ಆ್ಯಪ್ನಗರ

ಗುರು ತೋರಿದ ದಾರಿ ತಿಂಗಳಮಾಮನ ತೇರು ಕಾರ‍್ಯಕ್ರಮ

ಆದಿಚುಂಚನಗಿರಿಮಠದ ಹಾಸನ ಮಠದ ವತಿಯಿಂದ ಶಂಭುನಾಥ ಸ್ವಾಮೀಜಿ ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಗುರುತೋರಿದ ದಾರಿ ತಿಂಗಳಮಾಮನ ತೇರು ಕಾರ‍್ಯಕ್ರಮದ 75ನೇ ಅಮೃತ ಹುಣ್ಣಿಮೆಯ ಕಾರ‍್ಯಕ್ರಮದ ನಿಮಿತ್ತ ಜಿಲ್ಲಾದ್ಯಂತ ಸಂಚರಿಸುತ್ತಿರುವ ಸಂಸ್ಮರಣೋತ್ಸವ ರಥ ಬುಧವಾರ ಪಟ್ಟಣಕ್ಕೆ ಆಗಮಿಸಿತು.

Vijaya Karnataka 10 Oct 2019, 5:00 am
ಚನ್ನರಾಯಪಟ್ಟಣ: ಆದಿಚುಂಚನಗಿರಿಮಠದ ಹಾಸನ ಮಠದ ವತಿಯಿಂದ ಶಂಭುನಾಥ ಸ್ವಾಮೀಜಿ ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಗುರುತೋರಿದ ದಾರಿ ತಿಂಗಳಮಾಮನ ತೇರು ಕಾರ‍್ಯಕ್ರಮದ 75ನೇ ಅಮೃತ ಹುಣ್ಣಿಮೆಯ ಕಾರ‍್ಯಕ್ರಮದ ನಿಮಿತ್ತ ಜಿಲ್ಲಾದ್ಯಂತ ಸಂಚರಿಸುತ್ತಿರುವ ಸಂಸ್ಮರಣೋತ್ಸವ ರಥ ಬುಧವಾರ ಪಟ್ಟಣಕ್ಕೆ ಆಗಮಿಸಿತು.
Vijaya Karnataka Web HSN9CRP2_16


ಹೊಳೇನರಸೀಪುರದಿಂದ ಆಗಮಿಸಿದ ರಥವನ್ನು ಮೈಸೂರು ರಸ್ತೆಯಲ್ಲಿರುವ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿಪರಿಸರ ಪ್ರೇಮಿ ಸಿ.ಎನ್‌.ಅಶೋಕ್‌, ಜಿಲ್ಲಾಒಕ್ಕಲಿಗರ ಸಂಘದ ನಿರ್ದೇಶಕ ಪಟೇಲ್‌ಮಂಜುನಾಥ್‌ ಹಾಗೂ ವಿವಿಧ ಶೈಕ್ಷಣಿಕ ವಿಭಾಗಗಳ ಪ್ರಾಂಶುಪಾಲರಾದ ಡಾ.ಎನ್‌.ಶಂಕರೇಶ್‌, ಮಳಲಿಗೌಡ, ಕುಮಾರ್‌, ಶಂಕರೇಗೌಡ ಹಾಗೂ ವಿದ್ಯಾರ್ಥಿಸಮುದಾಯ ಮತ್ತು ಶಿಕ್ಷಕರು ಪುಷ್ಪಾರ್ಚನೆಯ ಮೂಲಕ ಸ್ವಾಗತಿಸಿದರು.

ಮೆರವಣಿಗೆ: ಮೈಸೂರು ರಸ್ತೆಯಿಂದ ನವೋದಯ ವೃತ್ತದ ಮಾರ್ಗವಾಗಿ ಬಿ.ಎಂ.ರಸ್ತೆಯ ಮೂಲಕ ಮೆರವಣಿಗೆ ನಡೆಸಲಾಯಿತು.ಅರಸೀಕೆರೆ ರಸ್ತೆಗೆ ತಲುಪಿಸಲಾಯಿತು. ಮಾರ್ಗದ ನಡುವೆ ಭಕ್ತರು ತಮ್ಮ ನಮನ ಸಲ್ಲಿಸಿದರು.

3 ದಿನದ ಕಾರ‍್ಯಕ್ರಮ: ಗುರುತೋರಿದ ದಾರಿ ತಿಂಗಳ ಮಾಮನ ತೇರಿನ 6ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಹೋಮ ಹವನ, ಹಿರಿಯ ಜಗದ್ಗುಗುರುಗಳ ಸಂಸ್ಮರಣೆ ಹಾಗೂ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನಪಲ್ಲಕ್ಕಿ ಉತ್ಸವ, ಧಾರ್ಮಿಕ ಸಭಾ ಕಾರ‍್ಯಕ್ರಮದಲ್ಲಿಗುರುವಂದನೆ, ರಜತತುಲಾಭಾರ, ಬೆಳದಿಂಗಳೋತ್ಸವ ಹಾಗೂ ರಾಜ್ಯಮಟ್ಟದ ಮಹಿಳಾ ಸಮಾವೇಶವನ್ನು ಬೇಲೂರು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿಆಯೋಜನೆ ಮಾಡಲಾಗಿದೆ.

ಶ್ರೀಗಳ ಪುರಪ್ರವೇಶ:ಅ.13ರಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಪುರಪ್ರವೇಶ ಮಾಡಲಿದ್ದು, ಶ್ರೀಚನ್ನಕೇಶವಸ್ವಾಮಿ ದರ್ಶನದ ನಂತರ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಹೋಮ ಮತ್ತು ಪೂರ್ಣಾಹುತಿ ಕಾರ‍್ಯಕ್ರಮದಲ್ಲಿಪಾಲ್ಗೊಳ್ಳಲಿದ್ದಾರೆ. 14ರಂದು ಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ ಬೆಳಗ್ಗೆ 9ರಿಂದ ಆರಂಭಗೊಳ್ಳಲಿದ್ದು 1008 ಪೂರ್ಣಕುಂಭಸ್ವಾಗತ ಹಾಗೂ ಕಲಾತಂಡಗಳು ಮೆರವಣಿಗೆಯಲ್ಲಿಪಾಲ್ಗೊಳ್ಳಲಿವೆ. ಗುರುವಂದನೆಯ ನಂತರ ರಜತ ತುಲಾಭಾರ ಹಾಗೂ ಪುಷ್ಪವೃಷ್ಟಿ ನೆರವೇರಲಿದೆ. 15ರಂದು ಬೆಳಗ್ಗೆ 10.30ಕ್ಕೆ ರಾಜ್ಯಮಟ್ಟದ ಮಹಿಳಾ ಸಮಾವೇಶದೊಂದಿಗೆ ಸಂಸ್ಮರಣೋತ್ಸವ ಸಂಪನ್ನಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ