ಆ್ಯಪ್ನಗರ

ಹಾಸನದಲ್ಲಿ ಮತ್ತೊಂದು ಕೋವಿಡ್‌ ಸಾವು; ಮೃತರ ಸಂಖ್ಯೆ 7ಕ್ಕೆ ಏರಿಕೆ‌

ಮೃತದೇಹವನ್ನು ತಾಲೂಕು ನೋಡಲ್ ಅಧಿಕಾರಿ ಡಾ ನರಸೇಗೌಡ ಮಾರ್ಗ ದರ್ಶನದಲ್ಲಿ ಸರಕಾರಿ ನಿಯಮಾನುಸಾರ ಸುರಕಕ್ಷತಾ ಕ್ರಮಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ತಿಳಿಸಿದ್ದಾರೆ.

Vijaya Karnataka Web 4 Jul 2020, 3:15 pm
ಹಾಸನ: ಹಾಸನ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ ಮತ್ತೊಂದು ಸಾವು ಸಂಭವಿಸಿದೆ.
Vijaya Karnataka Web ಕೊರೊನಾ
ಕೊರೊನಾ


ಹೊಳೆನರಸೀಪುರದಲ್ಲಿ ಬೇಕರಿ ಇಟ್ಟಕೊಂಡಿರುವ ಬೇಲೂರು ತಾಲೂಕಿನ 38 ವರ್ಷದ ವ್ಯಕ್ತಿ ನೆನ್ನೆ ತಮ್ಮ ಸ್ವ ಗೃಹದಲ್ಲಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಂತರ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಯಿತು.‌ ಈಗ ವರದಿ ಪಾಸಿಟಿವ್ ಎಂದು ಬಂದಿದೆ.

ಮೃತದೇಹವನ್ನು ತಾಲೂಕು ನೋಡಲ್ ಅಧಿಕಾರಿ ಡಾ ನರಸೇಗೌಡ ಮಾರ್ಗ ದರ್ಶನದಲ್ಲಿ ಸರಕಾರಿ ನಿಯಮಾನುಸಾರ ಸುರಕಕ್ಷತಾ ಕ್ರಮಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ತಿಳಿಸಿದ್ದಾರೆ.

ಇದರೊಂದಿಗೆ ಹಾಸನ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 7 ಕ್ಕೆ‌ ಏರಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ