ಆ್ಯಪ್ನಗರ

ಗೃಹಿಣಿ ಸಾವು: ವರದಕ್ಷಿಣೆ ಆರೋಪ

ಹಾಸನ: ಗೃಹಿಣಿಯ ಶವ ಪತಿಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವರದಕ್ಷಿಣೆಗಾಗಿ ಪತಿ ಹಾಗೂ ಕುಟುಂಬದವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತರ ಪೋಷಕರು ಸಕಲೇಶಪುರದ ಪೊಲೀಸರಿಗೆ ದೂರು ನೀಡಿದ್ದಾರೆ.

Vijaya Karnataka 11 Feb 2019, 5:00 am
ಹಾಸನ: ಗೃಹಿಣಿಯ ಶವ ಪತಿಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವರದಕ್ಷಿಣೆಗಾಗಿ ಪತಿ ಹಾಗೂ ಕುಟುಂಬದವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತರ ಪೋಷಕರು ಸಕಲೇಶಪುರದ ಪೊಲೀಸರಿಗೆ ದೂರು ನೀಡಿದ್ದಾರೆ.
Vijaya Karnataka Web hassan woman death dowry harrasment
ಗೃಹಿಣಿ ಸಾವು: ವರದಕ್ಷಿಣೆ ಆರೋಪ


ಸಕಲೇಶಪುರದ ಮಹೇಶ್ವರಿ ನಗರ ಕೆಳಗಿನ ಕೊಪ್ಪಲು ಬಡಾವಣೆಯ ನಿವಾಸಿಯಾದ ಸಿಖಂದರ್‌ ಪತ್ನಿ ಜೀನತ್‌ (ಸಲೀಕಾ) ಮೃತರು. ಫೆ.9 ರಂದು 3.30ರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪತಿಯ ಮನೆಯವರು ಕರೆಮಾಡಿ ತಿಳಿಸಿದರು ಎಂದು ಮೃತಳ ಅಣ್ಣ ರೆಹಮಾನ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಿಖಂದರ್‌ ಮನೆಗೆ ಬಂದು ನೋಡಲಾಗಿ ಜೀನತ್‌ಳ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿತ್ತು. ಆದರೆ, ಜೀನತ್‌ ಆತ್ಮಹತ್ಯೆ ಮಾಡಿಕೊಳ್ಳುವಂತಳಲ್ಲ. ಜೀನತ್‌ ಪತಿ ಸಿಖಂದರ್‌, ಆತನ ತಾಯಿ ಮತ್ತು ಸಹೋದರಿಯರು ವರದಕ್ಷಿಣೆ ದಾಹಕ್ಕೆ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು, ಗೋಣಿಬೀಡು ಗ್ರಾಮದ ರೆಹಮಾನ್‌ ತಂಗಿ ಜೀನತ್‌ (ಸಲೀಕಾ) ಅವರನ್ನು ನಾಲ್ಕು ವರ್ಷಗಳ ಹಿಂದೆ ಸಿಖಂದರ್‌ಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾಗಿ 15 ದಿನಗಳ ಕಾಲ ಅನ್ಯೋನ್ಯವಾಗಿದ್ದು ನಂತರ ಸಿಖಂದರ್‌ ಆತನ ತಾಯಿ, ಸಹೋದರಿಯರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ತರುವಂತೆ ಜೀನತ್‌ಳನ್ನು ತವರು ಮನೆಗೆ ಕಳುಹಿಸಿ ಕೊಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ರೆಹಮಾನ್‌ ಮತ್ತು ಕುಟುಂಬದವರು ಕೂಲಿ ಕೆಲಸ ಮಾಡಿ ಎರಡು ಬಾರಿ ಹಣ ಕೊಟ್ಟು ಕಳುಹಿಸಿದ್ದರು. ಆದರೂ ಸಿಖಂದರ್‌ ಕುಟುಂಬದವರು ಕಿರುಕುಳ ಕೊಡುತ್ತಿದ್ದರಿಂದ ಜಮಾಅತ್‌ ಕಮಿಟಿಯವರು ನಾಲ್ಕೈದು ಬಾರಿ ರಾಜಿ ಪಂಚಾಯಿತಿ ಮಾಡಿದ್ದರೂ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆಪಾದಿಸಿದ್ದಾರೆ. ಸಕಲೇಶಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ