ಆ್ಯಪ್ನಗರ

ಸಿ.ಟಿ. ರವಿ ಚಟಕ್ಕೆ ಮಾತಾಡಿದ್ದೆಲ್ಲಾ ಪಾಲಿಸಿ ಆಗುತ್ತಾ? ಕ್ಯಾಸಿನೋ ಪ್ರಸ್ತಾಪಕ್ಕೆ ಮಾಧುಸ್ವಾಮಿ ಗರಂ

ಬಿಜೆಪಿ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ಇಬ್ರಾಹಿಂ ಮೊದಲಿನಿಂದಲೂ ಭ್ರಮೆಯಲ್ಲೇ ಬದುಕಿದವರು. ಅವರು ಹೇಳುವುದರಲ್ಲಿ ಹೊಸದೇನಿದೆ ಹೇಳಿ?” ಎಂದು ತಿರುಗೇಟು ನೀಡಿದರು.

Vijaya Karnataka 24 Feb 2020, 5:26 pm

ಹಾಸನ: “ಸಿಟಿ ರವಿ ಏನೋ ಚಟಕ್ಕೆ ಮಾತಾಡಿದ್ದೆಲ್ಲಾ ದೇಶದ ಪಾಲಿಸಿ ಆಗುತ್ತಾ? ಕ್ಯಾಸಿನೋ ತೆರೆಯಲಾಗುತ್ತದೆ ಎಂದು ಭಾವಿಸಬಾರದು. ಇದೊಂದು ಆಕಸ್ಮಿಕ ಹೇಳಿಕೆ ಅಷ್ಟೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಆಗಿಲ್ಲ. ಇದು ಸರಕಾರದ ತೀರ್ಮಾನ ಅಲ್ಲ,” ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಹೇಳಿದರು.
Vijaya Karnataka Web Madhu Swamy


ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಬೆಂಗಳೂರನ್ನು ನಾವು ಇನ್ನೊಂದು ಗೋವಾ ಮಾಡಲು ಆಗುತ್ತದಾ? ಇಂತಹ ತೀರ್ಮಾನವನ್ನು ಮಾಡಲು ಆಗುವುದಿಲ್ಲ,” ಎಂದರು.

ಬಿಜೆಪಿ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ಇಬ್ರಾಹಿಂ ಮೊದಲಿನಿಂದಲೂ ಭ್ರಮೆಯಲ್ಲೇ ಬದುಕಿದವರು. ಅವರು ಹೇಳುವುದರಲ್ಲಿ ಹೊಸದೇನಿದೆ ಹೇಳಿ?” ಎಂದು ತಿರುಗೇಟು ನೀಡಿದರು.

ಕ್ಯಾಸಿನೋ ಹಿಂದೆ ‘ಆಪರೇಷನ್‌’ ಲಾಬಿ? ಪ್ರವಾಸೋದ್ಯಮ ಇಲಾಖೆ ಚಿಂತನೆಗೆ ವ್ಯಾಪಕ ವಿರೋಧ

ಆಳುವ ಪಕ್ಷದಲ್ಲಿ ಕೆಲವೊಂದು ಸಮಸ್ಯೆ ಇರುತ್ತದೆ. ಆದರೆ ಬಿಜೆಪಿಯಲ್ಲಿ ಎಲ್ಲವನ್ನು ತೊರೆದು ಆಚೆಗೆ ಹೋಗುವ ಸ್ಥಿತಿಯಲ್ಲಿ ಯಾರೂ ಇಲ್ಲ. ಪರ ವಿರೋಧ, ನಮ್ಮ ಕೆಲಸ ಆಗಬೇಕು ಎನ್ನುವುದು ಇರುತ್ತದೆ. ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ನಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿ, ಗೃಹ ಸಚಿವರು, ಪಕ್ಷದ ಅಧ್ಯಕ್ಷರಿಗೆ ಹೇಳುತ್ತೇವೆ. ಅಭಿಪ್ರಾಯ ಹಂಚಿಕೊಳ್ಳುವುದು ತಪ್ಪಲ್ಲ ಎಂದು ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಎಂಬ ಆರೋಪಕ್ಕೆ ಉತ್ತರಿಸಿದ ಅವರು, “ಇದು ಅವರವರ ಭಾವಕ್ಕೆ, ಅವರವರ ಭಕ್ತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ ಎಂಬಂತೆ,,” ಎಂದರು.

“ಯಾವುದೇ ಸೂಪರ್ ಸಿಎಂ ಇಲ್ಲ. ಸಿಎಂ ಒಬ್ಬರೇ ಇರುವುದು. ಸೂಪರ್ ಸಿಎಂ ಸಂವಿಧಾನದಲ್ಲಿ ಇಲ್ಲ. ಹಾಗಾಗಿ ವಿಜಯೇಂದ್ರ ಯಡಿಯೂರಪ್ಪ ಅವರ ಮಗ ಅಷ್ಟೆ. ಸರಕಾರದ ಯಾವುದೇ ವ್ಯವಹಾರಕ್ಕೆ ಅವರು ಅಧಿಪತಿ ಆಗಲು ಸಾಧ್ಯವಿಲ್ಲ,” ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ