ಆ್ಯಪ್ನಗರ

ಹಾಸ್ಟೆಲ್‌ಗಳಲ್ಲಿ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿ

ಹಾಸನ: ಸರಕಾರ ವಸತಿ ನಿಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರೂ ಮಕ್ಕಳ ರಕ್ಷ ಣೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಂಡು ಹೆಚ್ಚಿನ ಕಾಳಜಿ ನೀಡಬೇಕು ಎಂದು ರಾಜ್ಯ ಮಕ್ಕಳ ಹ್ಕಕುಗಳ ರಕ್ಷ ಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಹೇಳಿದರು.

Vijaya Karnataka 25 Nov 2018, 5:00 am
ಹಾಸನ: ಸರಕಾರ ವಸತಿ ನಿಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದರೂ ಮಕ್ಕಳ ರಕ್ಷ ಣೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಂಡು ಹೆಚ್ಚಿನ ಕಾಳಜಿ ನೀಡಬೇಕು ಎಂದು ರಾಜ್ಯ ಮಕ್ಕಳ ಹ್ಕಕುಗಳ ರಕ್ಷ ಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಹೇಳಿದರು.
Vijaya Karnataka Web hassan youth hostel child rights protection commission childrens safety workshop
ಹಾಸ್ಟೆಲ್‌ಗಳಲ್ಲಿ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿ


ನಗರದ ಯೂತ್‌ ಹಾಸ್ಟೆಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷ ಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ವಸತಿ ನಿಲಯಗಳಲ್ಲಿ ಮಕ್ಕಳ ಸುರಕ್ಷ ತೆ ಮತ್ತು ರಕ್ಷ ಣಾ ನೀತಿ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಲ ವಿದ್ಯಾರ್ಥಿನಿಲಯ ಇಲ್ಲವೇ ವಸತಿ ನಿಲಯಗಳಲ್ಲಿ ಭದ್ರತೆ ಉತ್ತಮವಾಗಿಲ್ಲದೆ ಮಕ್ಕಳು ಸಾವನಪ್ಪಿದ್ದಾರೆ. ಬಾಲಕನೊಬ್ಬ ಮೂತ್ರ ವಿಸರ್ಜನೆಗೆ ಹೊರಟು ಮೂರು ದಿನವಾದರೂ ಪತ್ತೆಯಾಗಲಿಲ್ಲ. ನಂತರದಲ್ಲಿ ಕೃಷಿ ಹೊಂಡದಲ್ಲಿ ಪತ್ತೆಯಾದ. ಹಾಸ್ಟೆಲ್‌ಗಳಲ್ಲಿ ಶೌಚಾಲಯ ಇರಲಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಶೌಚಾಲಯ ಇದ್ದರೂ ಅದಕ್ಕೆ ನೀರು ಇರಲಿಲ್ಲ. ಇಡೀ ದೇಶದ್ಯಾಂತ ಸ್ವಚ್ಛ ಭಾರತ ಅಭಿಯಾನವನ್ನು ಮಾಡಲಾಗುತ್ತಿದೆ. ಆದರೆ, ಹಾಸ್ಟೆಲ್‌ನಲ್ಲಿರುವ ಮಕ್ಕಳು ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಇಲ್ಲಿ ಸಮರ್ಪಕವಾಗಿ ಶೌಚಾಲಯ ವ್ಯವಸ್ಥೆ ಇದ್ದಿದ್ದರೆ ಬಾಲಕ ಮೃತಪಡುತ್ತಿರಲಿಲ್ಲ. ಇದೊಂದು ಪ್ರಕರಣವಾದರೇ, ಇಂತಹದ್ದೇ ಒಂದು ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ವಸತಿ ಶಾಲೆಯ ಮುಂಭಾಗ ಸಿಸಿ ಕ್ಯಾಮೆರಾ ಇದೆ. ಇಲ್ಲಿರುವ ಕಾಂಪೌಂಡ್‌ ಹಿಂದಗಡೆ ಒಡೆದು ಹೊರ ಹೋಗಿ ಒಳ ಬರಲು ಜಾಗ ಮಾಡಲಾಗಿದೆ. ಒಬ್ಬ ಬಾಲಕ ಹೊರ ಹೋಗಿರುವ ಬಗ್ಗೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದೆ. ಆದರೂ ಹುಡುಗ ಕಾಣೆಯಾಗುತ್ತಾನೆ. ಒಂದು ವಾರವಾದರೂ ಆತನ ಬಗ್ಗೆ ಮಾಹಿತಿ ಸಿಗಲಿಲ್ಲ. ಇದರಿಂದ ಪೋಷಕರು ಗಾಬರಿಯಾಗಿ ಪೊಲೀಸ್‌ ಠಾಣೆಗೆ ದೂರು ನೀಡುತ್ತಾರೆ. ತನಿಖೆ ಮಾಡಿದಾಗ ಆ ಹುಡುಗ ಜೊತೆ ಸೇರಿ ದೊಡ್ಡ ಹಳ್ಳದಲ್ಲಿ ಈಜಲು ಹೋಗಿದ್ದ. ಒಬ್ಬನಿಗೆ ಈಜಲು ಬಾರದೆ ಕೊಚ್ಚಿ ಹೋಗಿದ್ದಾನೆ. ದುರಂತ ಎಂದರೇ ಆ ಹುಡುಗನ ಪೋಷಕರು ಇನ್ನು ಬದುಕಿದ್ದಾನೆ ಎಂದುಕೊಂಡಿದ್ದಾರೆ. ನಮ್ಮ ಹಾಸ್ಟೆಲ್‌ ಮತ್ತು ವಸತಿ ನಿಲಯಗಳಲ್ಲಿ ಕೆಲ ಸಮಸ್ಯೆಗಳಿದ್ದು, ಮಕ್ಕಳ ರಕ್ಷ ಣಾ ನೀತಿಗೆ ಸಂಬಂಧಪಟ್ಟ ಹಾಗೆ ಕೆಲ ಲೋಪದೋಷಗಳು ಕೂಡ ಇದೆ. ಅದನ್ನು ಸರಿಪಡಿಸುವುದು ಹೇಗೆ ಎಂಬುದರ ಬಗ್ಗೆ ಮೊದಲು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.

ರಾಜ್ಯ ಮಾನವ ಹಕ್ಕುಗಳ ರಕ್ಷ ಣಾ ಆಯೋಗದ ಸದಸ್ಯ ಚಂದ್ರಶೇಖರ್‌ ಅಲ್ಲಿಪೂರ್‌ ಮಾತನಾಡಿ, ಮೊರಾರ್ಜಿ ಮತ್ತು ಕಿತ್ತೂರು ಚೆನ್ನಮ್ಮ ವಸತಿ ಶಾಲೆಗಳಲ್ಲಿ ಸಮಸ್ಯೆಗಳಿವೆ. ಶೌಚಾಲಯ ಇದ್ದರೆ ನೀರು ಇರುವುದಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅನೇಕರಿಗೆ ಕಾನೂನಿನ ಬಗ್ಗೆ ಅರಿವೇ ಇಲ್ಲ. ಒಂದು ಮಗು ತೊಂದರೆಗೆ ಒಳಗಾದರೆ ಯಾರ ಬಳಿ ಹೋಗಬೇಕು, ಆಗುವ ಅನಾಹುತವನ್ನು ಯಾವ ರೀತಿ ತಪ್ಪಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದಿದ್ದರೆ ಉತ್ತಮ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಚ್‌.ಟಿ. ಕೋಮಲ, ಜಿಲ್ಲಾ ಪಂಚಾಯಿತಿ ಉಪ ಕಾರ‍್ಯದರ್ಶಿ ನಾಗರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಇ.ವಿ. ವೆಂಕಟರಮಣ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ಎಸ್‌.ದಿವಾಕರ್‌, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ವಿ.ಗೀತಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ