ಆ್ಯಪ್ನಗರ

ಎಣಿಕೆ ಕೇಂದ್ರಕ್ಕೆ ತೆರಳುವ ಮುನ್ನ ದೇವರ ಮೊರೆ ಹೋದ ರೇವಣ್ಣ ಕುಟುಂಬ

ಮತ ಎಣಿಕೆ ಕೇಂದ್ರಕ್ಕೆ ತೆರಳುವ ಮುನ್ನ ದೇವರ ಮೊರೆ ಹೋದ ರೇವಣ್ಣ ಕುಟುಂಬ ಮುನ್ನಡೆ ಸುದ್ದಿ ಕೇಳಿಬರುತ್ತಿದ್ದಂತೆ ದೇವರಿಗೆ 101 ಈಡುಗಾಯಿ ಹೊಡೆದು, ಹರಕೆ ತೀರಿಸಿದ ನಂತರ ಮತ ಎಣಿಕೆ ಕೇಂದ್ರದತ್ತ ಹೆಜ್ಜೆ ಹಾಕಿತು.

Vijaya Karnataka 24 May 2019, 5:00 am
ಹೊಳೆನರಸೀಪುರ : ಮತ ಎಣಿಕೆ ಕೇಂದ್ರಕ್ಕೆ ತೆರಳುವ ಮುನ್ನ ದೇವರ ಮೊರೆ ಹೋದ ರೇವಣ್ಣ ಕುಟುಂಬ ಮುನ್ನಡೆ ಸುದ್ದಿ ಕೇಳಿಬರುತ್ತಿದ್ದಂತೆ ದೇವರಿಗೆ 101 ಈಡುಗಾಯಿ ಹೊಡೆದು, ಹರಕೆ ತೀರಿಸಿದ ನಂತರ ಮತ ಎಣಿಕೆ ಕೇಂದ್ರದತ್ತ ಹೆಜ್ಜೆ ಹಾಕಿತು.
Vijaya Karnataka Web HSN-HSN23HNP1A


ಪಟ್ಟಣದ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ಗುರುವಾರ ಆಗಮಿಸಿದ ಎಚ್‌.ಡಿ. ರೇವಣ್ಣ, ಪ್ರಜ್ವಲ್‌ ರೇವಣ್ಣ ಹಾಗೂ ಭವಾನಿ ರೇವಣ್ಣ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಜ್ವಲ್‌ ಮುನ್ನಡೆ ವಿಚಾರ ತಿಳಿಯುತ್ತಿದ್ದಂತೆ 101 ಈಡುಗಾಯಿ ಹೊಡೆದು ಹರಕೆ ತೀರಿಸಿದರು. ಬೆಂಬಲಿಗರೊಂದಿಗೆ ಗೆಲುವಿನ ವಿಶ್ವಾಸದಲ್ಲಿ ದೇವಾಲಯದಲ್ಲಿ ಕುಳಿತು ಮೂವರೂ ಪ್ರಸಾದ ಸೇವಿಸಿದರು.

ಮಾಧ್ಯಮದೊಂದಿಗೆ ಪ್ರಜ್ವಲ್‌ ರೇವಣ್ಣ ಮಾತನಾಡಿ, ದೇವೇಗೌಡರ ತ್ಯಾಗ, ಕುಲದೇವರ ಕೃಪೆ ಹಾಗೂ ಕ್ಷೇತ್ರದಲ್ಲಿ ನನ್ನ ತಂದೆ ಮಾಡಿದ ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಯಿತು. ಮೊದಲ ಚುನಾವಣೆ ಎದುರಿಸಿದ ನನಗೆ ಸ್ವಲ್ಪ ಭಯ ಇತ್ತು. ಆದರೆ, ಕಾರ್ಯಕರ್ತರ ಅವಿರತ ಶ್ರಮ ಮತ್ತು ಅಭಯ ನನಗೆ ಧೈರ್ಯ ತುಂಬಿಕೊಟ್ಟಿತು. ಗೆಲುವಿಗೆ ಮತದಾರರು ಕಾರಣರು. ಅವರಿಗೆ ನಾನು ಆಭಾರಿಯಾಗಿದ್ದೇನೆ. ನಿರುದ್ಯೋಗ, ಬಡತನ ಸಮಸ್ಯೆ ನಿವಾರಣೆಗೆ ಆದ್ಯತೆ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕೆಲಸ ಮಾಡಬೇಕೆಂದಿದ್ದೇನೆ ಎಂದರು.

ಹಾಸನದಲ್ಲಿ ಗೆಲುವಿನ ನಗೆ ಬೀರಿದರೂ ಸಂಭ್ರಮಾಚರಣೆಗೆ ತುಮಕೂರು ಹಾಗೂ ಮಂಡ್ಯ ಕ್ಷೇತ್ರದ ಸೋಲು ಅಡ್ಡಿಯಾಗಿತ್ತು. ಬೆಂಬಲಿಗರಲ್ಲಿ ದೊಡ್ಡಗೌಡರ ಸೋಲು ಬೇಸರ ಮೂಡಿಸಿತು. ಮೊಮ್ಮಗನಿಗೆ ಕ್ಷೇತ್ರ ಬಿಟ್ಟು ಕೊಟ್ಟ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸೋಲು ಅನುಭವಿಸುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ ಎಂಬುದು ಸಾರ್ವಜನಿಕರ ಸಾಂತ್ವನದ ಮಾತು ಕೇಳಿ ಬಂದಿತ್ತು. ಪ್ರಜ್ವಲ್‌ ಅಭಿಮಾನಿಗಳು ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿದರು. ಹರದನಹಳ್ಳಿ ಕುಲದೇವರು, ಮಾವಿನಕೆರೆ ರಂಗನಾಥಸ್ವಾಮಿ ಹಾಗೂ ಪಟ್ಟಣದ ರಾಘವೇಂದ್ರಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ