ಆ್ಯಪ್ನಗರ

ಮರ ನೆಲಕ್ಕುರುಳಿ ವ್ಯಕ್ತಕ್ತಿಗೆ ಗಾಯ: 2 ಕಾರು ಜಖಂ

ನೂರಾರು ವರ್ಷದ ಹಳೆಯ ಮರ ನೆಲಕ್ಕುರುಳಿ 2 ಕಾರು ಜಖಂಗೊಂಡಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.

Vijaya Karnataka 13 Jul 2019, 5:00 am
ಹೊಳೆನರಸೀಪುರ: ನೂರಾರು ವರ್ಷದ ಹಳೆಯ ಮರ ನೆಲಕ್ಕುರುಳಿ 2 ಕಾರು ಜಖಂಗೊಂಡಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
Vijaya Karnataka Web HSN-HSN12HNP1


ಪಾರ್ಕಿಂಗ್‌ ಮಾಡಿ ಇಳಿಯುತ್ತಿವರ ಮೇಲೆ ಬಿದ್ದ 2 ಕಾರು ಜಕ್ಕಂ ಆಗಿ, ಮಾಲೀಕನೊಬ್ಬಗಾಯಗೊಂಡವರು. ಹಾಸನದ ಸಂತೋಷ್‌ಪೈ ಗಾಯಗೊಂಡಿದ್ದು, ಇವರ ತಲೆಗೆ ಪೆಟ್ಟುಬಿದ್ದಿದೆ. ಜತೆಯಲ್ಲಿದ್ದ ಸುಹಾಸ್‌ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಗಾಯಾಳು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಪಟ್ಟಣದ ರಿವರ್‌ಬ್ಯಾಂಕ್‌ ರಸ್ತೆಯ ತಾಲೂಕು ಪಂಚಾಯಿತಿ ಕಟ್ಟಡ ಪಕ್ಕದ ಉರ್ದು ಶಾಲೆ ಮುಂಬಾಗಿಲ ಬಳಿ ರಸ್ತೆ ಬದಿ ಇರುವ ಕಾಡುಮರ ಶುಕ್ರವಾರ ಉರುಳಿಬಿದ್ದಿದೆ. ಇದೇ ಮರದ ನೆರಳಿನಲ್ಲಿ ತಮ್ಮ ಕಾರು ನಿಲುಗಡೆಗೊಳಿಸಿದ ಸಂತೋಷ್‌ಪೈ ಕೆಳಗಿಳಿಯುತ್ತಿದ್ದಂತೆ ಮರ ಕಾಂಡ ಮುರಿದು ಬೀಳುವಂತೆ ಶಬ್ದ ಬಂದಿದೆ. ಎಚ್ಚೆತ್ತು ಹೆಜ್ಜೆ ಇರಿಸುವಷ್ಟರಲ್ಲಿ ಕಾರಿನ ಮೇಲೆ ಮರಬಿದ್ದಿದೆ. ಈ ವೇಳೆ ರೆಂಬೆಯೊಂದು ತಲೆಗೆ ಬಡಿದು ಪೆಟ್ಟಾಗಿದೆ. ಅದೃಷ್ಟವಶಾತ್‌ ಸ್ನೇಹಿತರಿಬ್ಬರೂ ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಇವರ ಪಕ್ಕದಲ್ಲೇ ನಿಲುಗಡೆಗೊಳಿಸಿದ್ದ ಪಟ್ಟಣದ ನಿವಾಸಿ ಮತೀನ್‌ ಅವರ ಮಾರುತಿ ಸಹ ಹಾನಿಯಾಗಿದೆ. ಮರ ಮುರಿದು ಬಿದ್ದಾಗ ಮತೀನ್‌ ಕಾರಿನ ಬಳಿ ಇಲ್ಲದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ಉರ್ದುಶಾಲೆಯ ಗೇಟ್‌ ಮುಂದೆಯೇ ಕೆಂಪು ಹೂವು ಬಿಡುವ ಕತ್ತಿಕಾಯಿ ಬಿಡುವ ಮರ ಹಳೆಯದ್ದಾಗಿತ್ತು. ಪೊಟರೆ ಬಿದ್ದು ಮಳೆ ನೀರು ತುಂಬಿಕೊಂಡಿದ್ದರಿಂದ ಪೊಳ್ಳಾಗಿತ್ತು. ಗಾಳಿಯ ಒತ್ತಡಕ್ಕೆ ಮುರಿದಿದೆ. ಶುಕ್ರವಾರವಾದ್ದರಿಂದ ಉರ್ದುಶಾಲೆಗೆ ರಜೆ ಇತ್ತು. ಅಕಸ್ಮಾತ್‌ ಶಾಲೆ ನಡೆದಿದ್ದ ದಿನ ಮರ ಮುರಿದು ಬಿದ್ದಿದ್ದರೆ ಮಕ್ಕಳ ಮೇಲೆ ಬಿದ್ದು ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇರುತ್ತಿತ್ತು. ಮಧ್ಯಾಹ್ನದ ಊಟದ ಸಮಯದಲ್ಲಿ ಅವಘಡ ಸಂಭವಿಸಿದ್ದು, ಮಕ್ಕಳ ಓಡಾಟ ಹೆಚ್ಚಿರುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ