ಆ್ಯಪ್ನಗರ

40 ಸಾವಿರ ಕೋಳಿ ಸಾವು, ಗ್ರಾಮಸ್ಥರಲ್ಲಿ ಆತಂಕ

ರಾಣೇಬೆನ್ನೂರ : ತಾಲೂಕಿನ ತೆರೆದಹಳ್ಳಿಯಲ್ಲಿರುವ ವೆಂಕಟೇಶ್ವರ ಹ್ಯಾಚರಿಸ್‌ ಕಂಪನಿಯವರು ಮಂಗಳವಾರ ರಾತ್ರಿ ಏಕಾಎಕಿ ಸುಮಾರು 40 ಸಾವಿರಕ್ಕೂ ಅಧಿಕ ಕೋಳಿಗಳನ್ನು ಭೂಮಿಯಲ್ಲಿಜೀವಂತವಾಗಿ ಹೂತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿಆತಂಕ ಮೂಡಿಸಿದೆ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಆರೋಪಿಸಿದ್ದಾರೆ.

Vijaya Karnataka 19 Mar 2020, 5:00 am
ರಾಣೇಬೆನ್ನೂರ : ತಾಲೂಕಿನ ತೆರೆದಹಳ್ಳಿಯಲ್ಲಿರುವ ವೆಂಕಟೇಶ್ವರ ಹ್ಯಾಚರಿಸ್‌ ಕಂಪನಿಯವರು ಮಂಗಳವಾರ ರಾತ್ರಿ ಏಕಾಎಕಿ ಸುಮಾರು 40 ಸಾವಿರಕ್ಕೂ ಅಧಿಕ ಕೋಳಿಗಳನ್ನು ಭೂಮಿಯಲ್ಲಿಜೀವಂತವಾಗಿ ಹೂತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿಆತಂಕ ಮೂಡಿಸಿದೆ ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಆರೋಪಿಸಿದ್ದಾರೆ.
Vijaya Karnataka Web 40 thousand chicken deaths anxiety among villagers
40 ಸಾವಿರ ಕೋಳಿ ಸಾವು, ಗ್ರಾಮಸ್ಥರಲ್ಲಿ ಆತಂಕ

ಈ ಕುರಿತು ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಿಶ್ವದಾದ್ಯಂತ ಅತೀ ವೇಗವಾಗಿ ಪಸರಿಸುತ್ತಿರುವ ಕೊರೊನಾ ಹಾಗೂ ಹರಿಹರ ತಾಲೂಕಿನ ಗ್ರಾಮದಲ್ಲಿತಲೆದೊರಿರುವ ಹಕ್ಕಿಜ್ವರ ಕಂಡು ಬಂದ ಹಿನ್ನೆಲೆಯಲ್ಲಿಕಂಪನಿಯವರು ಈ ರೀತಿ ಕೋಳಿಗಳನ್ನು ಸಜೀವವಾಗಿ ಹೂತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಸಹಜವಾಗಿಯೇ ಇದು ಕಂಪನಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿಭಯದ ವಾತಾವರಣ ಉಂಟಾಗಿದೆ. ಆದ್ದರಿಂದ ಇದರ ಬಗ್ಗೆ ತಾಲೂಕು ಆಡಳಿತ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲಿಯವರೆಗೂ ಕಂಪನಿಯವರ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಕೋಳಿಗಳನ್ನು ಏಕೆ ಹೂತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕæಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ