ಆ್ಯಪ್ನಗರ

ಚನ್ನರಾಯಪಟ್ಟಣ: ಲೋಕಾಯುಕ್ತ ಜೀಪ್‌ ಚಾಲಕ, ಪೇದೆ ಆತ್ಮಹತ್ಯೆ

ಪೊಲೀಸರ ಸಮ್ಮುಖದಲ್ಲಿ ಬಾಗಿಲ ಬೀಗ ಒಡೆದಾಗ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದರು. ಕಳೆದ 7–8 ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಸ್ಥಳದಲ್ಲಿ ಇಲಿ ಪಾಷಾಣ ಬಾಟಲಿ ದೊರೆತಿದೆ.

Vijaya Karnataka Web 12 Aug 2020, 9:30 pm
ಹಾಸನ: ಮಂಗಳೂರು ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಜೀಪ್‌ ಚಾಲಕ ಲೋಕೇಶ್‌ ಆಚಾರ್ಯ (36) ಎಂಬುವರು ಚನ್ನರಾಯಪಟ್ಟಣದ ವಸತಿ ಗೃಹದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web ಪೇದೆ ಆತ್ಮಹತ್ಯೆ
ಪೇದೆ ಆತ್ಮಹತ್ಯೆ


ಮಂಗಳೂರು ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಆಗಿರುವ ಬಂಟ್ವಾಳದ ಲೋಕೇಶ್‌ ಅವರು, ಮಂಗಳವಾರ ನಂದಗೋಕುಲ ಲಾಡ್ಜ್‌ನಲ್ಲಿ ಕೊಠಡಿ ಬಾಡಿಗೆ ಪಡೆದಿದ್ದರು. ಮಧ್ಯಾಹ್ನವರೆಗೂ ಕೊಠಡಿ ಬಾಗಿಲು ತೆರೆಯದ ಕಾರಣ, ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರ ಸಮ್ಮುಖದಲ್ಲಿ ಬಾಗಿಲ ಬೀಗ ಒಡೆದಾಗ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದರು. ‘ಕಳೆದ 7–8 ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಸ್ಥಳದಲ್ಲಿ ಇಲಿ ಪಾಷಾಣ ಬಾಟಲಿ ದೊರೆತಿದೆ. ತನ್ನ ಬಳಿ ಇರುವ 38 ಸಾವಿರ ಹಣವನ್ನು ಸಹೋದರನಿಗೆ ತಲುಪಿಸುವಂತೆ ಮರಣ ಪತ್ರ ಸಹ ಬರೆದಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ