ಆ್ಯಪ್ನಗರ

ಡಿಕೆಶಿ ಬಂಧನ ಬಳಿಕ ಕಾಂಗ್ರೆಸ್‌ನಿಂದ ಕಲ್ಲು ತೂರಾಟ ಕೃತ್ಯ: ನಳಿನ್ ಕುಮಾರ್ ಕಟೀಲ್

ದೇಶದ ಸಂವಿಧಾನ ಮೇಲೆ ಗೌರವ ಇರುವವರು ತನಿಖೆ ಎದುರಿಸುತ್ತಾರೆ. ಆದರೆ, ಸಂವಿಧಾನದ ಮೇಲೆ ಗೌರವ ಇರದವರು ಕಲ್ಲು ತೂರಾಟ ನಡೆಸುತ್ತಾರೆಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

Vijaya Karnataka Web 4 Sep 2019, 1:04 pm
ಹಾಸನ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮಾರುಕಟ್ಟೆಗೆ ಇಳಿದು ಕಲ್ಲು ತೂರಾಟದಲ್ಲಿ ತೊಡಗಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆರೋಪಿಸಿದ್ದಾರೆ.
Vijaya Karnataka Web nalin kumar kattel


ಜಿಲ್ಲೆಯಲ್ಲಿ ಪ್ರಮುಖ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕಾನೂನು ಎಲ್ಕರಿಗೂ ಒಂದೆ. ಡಿಕೆಶಿ ವಿರುದ್ಧ ಎರಡು ವರ್ಷದಿಂದ ತನಿಖೆ ನಡೆಯುತ್ತಿದೆ. ಸಂವಿಧಾನ, ಕಾನೂನು ಮೇಲೆ ಗೌರವ ಇರುವವರು ತನಿಖೆ ಎದುರಿಸುತ್ತಾರೆ. ಗೌರವ, ನಂಬಿಕೆ ಇಲ್ಲದವರು ಕಲ್ಲು ತೂರುತ್ತಾರೆ ಎಂದು ಟೀಕಿಸಿದರು.

ಬಿಜೆಪಿ ಪಾಲಿಗೆ ಇದು ಸ್ವರ್ಣಯುಗ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಧ್ವಜ ಹಾರಲಿದೆ ಎಂದು ದೃಢವಿಶ್ವಾಸ ವ್ಯಕ್ತಪಡಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕಳೆದ ನಾಲ್ಕೈದು ದಿನಗಳಿಂದ ತೀವ್ರ ವಿಚಾರಣೆ ನಡೆಸಿದ ಬಳಿಕ ಡಿ ಕೆ ಶಿವಕುಮಾರ್ ಅವರು ತನಿಖೆಗೆ ಸೂಕ್ತವಾಗಿ ಸಹಕರಿಸುತ್ತಿಲ್ಲವೆಂದು ಇಡಿ ಅಧಿಕಾರಿಗಳು ಮಂಗಳವಾರ ರಾತ್ರಿ ಅವರನ್ನು ಬಂಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ