ಆ್ಯಪ್ನಗರ

ಅನುದಾನ ಸಂಪೂರ್ಣ ಬಳಕೆಗೆ ಸೂಚನೆ

ಹಾಧಿಸನ ತಾಧಿಲೂಕು ಪಂಚಾಧಿಯಿತಿ ಪ್ರಧಿಗತಿ ಪಧಿರಿಧಿಶೀಧಿಲನಾ ಸಧಿಭೆ ವಿಕ ಸುದ್ದಿಲೋಕ ಹಾಸನ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬರುವ ಹಣವನ್ನು ...

Vijaya Karnataka 29 Dec 2019, 5:00 am
ಹಾಸನ: ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬರುವ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡಿ ಪ್ರಗತಿ ಸಾಧಿಸುವಂತೆ ಶಾಸಕ ಎಚ್‌.ಡಿ ರೇವಣ್ಣ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web hassan taluk panchayath meeting
ಅನುದಾನ ಸಂಪೂರ್ಣ ಬಳಕೆಗೆ ಸೂಚನೆ


ನಗರದ ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅಧಿವರು, ಅಧಿಕಾರಿಗಳು ಸಣ್ಣ ಸಮಸ್ಯೆಗಳ ಕಾರಣಗಳಿಗಾಗಿ ಅಭಿವೃಧಿದ್ಧಿ ಕೆಲಸಗಳನ್ನು ಮೊಧಿಟಧಿಕುಧಿಗೊಧಿಳಿಧಿಸಧಿಬಾಧಿರಧಿದು. ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಮಳೆಗಾಲ ಆರಂಭಕ್ಕೂ ಮುನ್ನ ರೈತರಿಗೆ ಉಪಯುಕ್ತವಾಗುವ ಗಿಡಗಳನ್ನು ಕೊಟ್ಟು ಅವುಗಳನ್ನು ಬೆಳೆಸುವಂತೆ ಮಾಹಿತಿ ನೀಡಿ ಅರಿವು ಮೂಡಿಸಿ ಎಂದು ತಿಳಿಸಿದರು.

ಬೇಸಿಗೆಯಲ್ಲಿಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆಯನ್ನು ಅರಿತು ಈಗಿನಿಂದಲೇ ಸೂಕ್ತ ತಯಾರಿ ಮಾಡಿಧಿಕೊಧಿಳ್ಳಧಿಬೇಧಿಕು. ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಧಿಕು. ತಾಲೂಕು ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿಸಮಸ್ಯೆಗಳಿದ್ದಲ್ಲಿಅಧಿಕಾರಿಗಳು ಗಮನಕ್ಕೆ ತಂದು ಪರಿಹರಿಸಿಕೊಳ್ಳಧಿಬೇಧಿಕು. ಕೆಪಿಟಿಸಿಎಲ್‌ಗೆ ಸಂಬಂಧಿತ ಸಮಸ್ಯೆಗಳು ಅಥವಾ ದೂರುಗಳಿದ್ದಲ್ಲಿತುರ್ತಾಗಿ ಕ್ರಮ ವಹಿಸದಿದ್ದಲ್ಲಿ, ಸಂಭವಿಸುವ ಅನಾಹುತಗಳಿಗೆ ಪಿಡಿಒ ಹಾಗೂ ಅಧಿಕಾರಿಗಳೇ ಜವಾಬ್ದಾರರಧಿನ್ನಾಗಿ ಮಾಧಿಡಧಿಲಾಧಿಗುಧಿತ್ತದೆ ಎಂದು ಎಚ್ಚರಿಸಿದರು.

ದುದ್ದ ಹಾಗೂ ಶಾಂತಿಗ್ರಾಮ ಹೋಬಳಿ ಕುಡಿಯುವ ನೀರಿಗೆ 206 ಕೋಟಿ ರೂ ವೆಚ್ಚದ ಕಾಮಗಾರಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ವರದಿ ನೀಡುವಂತೆ ಪಿಆರ್‌ಇಡಿ. ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮಗಳ ಪೆಟ್ಟಿಗೆ ಅಂಗಡಿಗಳಿಂದ, ರಾಷ್ಟ್ರೀಯ ಹೆದ್ದಾರಿವರೆಗೆ ನಾಯಿಕೊಡೆಗಳಂತೆ ಹಬ್ಬಿರುವ ಅನಧಿಕೃತ ಮದ್ಯ ಮಾರಾಟಗಾರರ ವಿರುದ್ದ ಹಾಗೂ ಮುಂಜಾನೆಯೇ ತೆರೆಯುವ ಅಧಿಕೃತ ಮಧ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಸ್‌.ಎಸ್‌.ಎಲ್‌.ಸಿ. ಫಲಿತಾಂಶದಲ್ಲಿರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವ ಜಿಲ್ಲೆಯ ಹೆಗ್ಗಳಿಕೆಯನ್ನು ಈ ಬಾರಿಯೂ ಉಳಿಸಿಕೊಳ್ಳಲು ಶ್ರಮಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಅಗತ್ಯ ಮೂಲ ಸೌಕರ್ಯಗಳನ್ನು ಶೀಘ್ರವಾಗಿ ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿರುವ ಸಿ.ಎಸ್‌.ಆರ್‌. ನಿಧಿಯನ್ನು ನೀಡದಿರುವ ಕಾರ್ಖಾನೆಗಳ ಬಗ್ಗೆ ಕಾರ್ಮಿಕ ಇಲಾಖಾ ಅಧಿಕಾರಿಗಳು ಗಮನಹರಿಸಬೇಕು. ಪಿಡಿಒಗಳು ಸೇರಿ ಗ್ರಾಮೀಣ ಮಟ್ಟದಲ್ಲಿರುವ ಅಸಂಘಟಿತ ಕೂಲಿಕಾರರನ್ನು ಗುರುತಿಸಿ ಅವರನ್ನು ನೋಂದಣಿ ಮಾಡಿಸಬೇಧಿಕು. ಸಾಮಾಜಿಕ ಭದ್ರತಾ ಸೌಲಭ್ಯಗಳಾದ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಧಿಶೇಧಿಷಧಿಚೇಧಿತಧಿನರ ವೇತನಗಳನ್ನು ಫಲಾನುಭವಿಗಳಿಗೆ ಸರಿಯಾಗಿ ತಲುಪುವಂತೆ ಮಾಡುವ ನಿಟ್ಟಿನಲ್ಲಿತಹಸೀಲ್ದಾರರು ನಿಗಾವಹಿಸುವಂತೆ ಸೂಚಿಸಿದರು.

ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಕಾರ್ಯನಿರ್ವಾಹಣಾಧಿಕಾರಿಗಳ ಹಂತದಲ್ಲಿಸಭೆ ನಡೆಸಿ ಸೂಕ್ತ ದಾಖಲೆಗಳೊಂದಿಗೆ ಅಧಿಕಾರಿಗಳು ಪರಿಶೀಲನಾ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲು ಸೂಧಿಚಿಧಿಸಿಧಿದರು. ಸಭೆಗೆ ಗೈರಾಗುವ ಅಧಿಕಾರಿಗಳಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳುವಂತೆ ನಿಧಿರ್ದೇಧಿಶನ ನೀಧಿಡಿಧಿದರು. ತಾಪಂ ಅಧ್ಯಕ್ಷ ನಿಂಗೇಗೌಡ, ತಹಸೀಲ್ದಾರ್‌ ಮೇಘನ, ತಾಪಂ ಇಒ ಅಧಿಕಾರಿ ಯಶವಂತ್‌ ಸೇಧಿರಿಧಿದಂತೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ