ಆ್ಯಪ್ನಗರ

ಹಾಸನಾಂಬ ದರ್ಶನಕ್ಕೆ ಇಂದು ವಿಧ್ಯುಕ್ತ ತೆರೆ

ಹಾಸನಾಂಬೆ ದರ್ಶನಕ್ಕೆ ಮಂಗಳವಾರ ಮಧ್ಯಾಹ್ನ ತೆರೆ ಬೀಳಲಿದ್ದು, ವಿಧಿ, ವಿಧಾನದ ಹೊರತಾಗಿ ಸಾರ್ವಜನಿಕ ದರ್ಶನ ಇರುವುದಿಲ್ಲ. ವರ್ಷಪೂರ್ತಿ ದೀಪ ಉರಿಯುತ್ತಿರುತ್ತದೆ, ಹೂ ಬಾಡಿರು ವುದಿಲ್ಲಇತ್ಯಾದಿ ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿಹಾಸ ನಾಂಬೆ ವರ್ಷದಿಂದ ವರ್ಷಕ್ಕೆ ಖ್ಯಾತಿ ಹೆಚ್ಚುತ್ತಿದೆ. ದೇಶದ ಎಲ್ಲೆಡೆಯಿಂದ ಸಹಸ್ರಾರು ಭಕ್ತರು ಬರುತ್ತಿದ್ದಾರೆ.

Vijaya Karnataka 29 Oct 2019, 5:00 am
ಹಾಸನ: ಹಾಸನಾಂಬೆ ದರ್ಶನಕ್ಕೆ ಮಂಗಳವಾರ ಮಧ್ಯಾಹ್ನ ತೆರೆ ಬೀಳಲಿದ್ದು, ವಿಧಿ, ವಿಧಾನದ ಹೊರತಾಗಿ ಸಾರ್ವಜನಿಕ ದರ್ಶನ ಇರುವುದಿಲ್ಲ. ವರ್ಷಪೂರ್ತಿ ದೀಪ ಉರಿಯುತ್ತಿರುತ್ತದೆ, ಹೂ ಬಾಡಿರು ವುದಿಲ್ಲಇತ್ಯಾದಿ ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿಹಾಸ ನಾಂಬೆ ವರ್ಷದಿಂದ ವರ್ಷಕ್ಕೆ ಖ್ಯಾತಿ ಹೆಚ್ಚುತ್ತಿದೆ. ದೇಶದ ಎಲ್ಲೆಡೆಯಿಂದ ಸಹಸ್ರಾರು ಭಕ್ತರು ಬರುತ್ತಿದ್ದಾರೆ.
Vijaya Karnataka Web today is the ceremonial screen for hassanamba darshan
ಹಾಸನಾಂಬ ದರ್ಶನಕ್ಕೆ ಇಂದು ವಿಧ್ಯುಕ್ತ ತೆರೆ

ಈ ಬಾರಿಯೂ ಕಳೆದ 11 ದಿನ ಲಕ್ಷಾಂತರ ಭಕ್ತರು ದರ್ಶನ ಪಡೆದು ಪಾವನರಾಗಿದ್ದಾರೆ. ಸಾಮಾಜಿಕ ಜಾಲತಾಣ ದಲ್ಲಿನ ವ್ಯಾಪಕ ಪ್ರಚಾರದ ಹಿನ್ನೆಲೆಯಲ್ಲಿಹಾಸನಾಂಬೆ ಯನ್ನು ನೋಡಲೇಬೇಕು ಎಂದು 18 ಜನರ ತಂಡ ಬಂದಿ ದ್ದೇವೆ ಎಲ್ಲರೂ ಹಿರಿಯರು, ಬ್ಯಾಂಕ್‌ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದವರು, ಮತ್ತಿ ತರರು ಇದ್ದಾರೆ. ನಂಬಿಕೆ ಯಿಂದ ಬಂದಿದ್ದೇವೆ. ದರ್ಶನ ಮಾಡಿ ನಮಸ್ಕರಿಸಿದ್ದೇವೆ ಮನಸ್ಸು ಸಂತೋಷವಾಗಿದೆ ಎಂದು ಬೆಂಗಳೂರು ಬನಶಂಕರಿಯ ಕಾಶಿವಿಶ್ವನಾಥ ದೇವಗಿರಿ ಯೋಗಕೇಂದ್ರದ ಹಂಸವೇಣಿ ಮತ್ತಿತರರು ಉತ್ತರಿಸಿದರು. ಹರಕೆಹೊತ್ತು ಬಂದಿದ್ದೇನೆ: ತಾಯಿಗೆ ಆರೋಗ್ಯ ಸರಿಯಿಲ್ಲತೀವ್ರ ಚಿಂತೆ ಕಾಡುತ್ತಿದೆ ವೈದ್ಯರ ಬಳಿ ತೋರಿಸಿದರೂ, ಹಾಸನಾಂಬೆಯೇ ಆಕೆಯನ್ನು ಗುಣಪಡಿಸಲಿ ಎಂದು ಕಳೆದ ಮೂರುಗಂಟೆಯಿಂದ ಸರತಿ ಸಾಲಿನಲ್ಲಿನಿಂತಿದ್ದೇನೆ. ದೇವರು ಕೈಹಿಡಿಯುವ ನಂಬಿಕೆ ಇದೆ ಎಂದು ಹುಣಸೂರಿನ ಲಕ್ಷ್ಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ