ಆ್ಯಪ್ನಗರ

ಸಿದ್ದರಾಮಯ್ಯ ಮೈಸೂರು ಪಟ್ಟು ಹಿಡಿದಿದ್ದಕ್ಕೆ ತುಮಕೂರಿನಲ್ಲಿ ಸ್ಪರ್ಧೆ

ಹೊಳೆನರಸೀಪುರ: ಸಿದ್ದರಾಮಯ್ಯ ಮೈಸೂರು ಕ್ಷೇತ್ರಕ್ಕೆ ಪಟ್ಟು ಹಿಡಿದ ಕಾರಣ ತಾನು ತುಮಕೂರಿನಲ್ಲಿ ಸ್ಪರ್ಧಿಸುವಂತಾಯಿತು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

Vijaya Karnataka 26 Mar 2019, 5:00 am
ಹೊಳೆನರಸೀಪುರ: ಸಿದ್ದರಾಮಯ್ಯ ಮೈಸೂರು ಕ್ಷೇತ್ರಕ್ಕೆ ಪಟ್ಟು ಹಿಡಿದ ಕಾರಣ ತಾನು ತುಮಕೂರಿನಲ್ಲಿ ಸ್ಪರ್ಧಿಸುವಂತಾಯಿತು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.
Vijaya Karnataka Web siddaramihha demand mysuru seat h d devegowda
ಸಿದ್ದರಾಮಯ್ಯ ಮೈಸೂರು ಪಟ್ಟು ಹಿಡಿದಿದ್ದಕ್ಕೆ ತುಮಕೂರಿನಲ್ಲಿ ಸ್ಪರ್ಧೆ


ನಾಮಪತ್ರ ಸಲ್ಲಿಸುವ ಮುನ್ನ ತಾಲೂಕಿನ ಹುಟ್ಟೂರು ಹರದನಹಳ್ಳಿ ಈಶ್ವರ ದೇವಾಲಯ, ಮಾವಿಕೆರೆ ಬೆಟ್ಟದ ಶ್ರೀರಂಗನಾಥಸ್ವಾಮಿ, ಹೊಳೆನರಸೀಪುರ ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ, ರಾಘವೇಂದ್ರಮಠ ಹಾಗೂ ಎದುರುಮುಖದ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದರು. ಸಚಿವ ಎಚ್‌.ಡಿ.ರೇವಣ್ಣ, ಪತ್ನಿ ಭವಾನಿ ಹಾಗೂ ವಿಧಾನ ಪರಿಷತ್ತಿನ ಸದಸ್ಯ, ಸಂಸದೀಯ ಕಾರ‍್ಯದರ್ಶಿ ಗೋಪಾಲಸ್ವಾಮಿ ಜತೆಗಿದ್ದರು.

ಬಳಿಕ ಮಾತನಾಡಿದ ಅವರು, ಕಾರ್ಯಕರ್ತರ ಒತ್ತಾಯ ಇದ್ದ ಮೇರೆಗೆ ತುಮಕೂರಿನಲ್ಲಿ ಸ್ಪರ್ಧಿಸುತ್ತಿದ್ದೇನೆ. ಬೆಂಗಳೂರು ಉತ್ತರದಿಂದ ಸ್ಪರ್ಧಿಸಲು ಸಹ ಒತ್ತಡ ಇತ್ತು. ಎರಡೂ ಕಡೆ ಸ್ಪರ್ಧೆ ಸರಿಯಲ್ಲ ಎಂದು ನಾನು ಹೇಳಿದ್ದೇನೆ. ಇದರಿಂದ ಒಂದು ಕ್ಷೇತ್ರ ಹೋದರೂ ಪರವಾಗಿಲ್ಲ ಎಂದು ಬೆಂಗಳೂರು ಉತ್ತರವನ್ನು ಜೆಡಿಎಸ್‌ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ ಎಂದರು.

ಮೈತ್ರಿ ಸರಕಾರದ ಗೆಲುವು ಮುಖ್ಯ. ಯಾರು ಅಭ್ಯರ್ಥಿ ಎನ್ನುವುದು ಮುಖ್ಯವಲ್ಲ. ತುಮಕೂರಿನಿಂದ ಪ್ರತಿಸ್ಪರ್ಧಿಯಾಗಿ ಮುದ್ದ ಹನುಮೇಗೌಡ ಸ್ಪರ್ಧೆ ವಿಚಾರವಾಗಿ, ನನಗೆ ಅದು ಸಂಬಂಧಪಡದ ವಿಚಾರ ಎಂದು ತಳ್ಳಿ ಹಾಕಿದರು.

1962 ರಿಂದ ಸತತ 58 ವರ್ಷಗಳ ಕಾಲ ಸುದೀರ್ಘ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ತಿಂಗಳಿಗೆ 10 ರೂ.ಮನೆ ಬಾಡಿಗೆ ಪಡೆದು ಹೊಳೆನರಸೀಪುರದಲ್ಲಿ ಇದ್ದುಕೊಂಡು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ನಾನು ನಂಬಿದ ದೈವ ಸಂಕಲ್ಪ ಏನಿದೆಯೋ ಅದರಂತೆ ನನ್ನ ರಾಜಕೀಯ ಜೀವನ ನಡೆದಿದೆ. ಸಂಪ್ರದಾಯ ನಡೆ ಅನುಸರಿಸುವುದು ದೇವೇಗೌಡರ ಕುಟುಂಬಕ್ಕೆ ಹೊಸದೇನಲ್ಲ. ಇದರಂತೆ ನಾಮಪತ್ರ ಸಲ್ಲಿಕೆಗೂ ಮುನ್ನ ದೇವಾಲಯಗಳ ಭೇಟಿ ಇಟ್ಟು ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಪ್ರತಿ ಬಾರಿ ಅದೃಷ್ಟ ಸಂಖ್ಯೆ 5 ಎಂಬಂತೆ ನಾಮಪತ್ರ ಸಲ್ಲಿಕೆಗೂ ಮುನ್ನ ಪಟ್ಟಣ ಸೇರಿದಂತೆ ತಾಲೂಕಿನ 5 ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ