ಆ್ಯಪ್ನಗರ

ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೂಸಾ ತಂಡ ಭೇಟಿ

ಚನ್ನರಾಯಪಟ್ಟಣ: ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಮಧ್ಯವರ್ತಿಗಳ ಮೊರೆಹೋಗಬೇಡಿ. ಯಾರಿಗೂ ಹಣ ನೀಡಬೇಡಿ ಎಂದು ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಹೇಳಿದರು.

Vijaya Karnataka 28 Dec 2018, 5:00 am
ಹಾಸನ: ನಗರದ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬುಧವಾರ ಕಾಲೇಜು ಶಿಕ್ಷ ಣ ಇಲಾಖೆಯ ರೂಸಾ (ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆ )ಅನುದಾನ ಸಮಿತಿಯ ತಂಡ ಭೇಟಿ ನೀಡಿ ಕಾಲೇಜಿನ ಪ್ರಗತಿ ಪರಿಶೀಲನೆ ಮಾಡಿದರು.
Vijaya Karnataka Web hassan rusa team visit first grade college
ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೂಸಾ ತಂಡ ಭೇಟಿ


ರಾಜ್ಯ ಸರಕಾರದ ಉನ್ನತ ಶಿಕ್ಷ ಣ ಇಲಾಖೆಯ ಕಾಲೇಜು ಶಿಕ್ಷ ಣ ಇಲಾಖೆಯಿಂದ ಜಿಲ್ಲೆಯ ಆಯ್ದ ಕಾಲೇಜಿಗೆ ರಾಷ್ಟ್ರೀಯ ಉಚ್ಛತರ ಶಿಕ್ಷ ಣ ಅಭಿಯಾನ (ರೂಸಾ) ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಲೇಜುಗಳಲ್ಲಿ ಅನುದಾನ ಬಳಕೆ, ಕೈಗೊಂಡಿರುವ ಕಾಮಗಾರಿ ಹಾಗೂ ಇನ್ನಿತರ ಅಭಿವೃದ್ಧಿ ಹಾಗೂ ಶೈಕ್ಷ ಣಿಕ ಪ್ರಗತಿಯ ಬಗ್ಗೆ ತಂಡದ ಸದಸ್ಯರು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು. ಸಮಿತಿಯ ಅಧ್ಯಕ್ಷ ಪ್ರೊ.ಕೊಟ್ರೇಶಪ್ಪ, ಸದಸ್ಯ ಡಾ.ನಾಗೇಶ್‌ ಬಾಬು ಹಾಗೂ ಸಂಯೋಜಕ ಪ್ರೊ.ವೆಂಕಟರಾಮ್‌ ಭಟ್‌ ಅವರು ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಶೈಕ್ಷ ಣಿಕ ಪ್ರಗತಿ ವೀಕ್ಷಿಸಿದರು.

ಈಗಾಗಲೇ ಅನುದಾನದಲ್ಲಿ ಕಾಲೇಜಿನಲ್ಲಿ ನೂತನ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗುತ್ತಿದೆ. ಕಾಲೇಜಿನ 35 ಕೊಠಡಿಗಳಿಗೆ ಪ್ರೊಜೆಕ್ಟರ್‌, ಹೊಸ ಲ್ಯಾಪ್‌ಟಾಪ್‌ಗಳನ್ನು ನೀಡಲಾಗಿದೆ. ಲ್ಯಾಪ್‌ಟಾಪ್‌ ಮೂಲಕ ಪಿಪಿಟಿ ಬಳಸಿ ಮಕ್ಕಳಿಗೆ ಪಠ್ಯ ಬೋಧನೆ ಮಾಡುತ್ತಿರುವುದರ ಕುರಿತು ಮಾಹಿತಿ ಪಡೆದರು. ಇದಲ್ಲದೇ ಕಾಲೇಜಿಗೆ ಇದುವರೆಗೂ ಬಿಡುಗಡೆಯಾಗಿರುವ ಅನುದಾನ ಹಾಗೂ ಅವಶ್ಯಕತೆ ಇರುವ ಅನುದಾನದ ಬಗ್ಗೆಯೂ ಮಾಹಿತಿ ಕಲೆ ಹಾಕಿದ ತಂಡ ಕಾಲೇಜಿಗೆ ಮುಂದಿನ ದಿನಗಳಲ್ಲಿ ಬೇಕಾಗಿರುವ ಸೌಲಭ್ಯಗಳ ಪಟ್ಟಿಯನ್ನು ಪಡೆದುಕೊಂಡಿತು.

ಪ್ರಾಂಶುಪಾಲ ಪ್ರೊ.ಮೋಹನ್‌ ಕುಮಾರ್‌, ರೂಸಾ ಕಾಲೇಜು ಸಮಿತಿ ಸಂಚಾಲಕ ಜಗದೀಶ್‌, ಅಧ್ಯಾಪಕರಾದ ಹರೀಶ್‌, ಎಂ.ಕೆ.ಮಹೇಶ್‌, ರಾಜಶೇಖರ್‌, ದೈಹಿಕ ಶಿಕ್ಷ ಣ ನಿರ್ದೇಶಕ ಯೋಗೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ