ಆ್ಯಪ್ನಗರ

ಜಿಲ್ಲೆಯೆಲ್ಲೆಡೆ ಸಂಕ್ರಾಂತಿ ಸಂಭ್ರಮ

ಹಾಸನ: ನೂತನ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ಜಿಲ್ಲೆಯಲ್ಲೆಡೆ ಸಂಭ್ರಮ ಮನೆ ಮಾಡಿತ್ತು.

Vijaya Karnataka 15 Jan 2019, 5:00 am
ಹಾಸನ: ನೂತನ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ಜಿಲ್ಲೆಯಲ್ಲೆಡೆ ಸಂಭ್ರಮ ಮನೆ ಮಾಡಿತ್ತು.
Vijaya Karnataka Web hassan preparation makara sankranthi festival
ಜಿಲ್ಲೆಯೆಲ್ಲೆಡೆ ಸಂಕ್ರಾಂತಿ ಸಂಭ್ರಮ


ಹಬ್ಬದ ಮುನ್ನ ದಿನವಾದ ಸೋಮವಾರ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿತ್ತು. ಎಲ್ಲೆಲ್ಲೂ ಎಳ್ಳು-ಬೆಲ್ಲ, ಕಬ್ಬು, ಕೊಬ್ಬರಿ ಮಾರಾಟ ಕಂಡು ಬಂತು. ನಗರ ಪ್ರದೇಶದೊಂದಿಗೆ ಗ್ರಾಮಾಂತರ ಪ್ರದೇಶಗಳಲ್ಲೂ ಹಬ್ಬದ ಸಿದ್ಧತೆ ಜೋರಾಗಿತ್ತು. ನಗರ ಪ್ರದೇಶಗಳಲ್ಲಿ ಎಳ್ಳು ಬೆಲ್ಲ ಹಂಚುವುದು ವಿಶೇಷ. ಗ್ರಾಮೀಣ ಭಾಗಗಳಲ್ಲಿ ಆಚರಣೆಯೇ ವಿಭಿನ್ನ. ಸುಗ್ಗಿ ಮುಗಿದು ಧವಸ- ಧಾನ್ಯ ಮನೆ ತುಂಬಿಸಿಕೊಂಡು ಪೂಜೆ ಸಲ್ಲಿಸುವ ಆಚರಣೆ ಹಲವೆಡೆ ಇದೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಸಂಕ್ರಾಂತಿ ಆಚರಣೆಗೆ ವಿಶೇಷ ಸ್ಥಾನವಿದೆ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು ಎಂಬ ಹಿರಿಯ ನಾಣ್ನುಡಿಯಂತೆ ಸಾಂಪ್ರದಾಯಿಕ ಹಾಗೂ ಅರ್ಥಗರ್ಭಿತವಾಗಿ ಹಬ್ಬ ಆಚರಿಸಲು ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ಬೆಲೆ ಏರಿಕೆ ಬಿಸಿ: ಚುಮು ಚುಮು ಚಳಿಯಲ್ಲೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟಿತ್ತು. ಕಳೆದ ವರ್ಷ ಕೆಜಿಗೆ 120 ರೂ ಇದ್ದ ಎಳ್ಳು ಈ ವರ್ಷ 220 ರಿಂದ 240 ರವರೆಗೆ ಆಗಿದೆ. ಕಬ್ಬು 50, ಅವರೆಕಾಯಿ 45-50, ಸಕ್ಕರೆ ಅಚ್ಚು 120, ಬೆಲ್ಲ ಕೆಜಿಗೆ 50 ರೂ.,ಬಾಳೆಹಣ್ಣು 40-50, ಸೇಬು 100-120, ಕಿತ್ತಳೆ- 60ರಿಂದ 100, ಸೇವಂತಿಗೆ ಹೂ 30, ಮಾರಿಗೋಲ್ಡ್‌ ಸೇವಂತಿಗೆ 60 ರೂ. ದರವಿತ್ತು.

ಸಂಪ್ರದಾಯ: ಸಂಭ್ರಮದಿಂದ ಮನೆ, ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಎಳ್ಳುಬೆಲ್ಲವನ್ನು ತಯಾರಿಸಿ ಸಂಬಂಧಿಕರು, ಸ್ನೇಹಿತರಿಗೆ ಎಳ್ಳುಹಂಚುವುದು ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ನೀಡುವುದುಂಟು.

ರೈತರಿಗೆ ಸುಗ್ಗಿ (ಸುಗ್ಗಿ) ಅಥವಾ ಸುಗ್ಗಿಯ ಹಬ್ಬ. ಈ ಮಂಗಳಕರ ದಿನದಂದು, ಹೆಣ್ಣುಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಹತ್ತಿರದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ''ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ'' ಎಂದು ಹೇಳಿಕೊಳ್ಳುತ್ತಾರೆ. ಪ್ಲೇಟ್‌ ಸಹ ಕಬ್ಬಿನ ತುಂಡು ವಿವಿಧ ಆಕಾರಗಳನ್ನು ಸಕ್ಕರೆ ಅಚ್ಚುಗಳನ್ನು ಇಟ್ಟು ವಿತರಿಸುತ್ತಾರೆ.

ನವ ವಧು ವರರು ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಂಭ್ರಮ. ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಪದ್ಧತಿಯಾಗಿದೆ. ಅವುಗಳನ್ನು ''ಕಿಚ್ಚು ಹಾಯಿಸುವುದು'' ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.
--------------
ಸಂಕ್ರಾಂತಿಗೆ ಈ ಬಾರಿ ಎಲ್ಲ ಪದಾರ್ಥಗಳ ಬೆಲೆಯೂ ದುಪ್ಪಟ್ಟು ಆಗಿದೆ. ಕೊಬ್ಬರಿ, ಎಳ್ಳು, ಬೆಲ್ಲ, ಎಣ್ಣೆ ಹೀಗೆ ಪ್ರತಿಯೊಂದರ ಬೆಲೆ ಹೆಚ್ಚಳವಾಗಿದೆ. ಶ್ರೀಮಂತರಿಗೆ ತೊಂದರೆ ಇಲ್ಲ ಬಡವರು ಯೋಚನೆ ಮಾಡಬೇಕಾಗುತ್ತದೆ.
- ವನಜಾಕ್ಷಿ, ಗೃಹಿಣಿ ಹಾಸನ
----------
ವರ್ಷದಿಂದ ವರ್ಷಕ್ಕೆ ಬೆಲೆ ಏರಿಕೆ ಸಹಜ. ಎಳ್ಳು, ಕೊಬ್ಬರಿ ನಿತ್ಯ ಬಳಸದವರು ಅಪರೂಪಕ್ಕೆ ಬೆಲೆ ಕೇಳಿ ದುಬಾರಿ ಎನ್ನುತ್ತಾರೆ. ಹಬ್ಬದ ವೇಳೆ 10ರಿಂದ 20 ರೂ.ಹೆಚ್ಚಳ ಸಹಜ.
- ಮಹಾವೀರ್‌, ವರ್ತಕ ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ