ಆ್ಯಪ್ನಗರ

ಸಮ್ಮಿಶ್ರ ಸರಕಾರದ ಸಾಧನೆ ಬಹಿರಂಗ ಚರ್ಚೆಯಾಗಲಿ

ಹಿಂದಿನ ಸಮ್ಮಿಶ್ರ ಸರಕಾರ ತನ್ನ ಅಧಿಕಾರಾವಧಿಯಲ್ಲಿಏನು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂಬುದರ ಕುರಿತು ಬಹಿರಂಗ ಚರ್ಚೆಯಾಗಬೇಕು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.

Vijaya Karnataka 10 Sep 2019, 5:00 am
ಅರಕಲಗೂಡು: ಹಿಂದಿನ ಸಮ್ಮಿಶ್ರ ಸರಕಾರ ತನ್ನ ಅಧಿಕಾರಾವಧಿಯಲ್ಲಿಏನು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂಬುದರ ಕುರಿತು ಬಹಿರಂಗ ಚರ್ಚೆಯಾಗಬೇಕು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.
Vijaya Karnataka Web HSN09ARK2_16


ಪಟ್ಟಣದ ಶಿಕ್ಷಕರ ಭವನದಲ್ಲಿಸೋಮವಾರ ನಡೆದ ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಕೃತಜ್ಞತೆ ಸಮರ್ಪಣಾ ಸಮಾರಂಭದಲ್ಲಿಮಾತನಾಡಿ, ರಾಜ್ಯದ 1,19,840 ಕುಟುಂಬಕ್ಕೆ ಸಾಲ ಮನ್ನಾ ಆಗಿದೆ. ಜಿಲ್ಲೆಯಲ್ಲಿ2 ಸಾವಿರ ಕೋಟಿ ರೂ. ಸಾಲಮನ್ನವಾಗಿದ್ದು 94,140 ಕುಟುಂಬಗಳು ಇದರ ಪ್ರಯೋಜನ ಪಡೆದಿವೆ. ಇದು ವಿರೋಧಿಗಳ ಕಣ್ಣಿಗೆ ಕಾಣುವುದಿಲ್ಲವೇ ಎಂದು ಕಿಡಿಕಾರಿದರು.

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ತಾಲೂಕಿನ ನೀರಾವರಿ ಯೋಜನೆಗಳಿಗೆ 1200 ಕೋಟಿ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 1800 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ನೀಡಲಾಗಿದೆ. ನಷ್ಟಕ್ಕೊಳಗಾದ ತೆಂಗು ಬೆಳೆಗಾರರಿಗೆ 200 ಕೋಟಿ ರೂ. ಪರಿಹಾರದ ರೂಪದಲ್ಲಿಒದಗಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿತ್ತು ಎಂದರು.

ರಾಜ್ಯದಲ್ಲಿಜನರು ಪ್ರವಾಹದಿಂದ ಸಂಕಷ್ಟಕ್ಕೆ ತುತ್ತಾಗಿ ಪರಿಹಾರ ಒದಗಿಸುವಂತೆ ಕಣ್ಣೀರಿಡುತ್ತಿದ್ದರೂ ಅತ್ತ ಗಮನ ಹರಿಸದ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ವಕ್ಷೇತ್ರ ಶಿಕಾರಿಪುರದ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಹಾಸನ ಜಿಲ್ಲಾಆಸ್ಪತ್ರೆ ಅಭಿವೃದ್ಧಿ 250 ಕೋಟಿ ರೂ. ನೀಡಿದಾಗ ಎಲ್ಲವನ್ನು ಹಾಸನಕ್ಕೆ ಕೊಂಡೊಯ್ಯುತ್ತಿರುವುದಾಗಿ ಹುಯಿಲೆಬ್ಬಿಸುತ್ತಿದ್ದ ಬಿಜೆಪಿಯವರು ಈಗೇಕೆ ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರು ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಕಟ್ಟಿ ಮತ್ತೊಮ್ಮೆ ರಾಜ್ಯದಲ್ಲಿಜೆಡಿಎಸ್‌ ಸರಕಾರವನ್ನು ತರುವುದೇ ನಮ್ಮ ಎದುರಿನ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ರಾಜ್ಯದಲ್ಲಿಜೆಡಿಎಸ್‌ ಹಾಳಾಯಿತೆಂದು ವಿರೋಧಿಗಳು ಅಪ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್‌ ಮಾತ್ರ ಶಕ್ತಿ ಕುಗ್ಗಿಲ್ಲ, ಇನ್ನಷ್ಟು ಉತ್ಸಾಹದಿಂದ ಪಕ್ಷವನ್ನು ಸಂಘಟಿಸಲಾಗುವುದು ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿಒಂದೇ ಸರಕಾರ ಇದ್ದಾಗ ಹೆಚ್ಚಿನ ಆರ್ಥಿಕ ನೆರವು ದೊರೆಯುತ್ತದೆ ಎನ್ನುವ ಬಿಜೆಪಿಯವರ ವಾದ ಈಗ ಹುಸಿಯಾಗಿದೆ. ರಾಜ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದರೂ ನೆರವು ದೊರಕುತ್ತಿಲ್ಲ. ಬಹುಮತದಿಂದ ಕೇಂದ್ರದಲ್ಲಿಅಧಿಕಾರಕ್ಕೇರಿದ ಬಿಜೆಪಿ ಸರಕಾರ ಅಭಿವೃದ್ಧಿಯಲ್ಲಿವಿಫಲತೆ ಕಂಡಿದ್ದು, ದೇಶವನ್ನು ಆರ್ಥಿಕ ಸಂಕಷ್ಟ ಸಿಲುಕಿಸಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿ ಯುವ ಜನರು ಹತಾಶರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್‌ನ ಎಲ್ಲಘಟಕಗಳನ್ನು ಬಲಪಡಿಸಿ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುವುದು ಎಂದರು.

ಶಾಸಕ ಎ.ಟಿ.ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖಂಡರಾದ ಎಸ್‌.ಸಿ.ಚೌಡೇಗೌಡ, ಮುತ್ತಿಗೆ ರಾಜೇಗೌಡ, ಮುದ್ದನಹಳ್ಳಿ ರಮೇಶ್‌, ಪುಟ್ಟಸ್ವಾಮಪ್ಪ, ಡಾ.ಕೆ.ಎಂ.ಮೋಹನ್‌, ಇಮ್ರಾನ್‌ ಮೊಕ್ತಾರ್‌, ಸಾಧಿಕ್‌ ಸಾಬ್‌, ಕೃಷ್ಣಯ್ಯ, ಲೋಕೇಶ್‌, ಬಿ.ಜೆ.ಅಪ್ಪಣ್ಣ, ಲೋಕನಾಥ್‌, ಕೃಷ್ಣೇಗೌಡ, ಸೂರೇಗೌಡ, ನಿಂಗೇಗೌಡ, ಪಾರ್ವತಮ್ಮ, ಜನಾರ್ದನ ಗುಪ್ತ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ