ಆ್ಯಪ್ನಗರ

ರೇವಣ್ಣ ಮೂಗರ್ಜಿ ಹಾಕಿದಷ್ಟೂ ಹೆಚ್ಚೆಚ್ಚು ಅಭಿವೃದ್ಧಿ ಕೆಲ್ಸ ಮಾಡ್ತೇನೆ: ಪ್ರೀತಂ ಜೆ.ಗೌಡ ಸವಾಲು

ಮೂಗರ್ಜಿ ಬರೆದು ಹೆಜ್ಜೆ, ಹೆಜ್ಜೆಗೂ ತೊಂದರೆ ನೀಡುವುದೇ ರಾಜಕಾರಣ ಎಂದು ಶಾಸಕ ಎಚ್.ಡಿ.ರೇವಣ್ಣ ಭಾವಿಸಿದ್ದರೆ ಅದೆಲ್ಲವನ್ನು ಮೆಟ್ಟಿನಿಂತು ಹೆಚ್ಚೆಚ್ಚು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಶಾಸಕ ಪ್ರೀತಂ ಜೆ.ಗೌಡ ಸವಾಲು ಹಾಕಿದರು.

Vijaya Karnataka Web 26 Jan 2021, 7:11 pm
ಹಾಸನ: ಮೂಗರ್ಜಿ ಬರೆದು ಹೆಜ್ಜೆ, ಹೆಜ್ಜೆಗೂ ತೊಂದರೆ ನೀಡುವುದೇ ರಾಜಕಾರಣ ಎಂದು ಶಾಸಕ ಎಚ್.ಡಿ.ರೇವಣ್ಣ ಭಾವಿಸಿದ್ದರೆ ಅದೆಲ್ಲವನ್ನು ಮೆಟ್ಟಿನಿಂತು ಹೆಚ್ಚೆಚ್ಚು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಶಾಸಕ ಪ್ರೀತಂ ಜೆ.ಗೌಡ ಸವಾಲು ಹಾಕಿದರು.
Vijaya Karnataka Web PREETHAM GOWDA
ಪ್ರೀತಂ ಜಿ ಗೌಡ, ಶಾಸಕ (ಸಂಗ್ರಹ ಚಿತ್ರ)


ಹೊಳೆನರಸೀಪುರ ಹಂಗರಹಳ್ಳಿ ರೈಲ್ವೆ ಮೇಲ್ಸೆತುವೆ ಮಾಡ್ಸಿದವರಿಗೆ ಹಾಸನದ ಫ್ಲೈಓವರ್ ಮಾಡಿಸಲು ಏಕೆ ಆಗಲಿಲ್ಲ, ತಾನು ಮಾಡಿದರೆ ಸಾಧನೆ, ಮತ್ತೊಬ್ಬರು ಮಾಡಿದರೆ ಅಸೂಹೆ. ದ್ವಂದ್ವ ನೀತಿಯ ರಾಜಕಾರಣವನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಬಿಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಜಿಲ್ಲೆಯ ಜನತೆ ಅನುಭವಿಸುತ್ತಿದ್ದ ತೊಂದರೆ ಗಮನಿಸಿ ಕ್ಷೇತ್ರದ ಶಾಸಕನಾಗಿ ರೈಲ್ವೆ ಮೇಲ್ಸೇತುವೆಗೆ ಇದ್ದ ಅಡೆತಡೆ ನಿವಾರಣೆ ಮಾಡಿ ಕಾಮಗಾರಿ ಮಾಡಿಸುತ್ತಿದ್ದೇನೆ ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಹೇಳಿದರು.

ಹಾಸನದ ಸಂಪೂರ್ಣ ಅಭಿವೃದ್ಧಿ ನಮ್ಮ ಕನಸು..! ಐಐಟಿ, ಏರ್‌ಪೋರ್ಟ್‌ಗೆ ಬೇಡಿಕೆಯಿಟ್ಟ ಎಚ್‌ಡಿಡಿ

ಹೊಳೆನರಸೀಪುರಕ್ಕೆ ಪ್ರವಾಹ ಬರುತ್ತೇ, ಬರ ಬರುತ್ತೆ, ಯಾವ ಮಳೆ ಬಂದು ಹಾನಿಯಾಗಿದೆ ಎಂದು ಅಧಿಕಾರಿಗಳ ಮೇಲೆ ಒತ್ತಡ, ಬೆದರಿಕೆ ತಂತ್ರ ಉಪಯೋಗಿಸಿ ನಾಲ್ಕುಕೋಟಿ ಮಂಜೂರು ಮಾಡಿಸಿಕೊಂಡರು ಎಂದು ಪ್ರಶ್ನಿಸಿದರು.

ದಶಕಗಳ ಕಾಲ ರಾಜಕಾರಣ ಮಾಡಿ ಸಚಿವರಾಗಿ, ಅವರ ಸಹೋದರರೇ ಮುಖ್ಯಮಂತ್ರಿ, ತಂದೆ ಮಾಜಿ ಪ್ರಧಾನಿಯಾದರೂ ಜಿಲ್ಲೆಯ ಜನರ ಋಣ ತೀರಿಸುವುದು ಬಾಕಿ ಇದೆ ಎನ್ನುವುದಾದರೆ ಇದುವರೆಗೆ ಮಾಡಿದ್ದಾದರೂ ಏನು? ಆಲೂರು ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಏಕೆ ಸಾಧ್ಯವಾಗಲಿಲ್ಲ ಅಂತಹ ಇಚ್ಛಾಶಕ್ತಿ ಕೊರತೆಯೇ ಎಂದು ಪ್ರಶ್ನೆಗಳ ಸುರಿಮಳೆಗೆರೆದರು.

ಹಾಸನ: ಕಾಡಾನೆಗೆ ಆಪರೇಷನ್‌ ರೇಡಿಯೋ ಕಾಲರ್‌ ಯಶಸ್ವಿ

ಎರಡು ಗ್ರಾಂ ಹೆಚ್ಚು
ರೇವಣ್ಣ ಪ್ರಥಮ ಬಾರಿ ಶಾಸಕರಾಗಿ ಮಾಡಿದ ಅಭಿವೃದ್ಧಿಗಿಂತ ತಾನು ಶಾಸಕನಾಗಿ ಎರಡೂವರೆ ವರ್ಷದಲ್ಲಿ ತನ್ನ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕೆಲಸ ಎರಡು ಗ್ರಾಂ ಹೆಚ್ಚು ಎಂಬುದು ಅವರ ಗಮನಕ್ಕೆ ಬಂದಿದೆ. ಆ ಕಾರಣದಿಂದಲೇ ಹಾಸನ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬರುತ್ತಿದೆ ಉಳಿದ ಕ್ಷೇತ್ರಕ್ಕೆ ಬರುತ್ತಿಲ್ಲ ಎಂದು ದೂರುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ