ಆ್ಯಪ್ನಗರ

ನೀರಿನ ಸಮಸ್ಯೆ ಪರಿಹರಿಸಿ

ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯು ತಲೆ ಎದುರಾಗುವ ಮೊದಲೇ ಮುಂಜಾಗತ ಕ್ರಮಗಳನ್ನು ಎಲ್ಲಾ ಅಧಿಕಾರಿಗಳು ತೆಗೆದುಕೊಳ್ಳಬೇಕು ಇಲ್ಲದಿದ್ದರೇ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಎಚ್ಚರಿಸಿದರು.

Vijaya Karnataka 17 Dec 2018, 9:32 pm
ಅರಸೀಕೆರೆ : ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯು ತಲೆ ಎದುರಾಗುವ ಮೊದಲೇ ಮುಂಜಾಗತ ಕ್ರಮಗಳನ್ನು ಎಲ್ಲಾ ಅಧಿಕಾರಿಗಳು ತೆಗೆದುಕೊಳ್ಳಬೇಕು ಇಲ್ಲದಿದ್ದರೇ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಎಚ್ಚರಿಸಿದರು.
Vijaya Karnataka Web solve the water problem
ನೀರಿನ ಸಮಸ್ಯೆ ಪರಿಹರಿಸಿ


ತಾಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಅಯೋಜಿಸಿದ್ದ 45 ಗ್ರಾ.ಪಂ. ಪಿಡಿಒ, ವಿವಿಧ ಇಲಾಖೆಗಳ ಅಧಿಕಾರಿಗಳ ವಿವಿಧ ಯೋಜನೆಗಳ ಅನುಷ್ಠಾನ ಅಭಿವದ್ಧಿ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದರು.

‘‘ನರೇಗ ಯೋಜನೆ ಸೇರಿದಂತೆ ಬರ ಪರಿಹಾರ ಶೌಚಾಲಯಗಳ ನಿರ್ಮಾಣ ಹಾಗೂ ಗ್ರಾಮೀಣ ಭಾಗದ ಅಭಿವದ್ಧಿಗೆ ಸಂಭಂದಿಸಿದಂತೆ ಪಿಡಿಒಗಳ ಜವಾಬ್ದಾರಿ ಅತ್ಯಂತ ಮಹತ್ವದಾಗಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರಿ ಕಾರ‌್ಯಕ್ರಮಗಳನ್ನ ಅನುಷ್ಠಾನಗೊಳಿಸಿದರೆ ಪ್ರತಿಯೊಂದು ಗ್ರಾಮವು ಮಾದರಿ ಗ್ರಾಮವಾಗುವುದರಲ್ಲಿ ಸಂದೇಹವಿಲ್ಲ್ಲ,’’ಎಂದು ಹೇಳಿದರು.

ಮೇವು ಬ್ಯಾಂಕ್ ತೆರೆಯಿರಿ: ಜಾನುವಾರು ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತೆ ಮೇವು ಬ್ಯಾಂಕ್‌ಗಳನ್ನು ತೆರೆಯಲು ಕ್ರಮಕೈಗೊಳ್ಳುವ ಜತೆಯಲ್ಲಿ ಹಾಸ್ಟೆಲ್ ಸಮಸ್ಯೆಗಳನ್ನು ಮುಖ್ಯವಾಗಿ ತೆಗೆದು ಕೊಳ್ಳಲಾಗಿದೆ ಹಲವು ಹಾಸ್ಟೆಲ್‌ಗಳಲ್ಲಿ ಸೊಳ್ಳೆ ಪರದೇ, ಸ್ವಚ್ಛತೆ ಬಗ್ಗೆ ಗಮನಹರಿ ಸದೇ ಇರುವ ಅಧಿಕಾರಿಗಳ ಬಗ್ಗೆ ಕ್ರಮಕೈಗೊಳ್ಳಲಾಗುವುದು,’’ ಎಂದರು.

14ನೇ ಹಣಕಾಸು ಯೋಜನೆ ಅಡಿ ಪಂಚಾಯಿತಿಗಳಿಗೆ ಹಣ ಬಂದಿದ್ದು, ಅದರ ಅನುದಾನದಲ್ಲಿ ಶೇ.80 ರಷ್ಟನ್ನು ಕುಡಿಯುವ ನೀರಿಗೆ ಬಳಸಿಕೊಳ್ಳುವ ಅವಕಾಶವಿದ್ದು, ಪಿಡಿಒಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಕ್ರಮವನ್ನ ಕೈಗೊಂಡು ಟ್ಯಾಂಕರ್ ಮೂಲಕ ನೀರು ಪೂರೈಸುವ ಬದಲಿಗೆ ಶಾಶ್ವತವಾಗಿ ನೀರು ಪೂರೈಸುವ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡುವಂತೆ,’’ ಹೇಳಿದರು.

ಶುದ್ದನೀರಿನ ಘಟಕ: ತಾಲೂಕಿನಲ್ಲಿ ಸುಮಾರು 57 ಶುದ್ಧ ನೀರಿನ ಹೊಸ ಘಟಕ ಹಾಗೂ 42 ಹಳೆಯ ಘಟಕಗಳಿದ್ದು ಜನಸಾಮಾನ್ಯರಿಗೆ ನೀರನ್ನು ಒದಗಿಸದ ಸ್ಥಿತಿಯಲ್ಲಿದೆ. ಹೊಸ ಘಟಕಗಳಿಗೆ ಚಾಲನೆ ನೀಡಲು ಬೋರ್‌ವೆಲ್ ಮತ್ತು ನೀರನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿದ್ದು ಅದನ್ನು ಶೀಘ್ರ ವಾಗಿ ಬಗೆಹರಿಸಿಕೊಂಡು ನೀರನ್ನು ಒದಗಿಸುವಂತೆ ಪಿಡಿಒಗಳಿಗೆ ಸೂಚಿಸಿದರು.
‘‘ಯಗಚಿ ನದಿ ಮೂಲದಿಂದ 70 ಗ್ರಾಮಗಳಿಗೆ 25 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಕಾಮಗಾರಿಯನ್ನು 2007-08 ರಲ್ಲಿ ಕೈಗೆತ್ತಿಕೊಂಡಿದ್ದರು. ತಾಲೂಕಿನ 58 ಗ್ರಾಮಗಳಲ್ಲಿ 48ನ್ನು ಪ್ಲೋರೇಡ್ ಪೀಡಿತ ಪ್ರದೇಶವೆಂದು ಸೂಚಿಸಿದ್ದರು.

ಕಳೆದ ಹತ್ತು ವರ್ಷಗಳಿಂದ ಇಲ್ಲಿಯವರೆಗೆ ನೀರನ್ನು ಒದಗಿಸಲು ಕಾಮಗಾರಿಯೇ ಪೂರ್ಣಗೊಂಡಿಲ್ಲದ್ದೇ ತಾಲೂಕಿನ 30 ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವಂತೆ,’’ ಜಿ.ಪಂ. ಸದಸ್ಯ ಪಟೇಲ್‌ಶಿವಪ್ಪ ಮತ್ತು ಮಾಡಾಳು ಸ್ವಾಮಿ ಪ್ರಶ್ನಿಸಿದರು.

ಅನಂದ್ ಕುಮಾರ್ ಮಾತನಾಡಿ, ‘‘ಕಾಮಗಾರಿಯು ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, 3 ಕೋಟಿ 70 ಲಕ್ಷ ರೂ. ಕಾಮಗಾರಿಯು ನಡೆಯುತ್ತಿದ್ದೆ. ಕೆಲವು ಭಾಗಗಳಲ್ಲಿ ನೀರು ಹರಿಯದೇ ಇರುವುದರಿಂದ ಅಂತಹ ಪ್ರದೇಶಗಳಿಗೆ ನೀರಿನ ಸಂಗ್ರಹದ ತೊಟ್ಟಿ ನಿರ್ಮಾಣ ಮಾಡಿ ಅಲ್ಲಿಂದ ಬೇರೆಡೆಗೆ ನೀರನ್ನು ಹರಿಸಲು ಯೋಜನೆ ರೂಪಿಸಿದ್ದೇವೆ.
ಅಲ್ಲದೇ ಈ ಯೋಜನೆಯಲ್ಲಿ 6 ಹಳ್ಳಿಗಳಿಗೆ ನೀರನ್ನು ಒದಗಿಸಲು ಸಾಧ್ಯವಾಗದೇ ಇರುವುದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಒದಗಿಸಲು ಕ್ರಮಕೈಗೊಂಡಿದ್ದೇವೆ,’’ ಎಂದರು.

ತಿಂಗಳಲ್ಲಿ ಪೂರ್ಣ: 250 ಕೋಟಿ ವೆಚ್ಚದಲ್ಲಿ 530 ಹಳ್ಳಿಗಳಿಗೆ ಹೇಮಾವತಿ ನದಿ ಮೂಲದಿಂದ ನೀರನ್ನು ಒದಗಿಸುವ ಯೋಜನೆಯೂ 2015 ರಲ್ಲಿ ಪ್ರಾರಂಭವಾಗಿ 2019ರಲ್ಲಿ ಪೂರ್ಣವಾಗಬೇಕಿದ್ದು, ಇದಕ್ಕಾಗಿ 12 ದೊಡ್ಡ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ ಗಂಡಸಿ ಸಮೀಪದಲ್ಲಿ ಜಾಕ್‌ವೆಲ್ ನಿರ್ಮಾಣ ಮಾಡಲಾಗಿದ್ದು, ಕೆಲವೇ ತಿಂಗಳಲ್ಲಿ ಎಲ್ಲಾ ಗ್ರಾಮಗಳಿಗೆ ನೀರನ್ನು ಒದಗಿಸಲಾಗುವುದು,’’ ಎಂದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಕಷ್ಣಮೂರ್ತಿ, ಸೇರಿದಂತೆ ನಾನಾ ಇಲಾಖೆಗಳ ’’ರಿಯ ಅಧಿಕಾರಿಗಳು ಗ್ರಾಮ ಪಂಚಾುತಿಗಳ ಪಿಡಿಓಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ