ಆ್ಯಪ್ನಗರ

*ಕೂಡಲಸಂಗಮದಲ್ಲಿ 2 ನೇ ಪೂರ್ವಭಾವಿ

ಹಾವೇರಿ : ದಲಿತರು ಹಾಗೂ ಹಿಂದುಳಿದ ವರ್ಗಗಳ ಸಂಘಟನೆ ಹಾಗೂ ಅಭಿವೃದ್ಧಿ ಮತ್ತು ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆನ್ನುವುದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಸಂಕಲ್ಪವಾಗಿದ್ದು, ಅದಕ್ಕಾಗಿ ಅ. 1ರಂದು ಹಾವೇರಿಯಲ್ಲಿ ಪ್ರಥಮ ಜಿಲ್ಲಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಬ್ರಿಗೇಡ್‌ನ ಮುಂದಾಳತ್ವ ವಹಿಸಿರುವ ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

ವಿಕ ಸುದ್ದಿಲೋಕ 27 Aug 2016, 4:30 am

ಹಾವೇರಿ : ದಲಿತರು ಹಾಗೂ ಹಿಂದುಳಿದ ವರ್ಗಗಳ ಸಂಘಟನೆ ಹಾಗೂ ಅಭಿವೃದ್ಧಿ ಮತ್ತು ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆನ್ನುವುದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಸಂಕಲ್ಪವಾಗಿದ್ದು, ಅದಕ್ಕಾಗಿ ಅ. 1ರಂದು ಹಾವೇರಿಯಲ್ಲಿ ಪ್ರಥಮ ಜಿಲ್ಲಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಬ್ರಿಗೇಡ್‌ನ ಮುಂದಾಳತ್ವ ವಹಿಸಿರುವ ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು.

ನಗರದ ಶ್ರೀ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬ್ರಿಗೇಡ್‌ನ ಪೂರ್ವಭಾವಿ ಸಭೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಹೈದರಾಬಾದ ಕರ್ನಾಟಕ ಜತೆಗೆ ಉತ್ತರ ಕರ್ನಾಟಕ ಭಾಗದ ಹಿಂದುಳಿದ ಹಾಗೂ ದಲಿತ ಮುಖಂಡರ ನೇತೃತ್ವದಲ್ಲಿ 2 ನೇ ಪೂರ್ವಭಾವಿ ಸಭೆ ಆ. 31ರಂದು ಕೂಡಲಸಂಗಮದಲ್ಲಿ ನಡೆಯಲಿದ್ದು, ಈ ವೇಳೆ ಮುಂದಿನ ಸಮಾವೇಶ ಆಯೋಜನೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದೆಂದರು.

ಹಿಂದುಳಿದವರು ಹಾಗೂ ದಲಿತರನ್ನು ವೋಟ್‌ಬ್ಯಾಂಕ್‌ ಮಾಡಿಕೊಂಡು ಕಳೆದ 50 ವರ್ಷಗಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್‌ ಪಕ್ಷ ಈ ವರ್ಗಗಳ ಅಭಿವೃದ್ಧಿಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ ಎಂದು ಕಾಂಗ್ರೆಸ್‌ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ರಾಯಣ್ಣ ಬ್ರಿಗೇಡ್‌ ಮೂಲಕ ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರಬೇಕೆನ್ನುವ ಉದ್ದೇಶಕ್ಕೆ ಈ ಸಮುದಾಯಗಳ ಸಮಾವೇಶ ಮಾಡುವ ಮೂಲಕ ಜಾತಿ ರಾಜಕಾರಣ ಮಾಡುವುದು ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.

ಸಿಎಂಗೆ ಸವಾಲು:

ಬಿಜೆಪಿ ಆಡಳಿತಾವಧಿಯಲ್ಲಿ ಹಿಂದುಳಿದವರು ಹಾಗೂ ದಲಿತರ ಕಲ್ಯಾಣಕ್ಕೆ 1 ಸಾವಿರ ಕೋಟಿ ಹಾಗೂ 35 ಮಠಗಳ ಅಭಿವೃದ್ಧಿಗೆ 95 ಕೋಟಿ ರೂ. ಅನುದಾನ ನೀಡುವ ಮೂಲಕ ಕಾಳಜಿ ತೋರಿಸಿತ್ತು. ಆದರೆ ಈಗ ಸಿದ್ಧರಾಮಯ್ಯ ಬಜೆಟ್‌ನಲ್ಲಿ ಅನುದಾನ ತೋರಿಸಿಯೂ ಹಣ ನೀಡುತ್ತಿಲ್ಲ ಎಂದು ಹರಿಹಾಯ್ದ ಈಶ್ವರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಜವಾಗಿಯೂ ನೈತಿಕತೆ ಇದ್ದರೆ ಮೊದಲು ಹಣ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಬ್ರಿಗೇಡ್‌ ಅಧ್ಯಕ್ಷ ವಿರುಪಾಕ್ಷಪ್ಪ, ಮುಕುಡಪ್ಪ, ಬಿಬಿಎಂಪಿ ಮಾಜಿ ಮೇಯರ್‌ ವೆಂಕಟೇಶ, ಮಾಜಿ ಶಾಸಕರಾದ ನೇಮಿರಾಜ, ಚಂದ್ರನಾಯ್ಕ, ಸೋಮಲಿಂಗಪ್ಪ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಮುಂತಾದವರು ಉಪಸ್ಥಿತರಿದ್ದರು.

-------

Vijaya Karnataka Web  2nd preliminary kudalasangamadalli
*ಕೂಡಲಸಂಗಮದಲ್ಲಿ 2 ನೇ ಪೂರ್ವಭಾವಿ

ರಾಯಣ್ಣ ಬ್ರಿಗೇಡ್‌ 32 ದಿನದ ಕೂಸು. ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಲು ಆರ್ಥಿಕ ಸಂಪನ್ಮೂಲದ ಅಗತ್ಯವಿದ್ದು, 1 ಲಕ್ಷ ರೂ. ನೀಡಿದವರು ಮಹಾ ಪೋಷಕರು, 50 ಸಾವಿರ ರೂ. ನೀಡಿದವರು ಪೋಷಕ ಸದಸ್ಯರಾಗುತ್ತಾರೆ. ಉಳಿದವರು ಶಕ್ತ್ಯಾನುಸಾರ ವಂತಿಕೆ ನೀಡುವಂತೆ ಈಶ್ವರಪ್ಪ ಮನವಿ ಮಾಡಿದರು.

------...

ಬಿಎಸ್‌ವೈ ಮನವೊಲಿಸುವೆ:

ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ರಾಯಣ್ಣ ಬ್ರಿಗೇಡ್‌ ಮನಸ್ತಾಪ ತಂದಿಟ್ಟಿದೆ ಎಂದು ಮಾಧ್ಯಮಗಳು ನಿತ್ಯ ಜಗಳ ತಂದಿಡುತ್ತಿವೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಂದಾಗುತ್ತೇವೆ. ರಾಯಣ್ಣ ಬ್ರಿಗೇಡ್‌ ಸ್ಥಾಪನೆ ಬಗ್ಗೆ ಬಿಎಸ್‌ವೈ ಮನವೊಲಿಸಲಾಗುವುದಲ್ಲದೆ ಗೊಂದಲಗಳ ಬಗ್ಗೆ ಚರ್ಚಿಸಿ ಬ್ರಿಗೇಡ್‌ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ