ಆ್ಯಪ್ನಗರ

ಕುಟುಂಬಗಳಲ್ಲಿ ವಿಚ್ಛೇದನ ಸಂಖ್ಯೆ ಹೆಚ್ಚಳ

ಕೌಟುಂಬಿಕ ವ್ಯವಸ್ಥೆಯಲ್ಲಿಆದರ್ಶವನ್ನಿಟ್ಟುಕೊಂಡ ದೇಶ ಭಾರತ. ನಮ್ಮ ಅರಿವಿಗೆ ಬಾರದಂತೆ ನಮ್ಮ ಕುಟುಂಬಗಳು ಒಡೆದು ಹೋಗುತ್ತಿರುವುದು ದುರಂತ ಎಂದು ಕುಟುಂಬ ಪ್ರಬೋಧನದ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯಭಟ್‌ ಹೇಳಿದರು.

Vijaya Karnataka 10 Oct 2019, 5:00 am
ಚನ್ನರಾಯಪಟ್ಟಣ: ಕೌಟುಂಬಿಕ ವ್ಯವಸ್ಥೆಯಲ್ಲಿಆದರ್ಶವನ್ನಿಟ್ಟುಕೊಂಡ ದೇಶ ಭಾರತ. ನಮ್ಮ ಅರಿವಿಗೆ ಬಾರದಂತೆ ನಮ್ಮ ಕುಟುಂಬಗಳು ಒಡೆದು ಹೋಗುತ್ತಿರುವುದು ದುರಂತ ಎಂದು ಕುಟುಂಬ ಪ್ರಬೋಧನದ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯಭಟ್‌ ಹೇಳಿದರು.
Vijaya Karnataka Web HSN9CRP1_16


ಪಟ್ಟಣದ ವರ್ತಕರ ಸಂಘದಿಂದ ಗಣಪತಿ ಆಸ್ಥಾನ ಮಂಟಪದಲ್ಲಿಆಯೋಜಿಸಿದ್ದ ನವದಂಪತಿಗಳ ಕುಟುಂಬ ಪ್ರಬೋಧನ ಹಾಗೂ ದೀಪಭೋಜನ ಕಾರ‍್ಯಕ್ರಮದಲ್ಲಿಮಾತನಾಡಿದರು.

''50 ವರ್ಷಗಳ ಹಿಂದೆ ವಿಚ್ಛೇದನದ ಪ್ರಕರಣಗಳೇ ಇರಲಿಲ್ಲ. ಈಗ ಕಲಿಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವಂತೆ ವಿಚ್ಛೇದನದ ಪ್ರಮಾಣವೂ ಹೆಚ್ಚಾಗುತ್ತಿದೆ. ಮದುವೆ ಎಂಬುದು ಬಿಡುಗಡೆಯಿಲ್ಲದ ಬಂಧನವಾಗಿದ್ದು, ಕಾಲಬದಲಾದಂತೆ ಒಪ್ಪಂದದ ಮದುವೆಯಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಅನೇಕ ವೈರುಧ್ಯಗಳನ್ನು ನಿಭಾಯಿಸಿಕೊಂಡು ಹೋಗುವುದೇ ಜೀವನವಾಗಿದೆ. ಗಂಡ ಹೆಂಡಿರ ನಡುವೆ ಜಗಳವಾಗುವುದು ಸಹಜವಾದರೂ ಅದು ಮುಂದುವರಿಯಬಾರದು,'' ಎಂದು ಸಲಹೆ ನೀಡಿದರು.

''ಇಂದಿನ ಪೀಳಿಗೆಗೆ ಶಿಕ್ಷಣದ ಮೂಲಕವೇ ಸಂಸ್ಕಾರ ನೀಡಬೇಕು. ಅಂತಹ ಸಂಸ್ಕಾರಯುತ ಮಕ್ಕಳು ನಮ್ಮ ಸಮಾಜದ ಸತ್ಪ್ರಜೆಗಳಾಗುತ್ತಿದ್ದು, ಅವರಿಂದ ಉತ್ತಮ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಅವರು ಇಂದಿನ ಶಿಕ್ಷಣ ಪದ್ಧತಿಯೇ ಮುಂದುವರಿದರೆ ಇನ್ನು 30 ವರ್ಷಗಳಲ್ಲಿಅಂಗ್ಲಭಾಷೆಗೆ ಗಂಡಾಂತರ ಬರಲಿದೆ,''ಎಂದರು.

ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್‌.ಅಶೋಕ್‌ ಮಾತನಾಡಿ, ''ಮನಸ್ಸುಗಳನ್ನು ಬೆಸೆಯುವುದೇ ಜೀವನದ ಬಂಧನ. ಹುಟ್ಟು ಮತ್ತು ಸಾವಿನ ನಡುವಿನ ಸಮಯದಲ್ಲಿನಮ್ಮ ಸಾಧನೆ ಅಮರವಾಗಿರಬೇಕು. ಹಿರಿಯರನ್ನು ಗೌರವಿಸುವ ಬಾಳು ಎಲ್ಲರದ್ದಾಗಬೇಕು,'' ಎಂದು ಹೇಳಿದರು.

ನೂತನ ದಂಪತಿಗಳು ಹಾಗೂ ಹಿರಿಯ ದಂಪತಿಗಳೂ ಸೇರಿದಂತೆ 108 ಜೋಡಿಗೆ ಮಡಿಲು ತುಂಬುವ ಕಾರ‍್ಯಕ್ರಮ ಮಾಡಲಾಯಿತು. ಸಾಮೂಹಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ವರ್ತಕರ ಸಂಘದ ಅಧ್ಯಕ್ಷ ಕುಮಾರ್‌ಗೌಡ, ಕಾರ‍್ಯದರ್ಶಿ ರಾಘವೇಂದ್ರ, ಖಜಾಂಚಿ ಸಿ.ಎಸ್‌.ಮನೋಹರ್‌, ಸಿ.ಕೆ.ಬಾಬು, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ