ಆ್ಯಪ್ನಗರ

ಚುನಾವಣೆ ಲಾಭಕ್ಕೆ ಗೋಹತ್ಯೆ ನಿಷೇಧ ವಾಪಸ್‌: ಎಚ್‌ಡಿಡಿ

ಪ್ರಧಾನಿಯವರ ಈವರೆಗಿನ ಎಲ್ಲಾ ತಂತ್ರಗಳೂ ಸವಕಲು ನಾಣ್ಯದಂತಾಗಿವೆ, ಇದು ಮನವರಿಕೆ ಆದ ಮೇಲೆ ಗೋಹತ್ಯೆ ನಿಷೇಧ ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿರಬಹುದು ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಹೇಳಿದ್ದಾರೆ.

Vijaya Karnataka Web 30 Nov 2017, 2:12 pm
ಹಾಸನ: ಪ್ರಧಾನಿಯವರ ಈವರೆಗಿನ ಎಲ್ಲಾ ತಂತ್ರಗಳೂ ಸವಕಲು ನಾಣ್ಯದಂತಾಗಿವೆ, ಇದು ಮನವರಿಕೆ ಆದ ಮೇಲೆ ಗೋಹತ್ಯೆ ನಿಷೇಧ ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿರಬಹುದು ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಹೇಳಿದ್ದಾರೆ.
Vijaya Karnataka Web hdd comment on ban cattle slaughter
ಚುನಾವಣೆ ಲಾಭಕ್ಕೆ ಗೋಹತ್ಯೆ ನಿಷೇಧ ವಾಪಸ್‌: ಎಚ್‌ಡಿಡಿ


ದೇಶದಲ್ಲಿ ವಿವಾದಿತ ಗೋಹತ್ಯೆ ನಿಷೇಧ ವಾಪಸ್ ನಿರ್ಧಾರದ ಹಿನ್ನೆಲೆಯಲ್ಲಿ ದೇವೇಗೌಡರು ಈ ಪ್ರತಿಕ್ರಿಯೆ ನೀಡಿದರು. ಕಳೆದ ಮೂರೂವರೆ ವರ್ಷದಿಂದ ಪ್ರಧಾನಿ ಅವರ ಬಾಯಲ್ಲಿ ಬರೀ ಅಭಿವೃದ್ಧಿಯ ಘೋಷಣೆ ಮೊಳಗುತ್ತಿತ್ತು. ಈ ಗನ್‌ಗಳಿಂದಲೇ ಗುಜರಾತ್ ಚುನಾವಣೆಯಲ್ಲಿ ಲಾಭವಾಗದು ಎಂದು ಮೋದಿಗೆ ಮನವರಿಕೆಯಾಗಿದೆ. ಅವರ ಇದು ಅವರ ಕೊನೆಯ ಅಸ್ತ್ರ ಮತ್ತು ತಂತ್ರಗಾರಿಕೆಯ ಪ್ರಯೋಗ ಎಂದರು.

ಈ ನಡೆ ಗುಜರಾತ್‌ನಲ್ಲಿ ಚುನಾವಣೆ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಗಿಂತ ಹಿಂದುತ್ವದ ಮೊರೆ ಹೋಗಿವೆ, ರಾಹುಲ್ ಗಾಂಧಿ ಸಹ ದೇವಾಲಯಗಳಿಗೆ ಎಡತಾಕುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ