ಆ್ಯಪ್ನಗರ

ಸಕಲೇಶಪುರ: ಪೊಲೀಸ್‌ ಭದ್ರತೆಯಲ್ಲಿ ಟಿಪ್ಪು ಜಯಂತಿ ದುರದೃಷ್ಟಕರ

ಸಕಲೇಶಪುರ: ದೇಶದ ಒಬ್ಬ ಸ್ವಾತಂತ್ರ್ಯ ಹೋರಾಟಗಾರನ್ನು ಪೊಲೀಸ್‌ ಬಿಗಿ ಭದ್ರತೆಯಲ್ಲಿ ನೆನೆಯುವುದು ದುರದೃಷ್ಟಕರ ಎಂದು ಉಪನ್ಯಾಸಕ ರೋಹಿತ್‌ ಹೇಳಿದರು.

Vijaya Karnataka 11 Nov 2018, 5:00 am
ಸಕಲೇಶಪುರ: ದೇಶದ ಒಬ್ಬ ಸ್ವಾತಂತ್ರ್ಯ ಹೋರಾಟಗಾರನ್ನು ಪೊಲೀಸ್‌ ಬಿಗಿ ಭದ್ರತೆಯಲ್ಲಿ ನೆನೆಯುವುದು ದುರದೃಷ್ಟಕರ ಎಂದು ಉಪನ್ಯಾಸಕ ರೋಹಿತ್‌ ಹೇಳಿದರು.
Vijaya Karnataka Web hassan sakaleshapura tippu jayanthi police protection unsatcifaction
ಸಕಲೇಶಪುರ: ಪೊಲೀಸ್‌ ಭದ್ರತೆಯಲ್ಲಿ ಟಿಪ್ಪು ಜಯಂತಿ ದುರದೃಷ್ಟಕರ


ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿ ಮೈಸೂರು ಹುಲಿ ಎನಿಸಿಕೊಂಡಿದ್ದವರು ಟಿಪ್ಪು ಸುಲ್ತಾನ್‌. ಆತನ ದೇಶಪ್ರೇಮ, ತ್ಯಾಗ ಹಾಗೂ ಜನಪರ ಕಾರ‍್ಯಗಳನ್ನು ನೆನೆಯಬೇಕಿದೆ. ಇಂತಹ ವ್ಯಕ್ತಿಯ ಜಯಂತಿಯನ್ನು ಪೊಲೀಸ್‌ ಭದ್ರತೆಯಲ್ಲಿ ನಡೆಸುತ್ತಿರುವುದು ವಿಪರಾರ‍ಯಸ ಎಂದು ವಿಷಾದಿಸಿದರು.

ಶಾಸಕ ಎಚ್‌.ಕೆ.ಕುಮಾರಸ್ವಾಮಿ ಆಲೂರು ತಾಲೂಕಿನಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರಿಂದ ತಡವಾಗಿ ಆಗಮಿಸಿದರು. ಜಿಪಂ ಸದಸ್ಯೆ ಉಜಾರಜ್ವಿ ಸುದರ್ಶನ್‌, ಮಸೀದಿ ಸಮಿತಿ ಅಧ್ಯಕ್ಷ ನಜೀಬ್‌ ಅಕ್ರಂ, ಪುರಸಭೆ ಸದಸ್ಯ ಯಾದ್‌ಗಾರ್‌ ಇಬ್ರಾಹಿಂ, ಸಮೀರ್‌ ಖಾನ್‌, ಇಸ್ರಾರ್‌ ಅಹಮದ್‌, ಆನೆಮಹಾಲ್‌ ಗ್ರಾಪಂ ಅಧ್ಯಕ್ಷ ಹಸೆನಾರ್‌, ತಾಪಂ ಉಪಾಧ್ಯಕ್ಷ ಉದಯ್‌, ತಹಸೀಲ್ದಾರ್‌ ನಾಗಭೂಷಣ್‌, ತಾಪಂ ಇಒ ಪುನೀತ್‌, ಪುರಸಭೆ ಮುಖ್ಯಾಧಿಕಾರಿ ವಿಲ್ಸನ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ