ಆ್ಯಪ್ನಗರ

ಸರಕಾರಿ ಅಧಿಕಾರಿಗಳು ಜೀನ್ಸ್‌ ಧರಿಸಬಾರದಾ? ವಿವಾದಕ್ಕೆ ಕಾರಣವಾದ ಹಾಸನ ಸಿಇಒ ನೋಟಿಸ್‌

ಕಳೆದ ಶುಕ್ರವಾರ ಅಂದರೆ ಡಿಸೆಂಬರ್‌ 20ರಂದು ಜೀನ್ಸ್‌ ಪ್ಯಾಂಟ್‌ ಧರಿಸಿ ಹಾಸನ ಜಿಲ್ಲಾ ಪಂಚಾಯಿತಿಗೆ ಬಂದಿದ್ದ ಆಲೂರು ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ್‌ ಪಿಡಿಒ ರುದ್ದೇಗೌಡ ಅವರಿಗೆ ಸಿಇಒ ನೋಟಿಸ್‌ ನೀಡಿದ್ದಾರೆ.

Vijaya Karnataka 23 Dec 2019, 1:11 pm
ಹಾಸನ: ಸರಕಾರಿ ಅಧಿಕಾರಿಗಳು ಜೀನ್ಸ್‌ ಪ್ಯಾಂಟ್‌ ಧರಿಸಬಾರದಾ? ಜೀನ್ಸ್ ಪ್ಯಾಂಟ್ ಧರಿಸಿದರೆ ಸರಕಾರದ ಘನತೆಗೆ ಧಕ್ಕೆ ತರುತ್ತಾ? ಹೀಗೊಂದು ವಿಚಿತ್ರ ಪ್ರಶ್ನೆಯನ್ನು ಹುಟ್ಟುಹಾಕಿದೆ ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರ ನೋಟಿಸ್‌.
Vijaya Karnataka Web Jeans Pant


ಕಳೆದ ಶುಕ್ರವಾರ ಅಂದರೆ ಡಿಸೆಂಬರ್‌ 20ರಂದು ಜೀನ್ಸ್‌ ಪ್ಯಾಂಟ್‌ ಧರಿಸಿ ಹಾಸನ ಜಿಲ್ಲಾ ಪಂಚಾಯಿತಿಗೆ ಬಂದಿದ್ದ ಆಲೂರು ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ್‌ ಪಿಡಿಒ ರುದ್ದೇಗೌಡ ಅವರಿಗೆ ಸಿಇಒ ನೋಟಿಸ್‌ ನೀಡಿದ್ದಾರೆ.

"ನೀವು ಸರಕಾರಿ ನೌಕರರಿಗೆ ಶೋಭೆಯನ್ನು ತರುವಂತಹ ಸಭ್ಯ ಉಡುಗೆ ತೊಡುಗೆಗಳನ್ನು ಧರಿಸದೇ ಜೀನ್ಸ್ ಪ್ಯಾಂಟ್‌ ಧರಿಸಿ ಕಚೇರಿಗೆ ಬಂದು ವಸ್ತ್ರ ಸಂಹಿತೆ ಉಲ್ಲಂಘನೆ ಮಾಡಿದ್ದೀರಿ," ಎಂಬುದಾಗಿ ಸಿಇಒ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.


ಈ ಬೇಜವಬ್ದಾರಿತನದ ವರ್ತನೆಯಿಂದ ಕರ್ನಾಟಕ ಸಿವಿಲ್‌ ಸೇವಾ (ನಡತೆ) ನಿಯಮ 1966ರ 3 (1) i, ii, ಮತ್ತು iii ನ್ನು ಉಲ್ಲಂಘನೆ ಮಾಡಿರುತ್ತೀರಿ. ನೀವು ಒಬ್ಬ ಜವಾಬ್ದಾರಿಯುತ ನೌಕರರಾಗಿದ್ದು ಈ ನಿಮ್ಮ ನಿರ್ಲಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಮೂರು ದಿನದ ಒಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957ರ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ