ಆ್ಯಪ್ನಗರ

ವಾಹನ ಡಿಕ್ಕಿ ಹೊಡೆಸಿ ದಂಪತಿ ಕೊಲೆ..! ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

2015ರ ಜೂನ್‌ 17ರಂದು ಮೋಹನ್‌ಕುಮಾರ್‌ ಮತ್ತು ಪವಿತ್ರಾ ಬ್ಯಾಡರಹಳ್ಳಿಯಿಂದ ಚನ್ನರಾಯಪಟ್ಟಣಕ್ಕೆ ಬರುತ್ತಿದ್ದ ವೇಳೆ ಲತೇಶ್‌ ಮತ್ತು ದೀಪಕ್‌ ಟಾಟಾ ಸುಮೋದಲ್ಲಿ ಹಿಂದಿನಿಂದ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸ್ಥಳದಲ್ಲೇ ಮೃತಪಟ್ಟರು.

Vijaya Karnataka 24 Aug 2021, 10:42 am

ಹೈಲೈಟ್ಸ್‌:

  • ಜೀವವನ್ನೇ ತೆಗೆದಿತ್ತು ಆಸ್ತಿ ಕಲಹ
  • ಅಪ್ರಾಪ್ತ ಮಕ್ಕಳ ತಂದೆ-ತಾಯಿ ಹತ್ಯೆ
  • ಘಟನೆ ನಡೆದ 6 ವರ್ಷಗಳ ಬಳಿಕ ತೀರ್ಪು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bike
ವಾಹನ ಡಿಕ್ಕಿ ಹೊಡೆಸಿ ದಂಪತಿ ಕೊಲೆ..! ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಚನ್ನರಾಯಪಟ್ಟಣ (ಹಾಸನ): ಆಸ್ತಿ ಆಸೆಗಾಗಿ ದಂಪತಿಯನ್ನು ಕೊಲೆ ಮಾಡಿದ ನಾಲ್ವರು ಆರೋಪಿಗಳಿಗೆ ಪಟ್ಟಣದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಎನ್‌. ಸಂಶಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ತಾಲೂಕಿನ ಬಾಗೂರು ಹೋಬಳಿ ಬ್ಯಾಡರಹಳ್ಳಿಯ ಮೋಹನ್‌ಕುಮಾರ್‌ ಮತ್ತು ಅವರ ಪತ್ನಿ ಪವಿತ್ರಾ ಕೊಲೆಯಾದವರು. ಇದೇ ಗ್ರಾಮದ ಲತೇಶ್‌, ಈತನ ತಂದೆ ಜಗದೀಶ ಮತ್ತು ಪವಿತ್ರಾ ತಂಗಿಯ ಗಂಡ ನಾಗರಾಜ್‌ ಹಾಗೂ ಸಾತೇನಹಳ್ಳಿಯ ದೀಪಕ್‌ ಆರೋಪಿಗಳು. ಘಟನೆ ನಡೆದ 6 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ.

ಮೃತ ಮೋಹನ್‌ಕುಮಾರ್‌ ಪತ್ನಿ ಪವಿತ್ರಾಳ ಸಹೋದರಿ ಪ್ರತಿಪ ಅವರ ಪತಿ ನಾಗರಾಜ್‌, ತನ್ನ ಮಾವನ ಆಸ್ತಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಇದೇ ಉದ್ದೇಶಕ್ಕಾಗಿ 2015ರ ಜೂನ್‌ 17ರಂದು ಮೋಹನ್‌ಕುಮಾರ್‌ ಮತ್ತು ಪವಿತ್ರಾ ಬ್ಯಾಡರಹಳ್ಳಿಯಿಂದ ಚನ್ನರಾಯಪಟ್ಟಣಕ್ಕೆ ಬರುತ್ತಿದ್ದ ವೇಳೆ ಲತೇಶ್‌ ಮತ್ತು ದೀಪಕ್‌ ಟಾಟಾ ಸುಮೋದಲ್ಲಿ ಹಿಂದಿನಿಂದ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸ್ಥಳದಲ್ಲೇ ಮೃತಪಟ್ಟರು.

ಹಾಸನ: ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ
ಇವರ ಹಿಂದೆ ಬರುತ್ತಿದ್ದ ಅಣ್ಣೇಗೌಡ ಮತ್ತು ವಿಜಯಕುಮಾರ್‌ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿಗಳಾಗಿದ್ದ ಭೀಮಾಶಂಕರ್‌ ಗುಳೇದ್‌ ಹಾಗೂ ವಿಜಯಕೃಷ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಲತೇಶ್‌, ಜಗದೀಶ್‌ ಮತ್ತು ಮೋಹನ್‌ಕುಮಾರ್‌ ನಡುವೆ ಈ ಹಿಂದೆಯೂ ಸಣ್ಣ ಪುಟ್ಟ ಜಗಳ ನಡೆದಿದ್ದು ಘಟನೆಗೆ ವರ್ಷದ ಮೊದಲು ಇದೇ ಆರೋಪಿಗಳು ಬೇರೆ ವಾಹನದಿಂದ ದಂಪತಿಗಳಿಗೆ ಗುದ್ದಿಸಿ ಕೊಲೆ ಮಾಡುವ ಪ್ರಯತ್ನ ನಡೆಸಿ ವಿಫಲರಾಗಿದ್ದರೆಂದು ಸರಕಾರಿ ಅಭಿಯೋಜಕ ಕೆ.ಎಸ್‌.ನಾಗೇಂದ್ರ ತಿಳಿಸಿದ್ದಾರೆ.

ಹಾಸನ: ಹಾಲು ಮಾರಿದ ದುಡ್ಡಿಗಾಗಿ ಸ್ವಂತ ತಾಯಿಯನ್ನೇ ಕೊಂದ ಪುತ್ರರು? ಕೊಲೆ ಬಳಿಕ ಹೈಡ್ರಾಮ?
ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಜತೆಗೆ ತಲಾ 25 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಮೂರನೇ ಆರೋಪಿಯಾದ ನಾಗರಾಜ ಇದೇ ಪ್ರಕರಣದಲ್ಲಿ ನಕಲಿ ಚೆಕ್‌ ನೀಡಿ ವಂಚಿಸಿದ ಹಿನ್ನೆಲೆಯಲ್ಲಿ ಆತನಿಗೆ 4 ವರ್ಷ ಕಠಿಣ ಕಾರಾಗೃಹ ಮತ್ತು 20 ಸಾವಿರ ರೂ. ಹೆಚ್ಚುವರಿ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.

ಮೃತ ಮೋಹನ್‌ ಕುಮಾರ್‌ ಮತ್ತು ಪವಿತ್ರಾರ ಇಬ್ಬರು ಅಪ್ರಾಪ್ತ ಮಕ್ಕಳಿಗೆ ದಂಡದ ಮೊತ್ತದಲ್ಲಿ ತಲಾ 35 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡುವಂತೆಯೂ ತೀರ್ಪಿನಲ್ಲಿಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಬಿ.ನಾಗಸುಂದ್ರಮ್ಮ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಕೆ. ಎಸ್‌. ನಾಗೇಂದ್ರ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ