ಆ್ಯಪ್ನಗರ

ಇಂದಿರಾ ಕ್ಯಾಂಟೀನ್‌ ಯಾವಾಗ ಶುರು?

ಬಸವರಾಜ ಸರೂರ ರಾಣೇಬೆನ್ನೂರ: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಜಾರಿಗೆ ತರಲಾಗಿದ್ದ ಇಂದಿರಾ ಕ್ಯಾಂಟೀನ್‌ ಯೋಜನೆಯಡಿ ಇಲ್ಲಿನ ಹಳೆ ಸರಕಾರಿ ಆಸ್ಪತ್ರೆ ಆವರಣದಲ್ಲಿಯೂ ಕಟ್ಟಡ ನಿರ್ಮಾಣಗೊಂಡು ಆರು ತಿಂಗಳ ಗತಿಸಿದರೂ ಇಂದಿಗೂ ಅದಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

Vijaya Karnataka 17 Jan 2020, 5:00 am
ಬಸವರಾಜ ಸರೂರ ರಾಣೇಬೆನ್ನೂರ: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಜಾರಿಗೆ ತರಲಾಗಿದ್ದ ಇಂದಿರಾ ಕ್ಯಾಂಟೀನ್‌ ಯೋಜನೆಯಡಿ ಇಲ್ಲಿನ ಹಳೆ ಸರಕಾರಿ ಆಸ್ಪತ್ರೆ ಆವರಣದಲ್ಲಿಯೂ ಕಟ್ಟಡ ನಿರ್ಮಾಣಗೊಂಡು ಆರು ತಿಂಗಳ ಗತಿಸಿದರೂ ಇಂದಿಗೂ ಅದಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.
Vijaya Karnataka Web
ಇಂದಿರಾ ಕ್ಯಾಂಟೀನ್‌ ಯಾವಾಗ ಶುರು?


ಬಡವರು, ಮಧ್ಯಮ ವರ್ಗದರು, ಕಾರ್ಮಿಕರಿಗೆ ರಿಯಾಯತಿ ದರದಲ್ಲಿಆಹಾರ ಪೂರೈಸುವುದು ಇಂದಿರಾ ಕ್ಯಾಂಟೀನ್‌ದ ಮುಖ್ಯ ಧ್ಯೇಯವಾಗಿದೆ. ಕಟ್ಟಡ ನಿರ್ಮಾಣದಿಂದ ಹಿಡಿದು ಅದನ್ನು ಪ್ರಾರಂಭಿಸುವ ಎಲ್ಲಹಂತಗಳಲ್ಲಿಯೂ ಕೇಂದ್ರಿಕೃತ ವ್ಯವಸ್ಥೆಯಡಿ ಜಿಲ್ಲಾಧಿಕಾರಿ ಕಚೇರಿಗೆ ಇದರ ಜವಾಬ್ದಾರಿ ವಹಿಸಲಾಗಿರುತ್ತದೆ. ಇದು ಕಾರ್ಯಾರಂಭ ಮಾಡಿದ ಮೇಲೆ ಅದರ ನಿರ್ವಹಣೆಯನ್ನು ನಗರಸಭೆಗೆ ವಹಿಸಲಾಗುತ್ತದೆ.

ಕಾಂಪೌಂಡ್‌ ನಿರ್ಮಾಣವೂ ಪೂರ್ಣ:
ರಾಜ್ಯದ ಎಲ್ಲಕಡೆಗಳಲ್ಲಿಯೂ ಒಂದೇ ಮಾದರಿಯಲ್ಲಿಕಟ್ಟಡ ನಿರ್ಮಿಸಲಾಗುತ್ತಿದ್ದು ಇಲ್ಲಿಯೂ ಅದೇ ಮಾದರಿ ಅನುಸರಿಸಲಾಗಿದೆ. ಕಟ್ಟಡ ನಿರ್ಮಾಣದ ನಂತರ ಕಾಂಪೌಂಡ್‌ ನಿರ್ಮಾಣ ಕಾರ್ಯ ಸ್ವಲ್ಪ ವಿಳಂಬವಾಗಿತ್ತು. ಎರಡು ತಿಂಗಳ ಹಿಂದೆ ಅದು ಕೂಡ ಪೂರ್ಣಗೊಂಡಿದೆ.

ಈಗಾಗಲೇ ಕ್ಯಾಂಟೀನ್‌ನಲ್ಲಿಅಡುಗೆ ತಯಾರಿಸಲು ಅಗತ್ಯವಿರುವ ಎಲ್ಲಾಪರಿಕರಗಳು ಬಂದಿವೆ. ಕಿರಾಣಿ, ಕಾಯಿಪಲ್ಲೆತಂದು ಕ್ಯಾಂಟೀನ್‌ ಪ್ರಾರಂಭಿಸುವುದೊಂದೆ ಬಾಕಿ ಉಳಿದಿದೆ.

ಜನಪ್ರತಿನಿಧಿಗಳಿಂದ ವಿಳಂಬ: ಇಂದಿರಾ ಕ್ಯಾಂಟೀನ್‌ಗೆ ಅಗತ್ಯವಾದ ಎಲ್ಲಕೆಲಸಗಳು ಪೂರ್ಣಗೊಂಡಿದ್ದರೂ ಅದರ ಉದ್ಘಾಟನೆ ವಿಳಂಬವಾಗುತ್ತಿರುವುದಕ್ಕೆ ಜನಪ್ರತಿನಿಧಿಗಳಿಂದ ಹಸಿರು ನಿಶಾನೆ ದೊರಕುತ್ತಿಲ್ಲಎಂದು ಹೆಸರು ಹೇಳಲಿಚ್ಛಿಸದ ನಗರಸಭೆ ಸಿಬ್ಬಂದಿಯೊಬ್ಬರು ಪತ್ರಿಕೆಗೆ ತಿಳಿಸಿದರು. ರಿಯಾಯತಿ ದರದಲ್ಲಿಸಿಗುವ ಆಹಾರ ಪದಾರ್ಥಗಳನ್ನು ಸೇವಿಸುವ ಭಾಗ್ಯ ನಗರದ ಜನತೆಗೆ ಯಾವಾಗ ಸಿಗುತ್ತದೆಯೋ ಕಾದು ನೋಡಬೇಕಾಗಿದೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ