ಆ್ಯಪ್ನಗರ

ಅಂತರ್ಜಾತಿ ವಿವಾಹಕ್ಕೆ ವಿರೋಧ, ಅತ್ತೆ ಮನೆ ಮುಂದೆ ಸೊಸೆ ಧರಣಿ!

ಅಂತರ್ಜಾತಿ ವಿವಾಹಕ್ಕೆ ಅತ್ತೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಸೊಸೆ ಧರಣಿ ಕುಳಿತ ಘಟನೆ ಜಮ್ಮನಹಳ್ಳಿಯಲ್ಲಿ ನಡೆದಿದೆ. ಲೋಹಿತ್‌ ಜತೆ ಕಲಾ 3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರ ವಿವಾಹಕ್ಕೆ ಸಂಬಂಧಿಸಿದಂತೆ ಲೋಹಿತ್‌ ತಾಯಿ ಹಾಗೂ ತಂದೆ ವಿರೋಧ ವ್ಯಕ್ತಪಡಿಸಿದ್ದರು.

Vijaya Karnataka Web 24 Nov 2020, 12:11 pm
ವಣಗೂರು: ಅಂತರ್ಜಾತಿ ವಿವಾಹ ವಿರೋಧಿಸಿದ ಅತ್ತೆ ಮನೆ ಮುಂದೆ ಸೊಸೆ ಧರಣಿ ಕುಳಿತಿರುವ ಘಟನೆ ಜಮ್ಮನಹಳ್ಳಿಯಲ್ಲಿ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ತಾಲೂಕಿನ ಬಾಳ್ಳುಪೇಟೆ ಅಂಬೇಡ್ಕರ್‌ ನಗರದ ನಿವಾಸಿ ಕಲಾ (28) ಪ್ರತಿಭಟನೆ ನಡೆಸಿದರು. ಜಮ್ಮನಹಳ್ಳಿಯ ಲೋಹಿತ್‌(36) ಜತೆ 3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರ ವಿವಾಹಕ್ಕೆ ಸಂಬಂಧಿಸಿದಂತೆ ಲೋಹಿತ್‌ ತಾಯಿ ಹಾಗೂ ತಂದೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಹೆಚ್ಚಳ: 2 ಲಕ್ಷದಿಂದ 2.5 ಲಕ್ಷ ರೂಪಾಯಿಗೆ ಏರಿಕೆ!

ಲೋಹಿತ್‌ ಜತೆ ಕಲಾ ಎರಡನೇ ಮದುವೆಯಾಗಿದ್ದು, ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಲೋಹಿತ್‌ ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದ ಪರಿಣಾಮ 5 ವರ್ಷಗಳಿಂದ ಮನೆಯಿಂದ ಹೊರಗಿದ್ದರು.
ಮದುವೆ ಖರ್ಚು ಉಳಿಸಿ ಕೊರೊನಾ ನಿಧಿಗೆ ದೇಣಿಗೆ, ಮಾದರಿಯಾದ ಅಂತರ್ಜಾತಿ ವಿವಾಹ

ಇದಾದ ಬಳಿಕ ಮನೆಗೆ ಹಿಂದಿರುಗಿ ಪೋಷಕರೊಂದಿಗೆ ಜೀವನ ನಡೆಸಲು ಮುಂದಾದ ವೇಳೆ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಕಲಾ ಗಂಡನ ಮನೆ ಎದುರು ಪ್ರತಿಭಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ