ಆ್ಯಪ್ನಗರ

ಕಳವು ಆರೋಪಿ ಸಾವು

ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಪೊಲೀಸರ ವಶದಲ್ಲಿದ್ದ ಕಳವು ಆರೋಪಿಯೊಬ್ಬ ಶುಕ್ರವಾರ ರಾತ್ರಿ ಮೃತ ಪಟ್ಟಿದ್ದು, ಇದು ಲಾಕಪ್ ಡೆತ್ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Vijaya Karnataka 28 Apr 2019, 12:25 am
ಹಾಸನ: ಚನ್ನರಾಯಪಟ್ಟಣ ತಾಲೂಕು ನುಗ್ಗೇಹಳ್ಳಿ ಪೊಲೀಸರ ವಶದಲ್ಲಿದ್ದ ಕಳವು ಆರೋಪಿಯೊಬ್ಬ ಶುಕ್ರವಾರ ರಾತ್ರಿ ಮೃತ ಪಟ್ಟಿದ್ದು, ಇದು ಲಾಕಪ್ ಡೆತ್ ಎಂದು ಗ್ರಾಮ ಸ್ಥರು ಆರೋಪಿಸಿದ್ದಾರೆ.
Vijaya Karnataka Web theft was the death of the accused
ಕಳವು ಆರೋಪಿ ಸಾವು


ಚನ್ನರಾಯಪಟ್ಟಣ ತಾಲೂಕು ಬೆಲ ಗುಲಿಯ ಅವಿನಾಶ್ (28 ) ಮೃತ. ಮನೆ ಕಳವು ಮಾಡಿದ ಪ್ರಕರಣ ದಲ್ಲಿ ಆರೋಪಿ ಯಾಗಿದ್ದ ಈತನನ್ನು ಶುಕ್ರವಾರ ನ್ಯಾಯಾ ಲಯಕ್ಕೆ ಹಾಜರು ಪಡಿಸುವ ಸಲುವಾಗಿ ಚನ್ನರಾಯ ಪಟ್ಟಣದಲ್ಲಿ ನುಗ್ಗೆಹಳ್ಳಿ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಾಗ ಆತ ಕುಸಿದು ಬಿದ್ದು ಮೃತಪಟ್ಟಿದ್ದಾ ನೆಂದು ಪೊಲೀಸರು ಹೇಳುತ್ತಿದ್ದಾರೆ.

ಆದರೆ, ಇಪ್ಪತ್ತು ದಿನಗಳ ಹಿಂದೆ ಆತನನ್ನು ವಶಕ್ಕೆ ಪಡೆದ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ. ಅದನ್ನು ತಾಳಲಾರದೆ ಆತ ಮೃತಪಟ್ಟಿದ್ದಾನೆ. ಇದು ಲಾಕಪ್ ಡೆತ್ ಪ್ರಕರಣವಾಗಿದ್ದು, ಮುಚ್ಚಿ ಹಾಕಲು ಪೊಲೀಸರು ಅವಿನಾಶ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅವಿನಾಶ್ ಸಾವು ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮೃತನ ಮರಣೋತ್ತರ ಪರೀಕ್ಷೆ ಶನಿವಾರ ನಡೆಸಲಾಯಿತು. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಎಎಸ್‌ಪಿ ನಂದಿನಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ