Please enable javascript.ಕಬ್ಬಿನ ಬೆಳೆ ಕ್ಷೇತ್ರೋತ್ಸವ - ಕಬ್ಬಿನ ಬೆಳೆ ಕ್ಷೇತ್ರೋತ್ಸವ - Vijay Karnataka

ಕಬ್ಬಿನ ಬೆಳೆ ಕ್ಷೇತ್ರೋತ್ಸವ

ವಿಕ ಸುದ್ದಿಲೋಕ 1 Nov 2014, 5:00 am
Subscribe

ಕುಮಾರಪಟ್ಟಣ :ಸಮೀಪದ ಯಣ್ಣಿಹೊಸಳ್ಳಿ ಗ್ರಾಮದಲ್ಲಿ ಸಾವಯವ ಭಾಗ್ಯ ಯೋಜನೆಯಡಿ ಶ್ರೀ ಕರಬಸಪ್ಪ ಶೇಕಪ್ಪ ಕೆಂಚರೆಡ್ಡಿ ಇವರ ಕ್ಷೇತ್ರದಲ್ಲಿ ಬೆಳೆದ ಕಬ್ಬಿನ ಬೆಳೆಯ

ಕಬ್ಬಿನ ಬೆಳೆ ಕ್ಷೇತ್ರೋತ್ಸವ
ಕುಮಾರಪಟ್ಟಣ :ಸಮೀಪದ ಯಣ್ಣಿಹೊಸಳ್ಳಿ ಗ್ರಾಮದಲ್ಲಿ ಸಾವಯವ ಭಾಗ್ಯ ಯೋಜನೆಯಡಿ ಶ್ರೀ ಕರಬಸಪ್ಪ ಶೇಕಪ್ಪ ಕೆಂಚರೆಡ್ಡಿ ಇವರ ಕ್ಷೇತ್ರದಲ್ಲಿ ಬೆಳೆದ ಕಬ್ಬಿನ ಬೆಳೆಯ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.

ಜಿ.ಪಂ ಹಾವೇರಿ, ಕೃಷಿ ಇಲಾಖೆ ರಾಣೆಬೆನ್ನೂರು, ತಾ.ಪಂ ರಾಣೆಬೆನ್ನೂರು, ಗ್ರಾ.ಪಂ ಕರೂರು, ನವೋದಯ ಶಿಕ್ಷಣ ಮತ್ತು ಪರಿಸರ ಅಭಿವದ್ಧಿ ಸೇವಾ ಸಂಸ್ಥೆ, (ನೀಡ್ಸ್) ರಾಣೇಬೆನ್ನೂರ ಹಾಗೂ ಶ್ರೀ ಆಂಜನೇಯ ಸಾವಯವ ಕಷಿಕರ ಸಂಘ, ಎಣ್ಣಿಹೊಸಳ್ಳಿ ಇವುಗಳ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವೀರೇಶ್ ಜಿ ಎಂ. ಮಾತನಾಡಿ, ಸಾವಯವ ಭಾಗ್ಯ ಯೋಜನೆಯುಡಿ ರಾಣೇಬೆನ್ನೂರು ತಾಲೂಕಿನ ಎಣ್ಣಿಹೊಸಳ್ಳಿ ಹಾಗೂ ನಿಟ್ಟೂರು ಗ್ರಾಮಗಳು ಆಯ್ಕೆಯಾಗಿದ್ದು, ಯೋಜನೆಯ ಗುರಿ, ಉದ್ದೇಶ, ಮಹತ್ವ, ಉಪಯೋಗಗಳ ಬಗ್ಗೆ ತಿಳಿಸಿದರು.

ಕೃಷಿ ಇಲಾಖೆ ಸಮನ್ವಯ ಅಧಿಕಾರಿ ವೆ. ಶ್ರೀಧರ ಮಾತನಾಡಿ, ಸಾವಯವ ಕಷಿ ಹೊಸದೇನಲ್ಲ. ಪೂರ್ವಜರ ಕಾಲದಲ್ಲಿ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕ ಬಳಸುತ್ತಿರಲಿಲ್ಲ. ಸಾವಯವ ಗೊಬ್ಬರವನ್ನು ಮಾತ್ರ ಬಳಸಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದರು. ಆದರೆ ಆಧುನೀಕರಣ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಧಾನ್ಯಗಳು ಸಾಕಾಗದೇ ಇರುವ ಅನಿವಾರ್ಯಕಾರಣದಿಂದ ರಾಸಾಯನಿಕ ಬಳಸಿ ಬೆಳೆ ಬೆಳೆಯಲು ಪ್ರಾರಂಭಿಸಿದರು. ಆದರೆ ರಾಸಾಯನಿಕ ಬಳಕೆಯಿಂದ ಅಪೌಷ್ಟಿಕತೆ, ಮಣ್ಣಿನ ಫಲವತ್ತತೆ ಕಡಿಮೆಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದರಿಂದ ಸಾವಯವ ಕಷಿ ಅಳವಡಿಸಿಕೊಳ್ಳಲು ರೆತರಿಗೆ ಕರೆ ನೀಡಿದರು.

ಹನುಮನಮಟ್ಟಿ ಕೃಷಿ ವಿಜ್ಞಾನ ಮಹಾವಿದ್ಯಾಲಯದ ವಿಜ್ಞಾನಿಗಳಾದ ಬಿ. ಆರ್. ಜಗದೀಶ್ ಮಾತನಾಡಿ, ಕಬ್ಬು ಬೆಳೆಯು ಕೊಯ್ಲಿಗೆ ಬಂದಾಗ ಅದರ ರವದಿಯನ್ನು ಬಹಳಷ್ಟು ರೆತರು ಸುಡುತ್ತಿರುವುದು ಕಂಡುಬಂದಿದೆ. ಅದನ್ನು ಸುಡದೇ ಹಾಗೇ ಹೊಲದಲ್ಲಿ ಹಾಕುವುದರಿಂದ ಭೂಮಿಗೆ ಬೀಳುವ ಸೂರ್ಯನ ಶಾಖವು ಕಡಿಮೆಯಾಗುವುದು, ಎರಡನೇಯದಾಗಿ ಭೂಮಿಯಲ್ಲಿರುವ ಸೂಕ್ಷ್ಮಾಣು ಜೀವಿಗಳು ಉತ್ಪತ್ತಿಯಾಗುತ್ತವೆ ಹಾಗೂ ರವದಿಯನ್ನು ಹದವಾಗಿ ನೀರು ಹಾಕಿದರೆ ಗೊಬ್ಬರ ತಯಾರಾಗುತ್ತದೆ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಎಂದು ರೆತರಿಗೆ ತಿಳಿಸಿದರು.

ಬೆಳೆಗಾರ ಕರಬಸಪ್ಪ ಶೇಖಪ್ಪ ಕೆಂಚರೆಡ್ಡಿ ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆಯುವ ಪೂರ್ವ ತಯಾರಿ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಅಧ್ಯಕ್ಷತೆವಹಿಸಿದ್ದ ಎಣ್ಣಿಹೊಸಳ್ಳಿ ಆಂಜನೇಯ ಸಾವಯವ ಕಷಿಕರ ಸಂಘದ ಅಧ್ಯಕ್ಷ ಬಾಬುರೆಡ್ಡಿ ಗಿರಿರೆಡ್ಡೇರ ಮಾತನಾಡಿ, ಯೋಜನೆಯು ನಮ್ಮ ಗ್ರಾಮಕ್ಕೆ ಬಂದಿರುವುದನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರತಿ ರೆತರೂ ಭಾಗವಹಿಸುವಂತೆ ಕರೆ ನೀಡಿದರು.

ತಾ.ಪಂ ಸದಸ್ಯೆ ರತ್ನಮ್ಮ ಬಸವರಾಜ ತಂಬದ ಉದ್ಘಾಟಿಸಿದರು. ಗ್ರಾ.ಪಂ ಸದಸ್ಯರಾದ ಭೀಮಪ್ಪ ಓಲೇಕಾರ, ಮಾರುತಿ ಸಾವಯವ ಕಷಿಕರ ಸಂಘದ ಅಧ್ಯಕ್ಷ ಮಳ್ಳಪ್ಪ ದುರ್ಗದ, ಪ್ರಗತಿಪರ ರೆತ ಶಂಕರಗೌಡ ಚಳಗೇರಿ, ನೀಡ್ಸ್ ಸಂಸ್ಥೆಯ ಸುಧೀರ ಈ ಟಿ, ಕ್ಷೇತ್ರಾಕಾರಿ ಸಂತೋಷ ಡಿ.ಬಿ. ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ