ಆ್ಯಪ್ನಗರ

ವಾಟ್ಸಪ್ ಮೆಸೇಜ್‌ನಿಂದ ಮುರಿದು ಬಿದ್ದ ಮದುವೆ: ಪ್ರಿಯಕರನನ್ನೇ ವರಿಸಿದ ವಧು!

ತಾಲೂಕಿನ ಬೈಕೆರೆ ಗ್ರಾಮದ ತಾರೇಶ್‌ ಹಾಗೂ ಬೇಲೂರು ತಾಲೂಕಿನ ಕುಪ್ಪಗೋಡ ಗ್ರಾಮದ ಶೃತಿ ನಡುವೆ ಗುರುಹಿರಿಯರ ಒಪ್ಪಿಗೆಯಂತೆ ಗುರುವಾರ (ನ.29) ವಿವಾಹ ನಿಶ್ಚಯವಾಗಿತ್ತು.

Vijaya Karnataka Web 30 Nov 2018, 8:52 pm
ಸಕಲೇಶಪುರ: ಕಲ್ಯಾಣ ಮಂಟಪದಲ್ಲಿ ವಧುವಿನ ಕುತ್ತಿಗೆಗೆ ಮಾಂಗಲ್ಯ ಧಾರಣೆಗೆ ಕೆಲಹೊತ್ತಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಸಮೇತ ಬಂದ ಮೆಸೇಜ್‌ನಿಂದ ವರನ ಬದಲು ಪ್ರಿಯಕರ ತಾಳಿಕಟ್ಟಿ ತನ್ನ ಪ್ರಿಯತಮೆ ಕರೆದೊಯ್ದ ಸಿನಿಮೀಯ ರೀತಿಯ ಘಟನೆ ಇಲ್ಲಿನ ಕಲ್ಯಾಣ ಮಂದಿರದಲ್ಲಿ ಗುರುವಾರ ನಡೆಯಿತು.
Vijaya Karnataka Web whats


ತಾಲೂಕಿನ ಬೈಕೆರೆ ಗ್ರಾಮದ ತಾರೇಶ್‌ ಹಾಗೂ ಬೇಲೂರು ತಾಲೂಕಿನ ಕುಪ್ಪಗೋಡ ಗ್ರಾಮದ ಶೃತಿ ನಡುವೆ ಗುರುಹಿರಿಯರ ಒಪ್ಪಿಗೆಯಂತೆ ಗುರುವಾರ (ನ.29) ವಿವಾಹ ನಿಶ್ಚಯವಾಗಿತ್ತು. ಅದರಂತೆ ಪಟ್ಟಣದ ಸೀನಪ್ಪ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮದುವೆಗೆ ಎಲ್ಲಾ ತಯಾರಿಗಳು ನಡೆದಿದ್ದವು. ವಧು -ವರರ ಕಡೆಯಿಂದ ಬುಧವಾರ ರಾತ್ರಿ ಹಸೆ ಇತ್ಯಾದಿ ಶಾಸ್ತಗಳು ಕೂಡ ಸಂಭ್ರಮದಿಂದ ನಡೆದಿದ್ದವು.

ಆದರೆ, ಮದುವೆ ಸಂಭ್ರಮದಲ್ಲಿದ್ದ ವರ ತಾರೇಶ್‌ನ ವಾಟ್ಸ್‌ ಆಪ್‌ಗೆ ಗುರುವಾರ ತಾಳಿ ಕಟ್ಟಲು ಕೆಲವೇ ಗಂಟೆಗಳ ಮುಂಚೆ ಬಂದ ಫೋಟೋ ಸಮೇತ ಮೆಸೇಜ್‌ ನೋಡಿ ಶಾಕ್‌ ಆಯಿತು. ತಾನು ತಾಳಿ ಕಟ್ಟಲಿರುವ ಹುಡುಗಿ ಮತ್ತೊಬ್ಬನ ಜೊತೆಯಲ್ಲಿ ತೆಗೆಸಿಕೊಂಡಿದ್ದ ಫೊಟೋ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿ ಕಂಡು ದಿಗ್ಭ್ರಮೆಗೊಳಿಸಿತ್ತು. ಬೇಲೂರಿನ ಖಾಸಗಿ ಅಂಗಡಿಯೊಂದರಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಶೃತಿ ಹಾಗೂ ಅಂಗಡಿ ಮಾಲಿಕನಿಗೂ ಸ್ನೇಹ ಸಂಬಂಧ ಇತ್ತು ಎಂಬ ಮಾಹಿತಿಯನ್ನು ಅರಿತ ವರ ಈ ಮದುವೆಗೆ ಒಲ್ಲೆ ಎಂದಿದ್ದಾರೆ. ಈ ವೇಳೆ ಎರಡೂ ಕಡೆಯವರ ನಡುವೆ ತೀವ್ರ ವಾಗ್ವಾದಕ್ಕೂ ಕಾರಣವಾಯಿತು.

ವಿಷಯ ತಿಳಿದು ಪಟ್ಟಣ ಪೊಲೀಸರು ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟು, ಪ್ರಕ್ಷ ುಬ್ಧ ವಾತಾವರಣ ತಿಳಿಗೊಳಿಸಿ ಮಧ್ಯಸ್ಥಿಕೆ ವಹಿಸಿದರು. ಸಮಾರಂಭದಲ್ಲಿ ಹಾಜರಿದ್ದ ಅಂಗಡಿ ಮಾಲೀಕ ಅಭಿಲಾಷ್‌, ಶೃತಿಗೆ ತಾಳಿ ಕಟ್ಟುವುದಾಗಿ ಪೊಲೀಸ್‌ ಸಮ್ಮುಖದಲ್ಲಿ ತಿಳಿಸಿದ್ದಾನೆ. ಅಂತಿಮ ಕ್ಷ ಣದಲ್ಲಿ ಅಭಿಲಾಷ್‌ ಮತ್ತು ಶೃತಿ ಹಸಮಣೆ ಏರಿ ವಿವಾಹಬಂಧನಕ್ಕೊಳಗಾದರು. ತಾಲೂಕಿನ ಬೈಕೆರೆ ಗ್ರಾಮದ ತಾರೇಶ್‌ ಹಾಗೂ ಕುಟುಂಬ ಬೇಸರದಿಂದ ತೆರಳಿದರೆ, ಮದುವೆಗೆ ಆಗಮಿಸಿದ್ದವರು ವಧು ಮಾಡಿದ ಎಡವಟ್ಟು ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ