ಆ್ಯಪ್ನಗರ

ಅಂತಾಷ್ಟ್ರೀಯ ನಾಟಕೋತ್ಸವಕ್ಕೆ ಕದಡಿದ ನೀರು

ಅಂತಾಷ್ಟ್ರೀಯ ನಾಟಕೋತ್ಸವಕ್ಕೆ ಕದಡಿದ ನೀರು ಸಾಣೆಹಳ್ಳಿ ಶ್ರೀಮಠದ ಶಿವಸಂಚಾರ ನಾಟಕ ತಂಡದಿಂದ ಪ್ರದರ್ಶನ ಜಾವಗಲ್‌: ಸಾಣೆಹಳ್ಳಿ ಶ್ರೀಮಠದ ಶಿವಸಂಚಾರ ನಾಟಕ ತಂಡವು ...

Vijaya Karnataka 22 Nov 2019, 5:00 am
ಜಾವಗಲ್‌: ಸಾಣೆಹಳ್ಳಿ ಶ್ರೀಮಠದ ಶಿವಸಂಚಾರ ನಾಟಕ ತಂಡವು ಕೊಲ್ಕತ್ತದಲ್ಲಿನಡೆಯಲ್ಲಿರುವ ಅಂತಾರಾಷ್ಟ್ರೀಯ ನಾಟಕೋತ್ಸವಕ್ಕೆ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ತಂಡ ಎಂದು ಸಾಹಿತಿ ಚಟ್ಟನಹಳ್ಳಿ ಮಹೇಶ್‌ ತಿಳಿಸಿದರು.
Vijaya Karnataka Web performance by the shivasanchara drama team of sanahalli srimath
ಅಂತಾಷ್ಟ್ರೀಯ ನಾಟಕೋತ್ಸವಕ್ಕೆ ಕದಡಿದ ನೀರು


ಜಾವಗಲ್‌ ಹೋಬಳಿ ಕಲಾಸಕ್ತರ ಸಮೂಹ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಜಾವಗಲ್‌ ಮಾಡೆಲ್‌ ಶಾಲೆಯ ಆವರಣದಲ್ಲಿಏರ್ಪಡಿಸಲಾಗಿರುವ ಶಿವಸಂಚಾರ ನಾಟಕೋತ್ಸವ ಕಾರ‍್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿಮಾತನಾಡಿದರು.

ಶಿವಸಂಚಾರ ನಾಟಕ ತಂಡದ ಕಲಾವಿದರು 'ಕದಡಿದ ನೀರು' ಎಂಬ ನಾಟಕವನ್ನು ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿಪ್ರರ್ದಶಿಸಲಿದ್ದಾರೆ ಎಂದರು.

ಶಿವಸಂಚಾರ ತಂಡದವರು, ಉತ್ತಮ ಅಭಿನಯ, ಧÜ್ವನಿ, ಬೆಳಕು, ಧ್ವನಿ ಏರಿಳಿತ, ಬೆಳಕಿನ ವಿನ್ಯಾಸ, ಪ್ರಬುದ್ಧ ನಟನಾ ಚಾತುರ್ಯದಿಂದ ನಾಟಕ ಪ್ರದರ್ಶಿಸಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಸದಸ್ಯೆ ಲೋಲಾಕ್ಷಮ್ಮ ನಾಟಕವು ಮನರಂಜನೆಯೊಂದಿಗೆ ಮನಸ್ಸಿಗೆ ಉಲ್ಲಾಸ, ಆನಂದ ಉಂಟುಮಾಡುತ್ತದೆ. ನಾಟಕಗಳು ಕಣ್ಮರೆ ಆಗುತ್ತಿರುವ ಈ ದಿನಗಳಲ್ಲಿಶಿವಸಂಚಾರ ನಾಟಕ ತಂಡವು ಉತ್ತಮ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಗ್ರಾಮೀಣಜನರಲ್ಲಿಸಾಮಾಜಿಕ ಜಾಗೃತಿ ಮೂಡಿಸುವ , ನಾಟಕಗಳ ಮೇಲೆ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಹಳೇಬೀಡು ಜಿಪಂ ಸದಸ್ಯ ಮಂಜಪ್ಪ , ತಾಪಂ ಸದಸ್ಯ ವಿಜಯಕುಮಾರ್‌, ಕಾರ‍್ಯಕ್ರಮದ ಸಂಚಾಲಕ ಕೆ.ಸಿ.ನಾಗರಾಜು, ಅನಿಲ್‌ ಕುಮಾರ್‌ , ಪ್ರಸನ್ನ ಕುಮಾರ್‌, ತಾಪಂ ಮಾಜಿ ಸದಸ್ಯ ಸೋಮಶೇಖರ್‌ ಮಾತನಾಡಿದರು.

ಹಿರಿಯ ಸ್ವಾತಂತ್ರತ್ರ್ಯ ಹೋರಾಟಗಾರ ನೇರ್ಲಿಗೆ ಬಸವರಾಜು, ಎಪಿಎಂಸಿ ಸದಸ್ಯ ಧರ್ಮಪ್ಪ, ಸೋಮೇಗೌಡ , ಮಹಾಲಿಂಗಪ್ಪ, ಜಿ.ವಿ. ಬಸವರಾಜು, ಕಾಂತರಾಜು ಹಳೇಬೀಡು, ಸರ್ವೇಶ್‌, ಬಿ ಎಸ್‌.ಮಹದೇವಪ್ಪ ಮತ್ತಿತರರು ಭಾಗವಹಿಸಿದ್ದರು. ದೇಶಭಕ್ತನ ಕುಟುಂಬದ ಸುತ್ತ ಹೆಣೆದ ಕದಡಿದ ನೀರು ಎಂಬ ನಾಟಕವನ್ನು ಕಲಾವಿದರು ಆತ್ಯುತ್ತಮವಾಗಿ ಪ್ರದರ್ಶಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ