ಆ್ಯಪ್ನಗರ

ಕೊಣನೂರು: ಗಾಳಿ ಮಳೆಗೆ ನೆಲಕ್ಕುರುಳಿದ ಬಾಳೆ ಬೆಳೆ

ಕೊಣನೂರು: ರಾಮನಾಥಪುರ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಮನೆಗಳ ಚಾವಣೆ ಹಾರಿ ಹೋಗಿದ್ದು ಮರ ಗಿಡಗಳು ನೆಲಕಚ್ಚಿವೆ. ಹಲವೆಡೆ ಹೊಲಗದ್ದೆಗಳಲ್ಲಿ ನೀರು ತುಂಬಿದೆ.

Vijaya Karnataka 3 May 2019, 5:00 am
ಕೊಣನೂರು: ರಾಮನಾಥಪುರ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಮನೆಗಳ ಚಾವಣೆ ಹಾರಿ ಹೋಗಿದ್ದು ಮರ ಗಿಡಗಳು ನೆಲಕಚ್ಚಿವೆ. ಹಲವೆಡೆ ಹೊಲಗದ್ದೆಗಳಲ್ಲಿ ನೀರು ತುಂಬಿದೆ.
Vijaya Karnataka Web konanuru rain fall home crop loss
ಕೊಣನೂರು: ಗಾಳಿ ಮಳೆಗೆ ನೆಲಕ್ಕುರುಳಿದ ಬಾಳೆ ಬೆಳೆ


ಕೂಡಲೂರು, ಬಿಳಗೂಲಿ. ರಾಮನಕೊಪ್ಪಲು ಗ್ರಾಮದಲ್ಲಿ ಕೆಲ ಮನೆಗಳ ಹೆಂಚು ಹಾರಿದ್ದು, ಕೂಡಲೂರು ಗ್ರಾಮದ ದೋಡ್ಡೆಗೌಡ ಎಂಬುವವರಿಗೆ ಸೇರಿದ ಒಂದು ಎಕರೆ ಬಾಳೆ ತೋಟದಲ್ಲಿ ಗಿಡಗಳು ನೆಲ ಕಚ್ಚಿವೆ. ಹೊಗೆಸೊಪ್ಪಿನ ಸಸಿಗಳನ್ನು ಪೋಷಿಸಲು ನಿರ್ಮಿಸಿದ್ದ ಶೆಡ್‌ಗಳು ಗಾಳಿಯ ರಭಸಕ್ಕೆ ಸಿಲುಕಿ ನೆಲಕ್ಕುರುಳಿವೆ. ಮಳೆಯಿಂದಾಗಿ ರೈತರು ಕೆಲ ದಿನಗಳಿಂದ ಬೆಳೆಸಿದ್ದ ಹೊಗೆ ಸಸಿಗಳ ಬುಡಕ್ಕೆ ಆಲಿಕಲ್ಲು ಬಿದ್ದಿದ್ದು ಸಸಿಗಳು ಕೊಳೆತು ಹೋಗುವ ಆತಂಕದಲ್ಲಿ ರೈತರಿದ್ದಾರೆ. ಮಳೆಯೊಂದಿಗೆ ಅಪಾರ ಆಲಿಕಲ್ಲು ಸುರಿದಿದೆ. ಆದರೆ, ಮಳೆಯ ರಭಸಕ್ಕೆ ಗಿಡಗಳು ನೆಲಕಚ್ಚಿವೆ.

ತರಿಗಳಲೆಯ ಶಿವಣ್ಣ ಎಂಬುವವರ ನಿರ್ಮಾಣ ಹಂತದಲ್ಲಿರುವ ಮನೆಯ ಚಾವಣಿಗೆ ಹಾಕಿದ್ದ ಗಾಜು ಗಾಳಿಯ ರಭಸಕ್ಕೆ ಸಿಕ್ಕು ಪುಡಿಯಾಗಿದ್ದು ನಷ್ಟವಾಗಿದೆ. ಹಂಡ್ರಂಗಿಯಲ್ಲಿ ಗಾಳಿಯ ರಭಸಕ್ಕೆ ಸಿಕ್ಕಿ ತೆಂಗಿನ ಮರವೊಂದು ವಿದ್ಯುತ್‌ ಕಂಬದ ಮೇಲೆ ಬಿದ್ದಿದೆ. ಟ್ರಾನ್ಸ್‌ ಫಾರ್ಮರ್‌ ಉರುಳಿಬಿದ್ದ ಪರಿಣಾಮ ಕೂಡಲೂರು ಮತ್ತು ಶಿರದನಹಳ್ಳಿ ಗ್ರಾಮಗಳಿಗೆ ವಿದ್ಯುತ್‌ ಕಡಿತವಾಗಿತ್ತು. ರಾಮನಾಥಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಆಲಿಕಲ್ಲು ಮಳೆ ಸುರಿಯಿತು. ಸಂಜೆ ಗಾಳಿಯ ಜೊತೆಗೆ ಜೋರಾಗಿ ಸುರಿದ ಮಳೆಯು 30 ನಿಮಿಷಕ್ಕೂ ಹೆಚ್ಚು ಕಾಲ ಸುರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ