರಿಪದಿ ,ಕಾವ್ಯಗಳು, ನಾಟಕಗಳು ,ಕಾದಂಬರಿಗಳು ,ಕವನ ಸಂಕಲನ ಸೇರಿದಂತೆ ಮತ್ತಿತರ ಸಾಹಿತ್ಯ ಪ್ರಕಾರಗಳು ಆರೋಗ್ಯ ಪೂರ್ಣ ಸಮಾಜ ವನ್ನು ಕಟ್ಟುವಲ್ಲಿ ಸಹಕರಿಸುತ್ತಿವೆ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ಡಾ.ಬಿ. ಶಿವಕುಮಾರ್ ಮಾತನಾಡಿ, ಸಾಹಿತ್ಯವು ದೇಹದ ಆಲಸ್ಯವನ್ನು ದೂರಮಾಡುತ್ತದೆ. ನೊಂದ ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತದೆ. ಜತೆಗೆ ಸಮಾಜದಲ್ಲಿ ಶಾಂತಿ ,ನೆಮ್ಮದಿ ಹಾಗೂ ಸಮಾನತೆಯಿಂದ ಬಾಳ್ವೆ ಮಾಡುವುದನ್ನು ಕಲಿಸಿಕೊಡುತ್ತದೆ ಎಂದರು.

ಪ್ರಾಂಶುಪಾಲ ಡಾ.ಕೆ.ಬಾಷಾ ಮಾತನಾಡಿ, ಕನ್ನಡ ಸಾಹಿತ್ಯದ ಉಗಮದಿಂದ ಪ್ರಸ್ತುತ ಕಾಲಮಾನದವರೆಗೆ ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ಕನ್ನಡ ಸಾಹಿತ್ಯವು ತನ್ನದೇ ಆದ ವಿಶಿಷ್ಪ ಕೊಡುಗೆಯನ್ನು ನೀಡಿದೆ. ಜಾಗತಿಕ ಪ್ರಪಂಚದ ನಾಗಾಲೋಟದಲ್ಲಿ ಉದ್ಯೋಗಾ ಧರಿತ ವತ್ತಿಪರ ಶಿಕ್ಷಣದತ್ತ ಅಧ್ಯಾಪಕರು ಹಾಗೂ ಪೋಷಕರು ಹೆಚ್ಚಾಗಿ ಒಲವು ತೋರಿಸುತ್ತಿರುವುದರಿಂದ ಅದ್ಭುತವಾದ ಕನ್ನಡ ಸಾಹಿತ್ಯದ ಪರಿಚಯವನ್ನು ಮರೆಯುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.
ಉಪನ್ಯಾಸ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ