ಆ್ಯಪ್ನಗರ

ಹಾಸನ ಹೆಚ್.ಆರ್.ಪಿ ಯಲ್ಲಿ ಭಾರೀ ಅಕ್ರಮ; ಅಕ್ರಮ ಬಯಲಿಗೆಳೆದ ಎಸಿ, ತಹಸೀಲ್ದಾರ್‌ಗಳ ವರ್ಗಾವಣೆ: ರೇವಣ್ಣ ಆರೋಪ

ಹಾಸನದ ಹೆಚ್.ಆರ್.ಪಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ರೇವಣ್ಣ ಆರೋಪಿಸಿದ್ದಾರೆ. ಅಲ್ಲದೆ, ರಾಜ್ಯ ಸರಕಾರ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಸ್ಕ್ರ್ಯಾಪ್‌ ಅಧಿಕಾರಿಗಳನ್ನು ಜಿಲ್ಲೆಗೆ ಹಾಕಲಾಗುತ್ತಿದೆ ಎಂದೂ ರೇವಣ್ಣ ಆರೋಪಿಸಿದ್ದಾರೆ.

Vijaya Karnataka Web 20 Oct 2019, 4:54 pm
ಹಾಸನ: ಜಿಲ್ಲೆಯ ಹೆಚ್.ಆರ್.ಪಿ ಯಲ್ಲಿ ಭಾರೀ ಅಕ್ರಮ ನಡೆದಿದ್ದು, ತಪ್ಪುಮಾಡಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಮೀನಾಮೇಷ ನಡೆಯುತ್ತಿದೆ. ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು 17 ದಿನ ಬೇಕಿತ್ತಾ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಶ್ನೆ ಮಾಡಿದ್ದಾರೆ.
Vijaya Karnataka Web h d revanna


ಹೇಮಾವತಿ ಜಲಾಶಯ ಪುನರ್ವಸತಿ ಯೋಜನೆಯಲ್ಲಿ ಭಾರೀ ಅಕ್ರಮ : ರೇವಣ್ಣ ಆರೋಪ

ಇನ್ನು, ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಇದೇ ಕಾರಣಕ್ಕೆ ಅಕ್ರಮ ಬಯಲಿಗೆಳೆದ ಎಸಿ, ತಹಸೀಲ್ದಾರ್ ಗಳನ್ನು ವರ್ಗಾವಣೆ ಮಾಡಲಾಗಿದೆ. ಹೆಚ್ ಆರ್ ಪಿ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ದೋಷ ಪಟ್ಟಿ ಸುಟ್ಟು ಹಾಕಲು ಹುನ್ನಾರ ನಡೆಸಲಾಗಿದೆ. ಈ ದಾಖಲೆಗಳು ಕಣ್ಮರೆಯಾದ್ರೆ ಅದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದೂ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಭಿಕ್ಷೆ ಬೇಡ, ಜನರ ಹಣ ಬಳಸಿ: ಜೆಡಿಎಸ್‌ನ ಬೃಹತ್‌ ಪ್ರತಿಭಟನೆ ವೇಳೆ ಎಚ್‌ಡಿಕೆ ಆಗ್ರಹ

ಇನ್ನೊಂದೆಡೆ, ಹಾಸನ ಜಿಲ್ಲೆಯಲ್ಲಿ ಗುಜುರಿಯಲ್ಲಿರಬೇಕಾದ ಅಧಿಕಾರಿಗಳನ್ನು ಜಿಲ್ಲೆಗೆ ಹಾಕುತ್ತಿದ್ದಾರೆ. ಮೂರು ಮೂರು ಭಾರಿ ಸಸ್ಪೆಂಡ್ ಆಗಿರೋ ಅಧಿಕಾರಿಗಳನ್ನ ಕರೆ ತರುತ್ತಿದ್ದಾರೆ. ಮಾರ್ಕೆಟ್‌ನಲ್ಲಿರೋ ತರಕಾರಿಯಂಗೆ ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಸಹ ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

ಬಿಎಸ್‌ವೈಯಿಂದ ದ್ವೇಷದ ರಾಜಕಾರಣ

ಅಲ್ಲದೆ, ದಾಖಲೆಗಳನ್ನ ತಿದ್ದುವ ಅಧಿಕಾರಿಗಳು ಹಾಸನಕ್ಕೆ ಬಂದಿದ್ದಾರೆ. ಹಾಸನಕ್ಕೆ ಇನ್ನು ಅದೆಷ್ಟು ಸ್ಕ್ರ್ಯಾಪ್‌ ಅಧಿಕಾರಿಗಳನ್ನು ಹಾಕ್ತಾರೋ ಹಾಕ್ಲಿ. ನಮ್ಮಲ್ಲಿ ಗುಜುರಿ ಅಂಗಡಿಗಳು ಖಾಲಿ‌ ಇವೆ. ಅಂತಹ ಅಧಿಕಾರಿಗಳನ್ನ ರಿಪೇರಿ ಮಾಡಿ ಕಳ್ಸಿದ್ರಾಯ್ತು ಬಿಡಿ ಎಂದು ಸಹ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ವ್ಯಂಗ್ಯವಾಗಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ