ಆ್ಯಪ್ನಗರ

ಅವನತಿ ಹಾದಿಯಲ್ಲಿ ಪುಸ್ತಕ ಸಂಸ್ಕೃತಿ

ಅವನತಿ ಹಾದಿಯಲ್ಲಿ ಪುಸ್ತಕ ಸಂಸ್ಕೃತಿ * ಸಾಹಿತಿ ಡಾಸಿಪಿಕೃಷ್ಣಕುಮಾರ್‌ ವಿಷಾದ --------- ಎಎಲ್‌...

Vijaya Karnataka 26 Jun 2018, 5:00 am
ಶ್ರವಣಬೆಳಗೊಳ (ಚಾವುಂಡರಾಯಮಂಟಪ): ಪುಸ್ತಕ ಸಂಸ್ಕೃತಿ ಅವನತಿಯ ಹಾದಿಯಲ್ಲಿದೆ. ವಿದ್ಯುನ್ಮಾನ ಮಾಧ್ಯಮಗಳು ಪುಸ್ತಕ ಸಂಸ್ಕೃತಿಗೆ ಸಮಾನವಲ್ಲ. ಇದೊಂದು ಮೂರ್ತ ಸಂಸ್ಕೃತಿಯಾಗಿದೆ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌ ಹೇಳಿದರು.
Vijaya Karnataka Web hassan sravanabelagola halagannada sahitya sammelana book relese by cpk
ಅವನತಿ ಹಾದಿಯಲ್ಲಿ ಪುಸ್ತಕ ಸಂಸ್ಕೃತಿ


ಸಮ್ಮೇಳನದಲ್ಲಿ 18 ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಹಿಂದಿಗಿಂತಲೂ ಮಿಗಿಲಾಗಿ ಪುಸ್ತಕ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ ಬೆಳೆಸಬೇಕಾಗಿದೆ. ಸಂಸ್ಕೃತಿ ನಮ್ಮ ಬದುಕಿಗೆ ನೇರವಾಗಿ ಸಂಬಂಧಿಸಿದ್ದಾಗಿದ್ದು ಅದರ ಮೇಲೂ ಬೆಳಕು ಚೆಲ್ಲಬೇಕಿದೆ. ಪುಸ್ತಕ ಸಂಸ್ಕೃತಿ ಭುವನದ ಭಾಗ್ಯ. ಇದು ಅತಿಶಯವಾಗಬೇಕು, ನವ ಸಮಾಜ ನಿರ್ಮಾಣದ ಇಟ್ಟಿಗೆಗಳಾಗಬೇಕು. ಸಾಹಿತ್ಯದ ಬೇರುಗಳು ಹಳೆಗನ್ನಡದಲ್ಲಿದ್ದು ಈ ಬೇರು ಮತ್ತು ಮಣ್ಣನ್ನು ನೋಡಬೇಕೇ ವಿನಹಃ ಕೇವಲ ವೃಕ್ಷ ವನ್ನಲ್ಲ ಎಂದರು.

ದೀರ್ಘವಾದ ಪುಸ್ತಕ ಪರಂಪರೆಯನ್ನು ಉಳಿಸುವ ಕೆಲಸ ಆಗಬೇಕು. ಅದಕ್ಕೆ ಮಹತ್ವ ನೀಡಿ ಗೌರವದಿಂದ ಕಾಣಬೇಕು. ಹಳೆಗನ್ನಡ ಸಾಹಿತ್ಯ ಕ್ಷೇತ್ರಕ್ಕೆ ಶಿಖರಪ್ರಾಯವಾಗಿರುವುದು ಜೈನ ಧರ್ಮದಿಂದ ಎಂದು ವಿದ್ವಾಂಸರಾದ ಮಲ್ಲೇಪುರಂ ಜಿ.ವೆಂಕಟೇಶ್‌ ಹೇಳಿದರು.

ಬಿಡುಗಡೆಗೊಂಡ ಪುಸ್ತಕಗಳು: ಎಲ್‌.ಅನಂತರಂಗಾಚಾರ್‌ ಗದ್ಯಾನುವಾದದ ಪಂಪಮಹಾಕವಿ ವಿರಚಿತ ಪಂಪಭಾರತ. ಕೆ.ಎಲ್‌.ನರಸಿಂಹಶಾಸ್ತ್ರಿ ಗದ್ಯಾನುವಾದದ ಆದಿಪುರಾಣ. ಡಾ.ರಾಮಲಿಂಗಪ್ಪ ಟಿ.ಬೇಗೂರು ಅವರ ಪ್ರಾಚೀನ ಕಾವ್ಯ ಸಂಪುಟ. ಡಾ.ಎಚ್‌.ಎಲ್‌.ಪುಷ್ಪ, ಡಾ.ಡಿ.ಸಿ.ಗೀತಾ ಅವರ ಹೊಸಗನ್ನಡ ಕಾವ್ಯಮಂಜರಿ. ಡಾ.ಗಾಯತ್ರಿನಾವಡ ಅವರ ಹೊಸಗನ್ನಡ ಕಥಾವಲ್ಲರಿ, ಡಾ.ನಟರಾಜ ಬೂದಾಳ್‌ ಅವರ ಕನ್ನಡ ಸಾಹಿತ್ಯ ಮಂಥನ, ಡಾ.ಗಾಯತ್ರಿ ನಾವಡ ಅವರ ಜನಪದ ಸಾಹಿತ್ಯ ಸಂಚಯ, ಡಾ.ಎಂ.ಚಿದಾನಂಮೂರ್ತಿ ಅವರ ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ, ಡಾ.ರಾಮಲಿಂಗಪ್ಪ ಟಿ.ಬೇಗೂರು ಅವರ ನಡುಗನ್ನಡ ಸಾಹಿತ್ಯ ಸಂಗಮ, ಡಾ.ಯಲ್ಲಪ್ಪ ಹಿಮ್ಮಡಿ ಅವರ ಆಧುನಿಕ ಗದ್ಯ ಸಾಹಿತ್ಯ, ಡಾ.ಕುಮಾರಚಲ್ಯ ಅವರ ವ್ಯಾಕರಣ ಮತ್ತು ಛಂದಸ್ಸು, ಡಾ.ರೇಖಾವಸಂತ, ಡಾ.ಲೋಲಾಕ್ಷಿ ಅವರ ಕನ್ನಡ ಸಾಹಿತ್ಯ ಸಮಾಗಮ, ಪ್ರೊ.ಜಿ.ಅಬ್ದುಲ್‌ ಬಷೀರ್‌ ಅವರ ವ್ಯಾವಹಾರಿಕ ಕನ್ನಡ ಮಾತು ಮತ್ತು ಬರಹ, ಡಾ.ಎಚ್‌.ಎನ್‌.ಮುರಳೀಧರ, ಪ್ರೊ.ಕೆ.ಎಸ್‌.ಮಧುಸೂಧನ ಅವರ ತಿಳಿಕನ್ನಡ 1 ಮತ್ತು 2, ಡಾ.ಸೋಮಶೇಖರಗೌಡ ಅವರ ಭಾಷೆ ರಚನೆ ಬಳಕೆ, ಡಾ.ಹಾ.ಮ.ನಾಗಾರ್ಜುನ ಅವರ ಕೃಷಿ ಮತ್ತು ಸಹಕಾರ ಸಾಹಿತ್ಯ ಹಾಗೂ ಡಾ.ಬಾ.ರಾ.ಗೋಪಾಲ ಅವರ ಕರ್ನಾಟಕದ ಕಲೆಗಳು ವಾಸ್ತು.

ಸಮ್ಮೇಳನದ ಅಧ್ಯಕ್ಷ ರಾದ ಡಾ.ಷ.ಶೆಟ್ಟರ್‌, ಚಾರುಕೀರ್ತಿಭಟ್ಟಾರಕ ಸ್ವಾಮೀಜಿ, ಹಂ.ಪ.ನಾಗರಾಜಯ್ಯ, ಶಾಸಕ ಸಿ.ಎನ್‌.ಬಾಲಕೃಷ್ಣ, ಡಾ.ಮಲ್ಲೇಪುರಂ ಜಿ.ವೆಂಕಟೇಶ್‌, ಡಾ.ಮನುಬಳಿಗಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ