ಆ್ಯಪ್ನಗರ

ಹೆಮ್ಮೆಯ ಸೈನಿಕರೇ ನಿಮಗೊಂದು ಸಲಾಂ

ಹಾಸನ: ದೇಶದ ವೀರಯೋಧರ ಸೇವೆಯನ್ನು ಸ್ಮರಿಸುವ ಹಾಗೂ ಆ ಮೂಲಕ ಯುವಜನಾಂಗವನ್ನು ಪ್ರೇರೆಪಿಸುವ ನಿಟ್ಟಿನಲ್ಲಿ ನಗರದ ಕಲಾಭವನದಲ್ಲಿ ವಿಜಯ ಇಂಗ್ಲೀಷ್‌ ಶಾಲೆ ಏರ್ಪಡಿಸಿದ್ದ ಕಲರವ ವಿನೂತನ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.

Vijaya Karnataka 21 Dec 2018, 5:00 am
ಹಾಸನ: ದೇಶದ ವೀರಯೋಧರ ಸೇವೆಯನ್ನು ಸ್ಮರಿಸುವ ಹಾಗೂ ಆ ಮೂಲಕ ಯುವಜನಾಂಗವನ್ನು ಪ್ರೇರೆಪಿಸುವ ನಿಟ್ಟಿನಲ್ಲಿ ನಗರದ ಕಲಾಭವನದಲ್ಲಿ ವಿಜಯ ಇಂಗ್ಲಿಷ್‌ ಶಾಲೆ ಏರ್ಪಡಿಸಿದ್ದ ಕಲರವ ವಿನೂತನ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.
Vijaya Karnataka Web hassan soldiers school day felicication
ಹೆಮ್ಮೆಯ ಸೈನಿಕರೇ ನಿಮಗೊಂದು ಸಲಾಂ


ಶಾಲಾ ವಾರ್ಷಿಕೋತ್ಸವ ಎಂದಾಕ್ಷಣ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಎಂಬುದರ ಜತೆಗೆ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಸದುದ್ದೇಶದಿಂದ 25 ನಿವೃತ್ತ ಸೈನಿಕರು ಹಾಗೂ ಒಂಬತ್ತು ಹಾಲಿ ಸೈನಿಕರು ಅಥವಾ ಅವರ ಪತ್ನಿಯರನ್ನು ಸಾಮೂಹಿಕವಾಗಿ ಗೌರವಿಸುವ ಮೂಲಕ ದೇಶದ ಹೆಮ್ಮೆಯ ಸೈನಿಕರೇ ನಿಮಗೊಂದು ಸಲಾಂ ಎಂದು ಶಿಕ್ಷಕರು, ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕರು ಸೇರಿ ಎಲ್ಲರೂ ಎದ್ದುನಿಂತು ಗೌರವ ಸೂಚಿಸಿದರು.

ಶಾಲೆ ಆಡಳಿತಾಧಿಕಾರಿ ತಾರಾಎಸ್‌ ಸುಬ್ಬಸ್ವಾಮಿ ಮಾತನಾಡಿ, ಜೀವದ ಹಂಗನ್ನು ತೊರೆದು ಸೈನಿಕರು ಗಡಿಯಲ್ಲಿ ಕಾಯುತ್ತಿರುವ ಪರಿಣಾಮವಾಗಿಯೇ ನಾವಿಂದು ಇಲ್ಲಿ ನೆಮ್ಮದಿಯಾಗಿದ್ದೇವೆ. ಸೈನಿಕ ಹಾಗೂ ರೈತರ ಸೇವೆ ವರ್ಣಿಸಲು ಅಸಾಧ್ಯ ಈ ಕಾರಣದಿಂದಲೇ ಅವರನ್ನು ಗೌರವಿಸುವುದಷ್ಟೇ ಅಲ್ಲ ಶಾಲೆಯಲ್ಲಿ ಪ್ರತಿವರ್ಷ ಇಬ್ಬರು ಸೈನಿಕರ ಮಕ್ಕಳಿಗೆ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುತ್ತಾ ಬರಲಾಗಿದೆ ಎಂದು ತಿಳಿಸಿದರು.

ನಿವೃತ್ತ ಕರ್ನಲ್‌ ನಟೇಶ್‌ ಮಾತನಾಡಿ,ರಸ್ತೆ ಅಪಘಾತದಲ್ಲಿ ದೇಶದಾದ್ಯಂತ ವಾರ್ಷಿಕ 1.50 ಲಕ್ಷ ಜನ ಮೃತಪಟ್ಟರೆ ,ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡು ಹುತಾತ್ಮರಾಗುವರ ಪ್ರಮಾಣ ಅತ್ಯಂತ ಕಡಿಮೆ. ಅಷ್ಟು ಸುರಕ್ಷಿತವಾಗಿ ,ಮುನ್ನೆಚ್ಚರಿಕೆಯಿಂದ ನಮ್ಮ ಸೈನಿಕರು ದೇಶ ಕಾಯುತ್ತಿದ್ದಾರೆ. ಸೇನೆಗೆ ಸೇರಲು ಯಾವ ಹಿಂಜರಿಕೆಯೂ ಬೇಡ. ಇಲ್ಲಿನ ಪ್ರೊಪೆಸರ್‌,ಎಂಜಿನಿಯರ್‌ಗಳಿಗೆ ದೊರೆಯುವಷ್ಟೇ ವೇತನ ಸೇನೆಯಲ್ಲಿಯೂ ದೊರೆಯುತ್ತದೆ ಎಂದು ತಿಳಿಸಿದರು. ದೇಶಸೇವೆಗೆ ಹೋದವರೆಲ್ಲ ಸಾಯಲ್ಲ ನಾವೆಲ್ಲ ದೇಶದ ಮೂಲೆ, ಮೂಲೆಯಲ್ಲಿ ಸೇವೆಮಾಡಿ ಬದುಕಿ ಬಂದಿದ್ದೇವೆ ಎಂದು ತಮ್ಮ ಅನುಭವ ಮಾತಗಳನ್ನಾಡಿ ವಿದ್ಯಾರ್ಥಿಗಳಿಗೆ ದೇಶಸೇವೆಯ ಬಗ್ಗೆ ಅರಿವು ಮೂಡಿಸಿದರು.

ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಫಣಿರಾಜ್‌ ಮಾತನಾಡಿ, ಸೇನೆಯಲ್ಲಿ ಇರುವವರು ಜಾತಿ,ಮತದಿಂದ ದೂರವಿದ್ದು, ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಿಕೊಂಡಿರುತ್ತೇವೆ. ಎಲ್ಲ ಹಬ್ಬಗಳನ್ನು ಸೇರಿ ಆಚರಿಸುತ್ತೇವೆ ಅಂತಹ ಭಾವನೆಯಲ್ಲಿ ಮೂಡಿಸಿಕೊಳ್ಳುವುದು ಅಗತ್ಯ. ಮಕ್ಕಳು ತಿಳಿಯಾದ ನೀರಿನಂತೆ ಜಾತಿ,ಧರ್ಮ ಎಂದು ಕಲುಷಿತಗೊಳಿಸಬೇಡಿ ಎಂದು ಮನವಿ ಮಾಡಿದರು. ಸುಬೇದಾರ್‌ ಬೆಟ್ಟೇಗೌಡ, ಮಂಜೇಗೌಡ, ಗಿರೀಶ್‌ ಸೇರಿದಂತೆ ಮಾಜಿ ಸೈನಿಕರನ್ನು ಗೌರವಿಸಲಾಯಿತು. ಮಳಲಿಗೌಡ, ಸುಬ್ಬಸ್ವಾಮಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ