ಆ್ಯಪ್ನಗರ

ಪ್ರಧಾನಿ ಮೋದಿ ಇಮೇಜ್ ಡೌನ್ ಆಗಿದೆ: ಕಾಂಗ್ರೆಸ್ ನಾಯಕ ಉಗ್ರಪ್ಪ

ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಇಮೇಜ್ ಕಡಿಮೆ ಆಗಿದೆ. ಅದನ್ನ ಹೆಚ್ಚು ಮಾಡಬೇಕು ಎನ್ನೋ ಸರ್ಕಸ್‌ಗೆ ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಟೀಕಿಸಿದರು.

Vijaya Karnataka Web 2 Nov 2021, 7:34 pm
ಹಾಸನ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಇಮೇಜ್ ಕಡಿಮೆ ಆಗಿದೆ. ಅದನ್ನ ಹೆಚ್ಚು ಮಾಡಬೇಕು ಎನ್ನೋ ಸರ್ಕಸ್‌ಗೆ ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಟೀಕಿಸಿದರು.
Vijaya Karnataka Web vs ugrappa


ಹಾಸನಾಂಬ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪೆಟ್ರೋಲ್ ಡೀಸಲ್ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ರಾಜ್ಯ, ಕೇಂದ್ರ ಸರಕಾರ ತೆರಿಗೆ ಏರಿಕೆ ಮಾಡಿದೆ. ಇದನ್ನು ಕಡಿಮೆ ಮಾಡುವ ಅಥವಾ ಬದಲಾಯಿಸುವ ಮನಸ್ಸನ್ನು ದೇವಿ ಕೊಡಲಿ ಎಂದು ಪ್ರಾರ್ಥಿಸಿರುವೆ ಎಂದು ಹೇಳಿದರು.

ದೇಶದ ಆರ್ಥಿಕ ಸಂಕಷ್ಟದಲ್ಲಿದೆ ಈ ಸ್ಥಿತಿ ನಿರ್ಮಾಣ ಆಗಿರುವಾಗ ಜನರಿಗೆ ಒಳಿತಾಗಲಿ, ಇಡೀ ದೇಶಕ್ಕೆ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿದೆ ಎಂದರು. 2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇತ್ತು ಆದರೆ, ಈಗ ಬೆಲೆ ಕಡಿಮೆ ಇದ್ದರೂ, ದರ ಹೆಚ್ಚಾಗಿದೆ. ಅಕ್ಕ ಪಕ್ಕದ ದೇಶಗಳಲ್ಲಿ ಬೆಲೆ ಕಡಿಮೆಯಿದ್ದರೂ ಭಾರತದಲ್ಲಿ ಮಾತ್ರ ಇಷ್ಟು ದೊಡ್ಡ ಮಟ್ಟ ದಲ್ಲಿ ಬೆಲೆ ಏರಿಕೆ ಆಗಿದೆ. ದೇಶದ ನಾಯಕತ್ವ ಇದನ್ನ ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಡಿಕೆಶಿ ಕುರಿತು ವಿವಾದಾತ್ಮಕ ಮಾತು ; ಕೊನೆಗೂ ಶಿಸ್ತು ಸಮಿತಿ ನೋಟಿಸ್​ಗೆ ಉತ್ತರಿಸಿದ ವಿಎಸ್​ ಉಗ್ರಪ್ಪ

ಉಪ ಚುನಾವಣೆ ಫಲಿತಾಂಶ ಬಂದಿದೆ ಜನರ ತೀರ್ಪನ್ನು ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡುತ್ತೇವೆ ಇದು ಮಿಶ್ರ ಪ್ರತಿಕ್ರಿಯೆ ಆಗಿದೆ. ಆದರೆ, ಈ ಚುನಾವಣೆಯಲ್ಲಿ ಒಂದು ಸ್ಪಷ್ಟ ಸಂದೇಶ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಮನಸ್ಸಿನ ನೋವು ಅರ್ಥಮಾಡಿಕೊಂಡು ನಡೆಯಬೇಕು. ಮುಂದಿನ ಚುನಾವಣೆಯಲ್ಲಿ ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎನ್ನೋ ನಂಬಿಕೆ ಇದೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿವಾದಾತ್ಮಕ ವಿಡಿಯೋ ಎಫೆಕ್ಟ್: ಕಾಂಗ್ರೆಸ್ ಸದಸ್ಯತ್ವದಿಂದ ಸಲೀಂ ಅಮಾನತು; ಉಗ್ರಪ್ಪಗೆ ನೋಟಿಸ್‌

ಈಶ್ವರಪ್ಪ ಈ ರಾಜ್ಯದ ಉಪ ಮುಖ್ಯಮಂತ್ರಿ ಆಗಿದ್ದರು. ಬಿಜೆಪಿ ಹಿರಿಯ ನಾಯಕ ಹಿರಿತನ ಅರ್ಥಮಾಡಿಕೊಂಡು ಮಾತಾಡೋದು ಒಳ್ಳೆಯದು. ಹಿಂದೆ ಕಾಂಗ್ರೆಸ್ ಮುಕ್ತ ಭಾರತ ಮಾಡೋದಾಗಿ ಘೋಷಣೆ ಹಾಕಿದ್ದರು ಈಶ್ವರಪ್ಪ ತಮ್ಮ ಹೈ ಕಮಾಂಡ್ ಓಲೈಕೆಗೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡ್ತಾರೆ. ಅವರು ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು. ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಳಿಲ್ಲ, ಕಾಂಗ್ರೆಸ್ ಒಂದೇ ಡಿಕೆಶಿ ಕಾಂಗ್ರೆಸ್ ರಾಜ್ಯ ಅಧ್ಯಕ್ಷರು ಸಿದ್ದರಾಮಯ್ಯ ನಮ್ಮ ಸಿ.ಎಲ್.ಪಿ ನಾಯಕರು ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ