ಆ್ಯಪ್ನಗರ

ಮೂವರ ಮೇಲೆ ಆರೋಗ್ಯ ಇಲಾಖೆ ನಿಗಾ

ಮೂಧಿವರ ಮೇಲೆ ಆಧಿರೋಗ್ಯ ಇಧಿಲಾಖೆ ನಿಧಿಗಾ ವಿಕ ಸುದ್ದಿಲೋಕ ಚನ್ನರಾಯಪಟ್ಟಣ ಪಟ್ಟಣಧಿಕ್ಕೆ ದುಬೈನಿಂದ ಬಂದಿದ್ದ ಇಬ್ಬರು ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಸಂಪರ್ಕ ಪಡೆದಿದ್ದ ...

Vijaya Karnataka 20 Mar 2020, 5:00 am
ಚನ್ನರಾಯಪಟ್ಟಣ: ಪಟ್ಟಣಧಿಕ್ಕೆ ದುಬೈನಿಂದ ಬಂದಿದ್ದ ಇಬ್ಬರು ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಸಂಪರ್ಕ ಪಡೆದಿದ್ದ ವ್ಯಕ್ತಿ ಮೇಧಿಲೆ ಆರೋಗ್ಯ ಇಲಾಖೆ ನಿಗಾ ಇಧಿರಿಧಿಸಿದೆ. ತಹಸೀಲ್ದಾರ್‌ ನೇತೃತ್ವದಲ್ಲಿಔಷಧ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾಸ್ಕ್‌ ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಲಾಗಿದೆ.
Vijaya Karnataka Web health department monitoring 3 people who has corona virus
ಮೂವರ ಮೇಲೆ ಆರೋಗ್ಯ ಇಲಾಖೆ ನಿಗಾ


ಮಾ.17ರಂದು ದುಬೈನಿಂದ ತಾಯಿ, ಮಗು ಆಗಮಿಸಿದ್ದು ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಮಾಹಿತಿ ದೊರೆತ ಕೂಡಲೇ ನಿಯೋಜನೆಗೊಂಡಿರುವ ಆರೋಗ್ಯ ಕಾರ‍್ಯಕರ್ತೆಯರು ಹಾಗೂ ವೈದ್ಯರ ತಂಡ ಮನೆಗೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಕ್ತ ತಿಳಿವಳಿಕೆ ನೀಡಿದ್ದಾರೆ.

ಚಿಕ್ಕೋನಹಳ್ಳಿ ವ್ಯಕ್ತಿಯೊಬ್ಬರು ಮಡಿಕೇರಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಸಂಪರ್ಕದಲ್ಲಿದ್ದರೆಂಬ ಮಾಹಿತಿ ಹಿನ್ನೆಲೆಯಲ್ಲಿತಾಲೂಕು ಆಸ್ಪತ್ರೆಯ ಐಸೊಲೇಶನ್‌ ವಾರ್ಡ್‌ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂರೂ ಪ್ರಕರಣಗಳಲ್ಲಿಯಾವುದೇ ಕೊಧಿರೊನಾ ಲಧಿಕ್ಷಧಿಣಧಿಗಳು ಕಂಡುಬಂದಿರುವುದಿಲ್ಲಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ: ಹಲವಾರು ಎಚ್ಚರಿಕೆಗಳ ನಡುವೆಯೂ ಮಾಸ್ಕ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಔಷಧ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಒಂದು ಪ್ರಕರಣ ಪತ್ತೆ ಮಾಡಿದ್ದಾರೆ. 5 ರೂ. ಬೆಲೆಯ ಮಾಸ್ಕ್‌ ಅನ್ನು 30 ರೂ.ಗೆ ಮಾರಾಟ ಮಾಡುತ್ತಿದ್ದವರಿಗೆ ಸಾವಿರ ರೂ. ದಂಡ ವಿಧಿಸಲಾಗಿದೆಯಲ್ಲದೆ ಅಂಗಡಿಯಲ್ಲಿದ್ದ ಸುಮಾರು 50 ಮಾಸ್ಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಹೊಳೇನರಸೀಪುರ ತಹಸೀಲ್ದಾರ್‌ ಶ್ರೀನಿವಾಸ್‌, ಪುರಸಭೆ ಆರೋಗ್ಯಾಧಿಕಾರಿ ರಾಜು, ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪ, ಡಾ.ಸ್ವರೂಪ, ಡಾ.ಸೌಮ್ಯ ಹಾಗೂ ಕವಿತಾ ಅವರನ್ನೊಳಗೊಂಡ ತಂಡ ದಾಳಿ ವೇಳೆ ಹಾಜರಿದ್ದು, ಇನ್ನೂ 15 ದಿನ ತೀವ್ರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ಪಟ್ಟಣದಲ್ಲಿಏರ್‌ಕಂಡಿಷನರ್‌ಗಳನ್ನು ಬಳಸುವ ಬಟ್ಟೆ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳಿಗೂ ಭೇಟಿ ನೀಡಿ ಅಲ್ಲಿನ ಎಸಿಗಳನ್ನು ಕೂಡಲೇ ಬಂದ್‌ ಮಾಡುವಂತೆ ತಿಳಿಸಧಿಲಾಧಿಗಿಧಿದೆ. Óದೆ. ದಿನಗಳಲ್ಲಿಮಾತ್ರ ಅಂಗಡಿಗಳನ್ನು ತೆರೆದಿರಬೇಕು. ಅಂಗಡಿಗಳಿಗೆ ಬರುವ ಗ್ರಾಹಕರುಗಳ ಮಾಹಿತಿ ನೋಂದಣಿ ಕಡ್ಡಾಯವಾಗಿರಬೇಕು. ಅಂಗಡಿಯ ಮುಂದೆ ಕೈತೊಳೆಯಲು ಸೋಪು ಹಾಗೂ ನೀರನ್ನು ಕಡ್ಡಾಯವಾಗಿಡಬೇಕೆಂದು ಸೂಚಿಸಧಿಲಾಧಿಗಿಧಿದೆ.

ತಾಲೂಕು ಕಚೇರಿ ಬಂದ್‌ಮಾಡಿ: ಹೆಚ್ಚು ಜನಸಂದಣಿ ಉಂಟಾಗದಂತೆ ನಿಯಂತ್ರಣ ಮಾಡುವ ಎಲ್ಲಕ್ರಮಗಳನ್ನೂ ಸರಕಾರ ತೆಗೆದುಕೊಳ್ಳುತ್ತಿದ್ದು ನ್ಯಾಯಾಲಯದ ಕಲಾಪಗಳಿಗೂ ನಿರ್ಬಂಧ ಹೇರಲಾಗಿದೆ. ನಿತ್ಯ ಹೆಚ್ಚುಜನ ಸಂದಣಿ ಉಂಟಾಗುವ ತಾಲೂಕು ಕಚೇರಿಗೂ ಸಾರ್ವಜನಿಕರು ಬಾರದಂತೆ ಎಚ್ಚರವಹಿಸಬೇಕೆಂಬ ಬೇಡಿಕೆ ಸಾರ್ವಜನಿಕರಿಂದ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ