ಆ್ಯಪ್ನಗರ

ಹಾಸನ: ಕಾಡಾನೆಗೆ ಆಪರೇಷನ್‌ ರೇಡಿಯೋ ಕಾಲರ್‌ ಯಶಸ್ವಿ

ಅರವಳಿಕೆ ತಜ್ಞರು ಗುರಿಕಾರರ ಮೂಲಕ ಚುಚ್ಚುಮದ್ದು ಕೊಡಿಸಿದರು. ಘೀಳಿಟ್ಟು ಪ್ರಜ್ಞೆ ಕಳೆದುಕೊಂಡು ಕುಳಿತ ಆನೆಯನ್ನು ಸುತ್ತುವರಿದ ಸಿಬ್ಬಂದಿ ಕ್ಷಣಮಾತ್ರದಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ರೇಡಿಯೋ ಕಾಲರ್‌ ಹಾಕಿದ್ದಲ್ಲದೆ ಅದರ ಪ್ರಯೋಗಿಕ ಪರೀಕ್ಷೆ ನಡೆಸಿದರು

Vijaya Karnataka Web 22 Jan 2021, 8:26 pm
ಹಾಸನ: ಕಾಡಾನೆಗೆ ರೇಡಿಯೋ ಕಾಲರ್‌ ಅಳವಡಿಸುವ ಕಾರ್ಯಾಚರಣೆ ಎರಡನೇ ದಿನವಾದ ಶುಕ್ರವಾರ ಯಶಸ್ವಿಯಾಯಿತು.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಆಲೂರು ತಾಲೂಕು ನಾಗಾವರದ ಕ್ಯಾಂಪ್‌ನಿಂದ ಅಭಿಮನ್ಯು, ಗಣೇಶ, ಕೃಷ್ಣ ಪಳಗಿದ ಆನೆಗಳೊಂದಿಗೆ ಮಾವುತರು ಮತ್ತು ಸಿಬ್ಬಂದಿ ಬೆಳಗ್ಗೆ ಕಾಡಾನೆಯನ್ನು ಬೆನ್ನಟ್ಟಿ ಹೋದ ತಂಡಕ್ಕೆ ಮಧ್ಯಾಹ್ನ 2.45ರಿಂದ 3 ಗಂಟೆ ಸಮಯದಲ್ಲಿ ಬಡ್ಲರಕೊಪ್ಪಲು ಕಸ್ತೂರಿ ಅವರ ತೋಟದ ಬಳಿ ಸುಮಾರು 40 ವರ್ಷ ಪ್ರಾಯದ ಆನೆ ಪತ್ತೆಯಾಯಿತು.

ಈ ಹಿಂದೆ ರೇಡಿಯೋ ಕಾಲರ್‌ ಹಾಕಿದ್ದ ಆನೆ ಅದನ್ನು ಬೀಳಿಸಿಕೊಂಡು ಸಂಪರ್ಕ ಕಡಿತಗೊಳಿಸಿತ್ತು. ಇದೀಗ ಅದೇ ಆನೆ ಪತ್ತೆಮಾಡಿ ಕಾಲರ್‌ ಅಳವಡಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ.
ಬಸವರಾಜು ಡಿಎಫ್‌ಒ ಹಾಸನ

ಕೂಡಲೇ ಗುಂಪಿನಿಂದ ಪ್ರತ್ಯೇಕಗೊಳಿಸಿ ಅರವಳಿಕೆ ತಜ್ಞರು ಗುರಿಕಾರರ ಮೂಲಕ ಚುಚ್ಚುಮದ್ದು ಕೊಡಿಸಿದರು. ಘೀಳಿಟ್ಟು ಪ್ರಜ್ಞೆ ಕಳೆದುಕೊಂಡು ಕುಳಿತ ಆನೆಯನ್ನು ಸುತ್ತುವರಿದ ಸಿಬ್ಬಂದಿ ಕ್ಷಣಮಾತ್ರದಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ರೇಡಿಯೋ ಕಾಲರ್‌ ಹಾಕಿದ್ದಲ್ಲದೆ ಅದರ ಪ್ರಯೋಗಿಕ ಪರೀಕ್ಷೆ ನಡೆಸಿದರು. ಅಂತಿಮವಾಗಿ ಆನೆಯ ದೇಹದ ಮೇಲೆ ನೀರುಹಾಕಿ ಪ್ರಜ್ಞೆ ಮರುಕಳಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಪ್ರಜ್ಞೆ ಬಂದ ಕೂಡಲೇ ಮೈಕೊಡವಿಕೊಂಡು ಮೇಲೆದ್ದ ದಷ್ಟಪುಷ್ಟ ಆನೆ ಪುನ: ಕಾಡಿನತ್ತ ಹೆಜ್ಜೆ ಹಾಕಿತು. ಬೆಳಗ್ಗಿನಿಂದ ನಡೆದ ಕಾರ್ಯಾಚರಣೆ ಯಶಸ್ವಿಯಾದ ಖುಷಿಯಲ್ಲಿ ಅರಣ್ಯಾಧಿಕಾರಿಗಳು, ಸಿಬ್ಬಂದಿ, ಮಾವುತರು ಕ್ಯಾಂಪ್‌ಗೆ ಹಿಂತಿರುಗಿದರು.

ಸಿಸಿಎಫ್‌ ಡಾ.ಶೇಖರ್‌, ವಲಯ ಅರಣ್ಯಾಧಿಕಾರಿ ವಿನಯಚಂದ್ರ, ಹರೀಶ್‌, ಅರವಳಿಕೆ ತಜ್ಞರಾದ ಡಾ.ಮುಜೀದ್‌, ಡಾ.ಮುರುಳಿ, ಡಾ.ಸನತ್‌ಕುಮಾರ್‌, ಗುರಿಕಾರ ವೆಂಕಟೇಶ್‌ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಯುವಕರು ಮರವೇರಿ ದೂರದಿಂದಲೇ ಕಾರ್ಯಾಚರಣೆಯನ್ನು ವೀಕ್ಷಿಸಿ ಸಂತಸಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ