ಆ್ಯಪ್ನಗರ

ಹೊಳೆನರಸೀಪುರ: ಪ್ರಜ್ವಲ್‌ ರೋಡ್‌ ಶೋ

ಹೊಳೆನರಸೀಪುರ: ಹಾಸನ ಲೋಕಸಭಾ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರೊಂದಿಗೆ ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಹೋಬಳಿಯಲ್ಲಿ ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.

Vijaya Karnataka 8 Apr 2019, 5:00 am
ಹೊಳೆನರಸೀಪುರ: ಹಾಸನ ಲೋಕಸಭಾ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರೊಂದಿಗೆ ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಹೋಬಳಿಯಲ್ಲಿ ಭಾನುವಾರ ಬಿರುಸಿನ ಪ್ರಚಾರ ನಡೆಸಿದರು.
Vijaya Karnataka Web holenarasipura prjwal revanna road show
ಹೊಳೆನರಸೀಪುರ: ಪ್ರಜ್ವಲ್‌ ರೋಡ್‌ ಶೋ


ಆಲಗೌಡನಹಳ್ಳಿ ಗ್ರಾಮದ ದೇವಾಲಯದ ಬಳಿ ಪೂಜೆ ನೆರವೇರಿಸಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ದೊಡ್ಡಳ್ಳಿ, ದೊಡ್ಡಕಾಡನೂರು, ಹಳ್ಳಿಮೈಸೂರು ಭಾಗದ ಗ್ರಾಮಗಳಲ್ಲಿ ರೋಡ್‌ಶೋ ನಡೆಸಿದರು. ನೂರಾರು ಕಾರ‍್ಯಕರ್ತರು ಬೈಕ್‌ ರಾರ‍ಯಲಿ ಮೂಲಕ ಸಾಥ್‌ ನೀಡಿದರು. ಮತಯಾಚನೆ ಸಂದರ್ಭ ದಾರಿಯುದ್ದಕ್ಕೂ ಹೂವಿನ ಹಾರಹಾಕಿ ಗ್ರಾಮಸ್ಥರು, ಕಾರ‍್ಯಕರ್ತರು ಸ್ವಾಗತಿಸಿದರು. ಅಭಿಮಾನಿ ಕೆಲ ಯುವಕರು ತೆರೆದ ವಾಹನದಲ್ಲಿ ಇದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಜೆಡಿಎಸ್‌ ಪಕ್ಷ ಮತ್ತು ದೇವೇಗೌಡರ ಪರ ಜೈಕಾರ ಕೂಗಿದರು. ಕಾಂಗ್ರೆಸ್‌ನ ಕೆಲವು ಕಾರ‍್ಯಕರ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ