ಆ್ಯಪ್ನಗರ

ಬಾಲಕನ ಮೇಲೆ ಬೀದಿನಾಯಿ ದಾಳಿ

ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿನಾಯಿ ದಾಳಿ ನಡೆಸಿ ಕಾಲು ಮತ್ತಿತರ ಭಾಗಕ್ಕೆ ಕಚ್ಚಿಗಾಯಗೊಳಿಸಿದೆ.

Vijaya Karnataka 11 Jul 2019, 5:00 am
ಹಾಸನ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ಬೀದಿನಾಯಿ ದಾಳಿ ನಡೆಸಿ ಕಾಲು ಮತ್ತಿತರ ಭಾಗಕ್ಕೆ ಕಚ್ಚಿಗಾಯಗೊಳಿಸಿದೆ.
Vijaya Karnataka Web stray dogs attack on boy
ಬಾಲಕನ ಮೇಲೆ ಬೀದಿನಾಯಿ ದಾಳಿ


ತಣ್ಣೀರುಹಳ್ಳ ಕಲ್ಪತರು ಬಡಾವಣೆಯ ಅಬ್ದುಲ್‌ ಅವರ ಪುತ್ರ ಉಸ್ಮಾನ್‌( 8) ಗಾಯಗೊಂಡ ಬಾಲಕ. ಈತ ಬುಧವಾರ ಸಂಜೆ ಮನೆಗೆ ಹಿಂತಿರುಗುವಾಗ ಬೀದಿನಾಯಿ ದಾಳಿನಡೆಸಿ ಗಾಯಗೊಳಿಸಿದೆ. ಈ ವೇಳೆ ಸಾರ್ವಜನಿಕರು ನಾಯಿಗೆ ಕಲ್ಲು ಹೊಡೆದು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದರು. ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಣ್ಣೀರು ಹಳ್ಳದಲ್ಲಿ ಬೀದಿನಾಯಿಗಳು ರಸ್ತೆಗಳಲ್ಲಿ ಗುಂಪಾಗಿ ಓಡಾಡುತ್ತಿದ್ದು, ಕಂಡ, ಕಂಡವರ ಮೇಲೆರಗಲು ಯತ್ನಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಸುತ್ತಲಿನ ಮಾಂಸಾಹಾರಿ ಹೋಟೆಲ್‌, ಮಾಂಸದ ಅಂಗಡಿ ಮತ್ತಿತರ ಕಡೆ ಎಸೆಯುವ ಮಾಂಸದ ತ್ಯಾಜ್ಯವನ್ನೇ ತಿಂದು ನಾಯಿಗಳು ಕೊಬ್ಬಿವೆ. ಇನ್ನು ಬೈಪಾಸ್‌ ರಸ್ತೆ ಪಕ್ಕದಲ್ಲಿ ತಂದು ಎಸೆಯುವ ಕೊಳೆತ ಮಾಂಸ ಮತ್ತಿತರ ಪದಾರ್ಥ ತಿಂದು ಮನುಷ್ಯರು, ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ. ಈ ಬಗ್ಗೆ ವಾರ್ಡಿನ ನಗರಸಭೆ ಸದಸ್ಯರಿಗೆ ತಿಳಿಸಿದ್ದು, ಗುರುವಾರ ನಗರಸಭೆ ಆಯುಕ್ತರಿಗೆ ದೂರು ಸಲ್ಲಿಸುವುದಾಗಿ ಸ್ಥಳೀಯರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ