ಆ್ಯಪ್ನಗರ

ಕೇಂದ್ರ ರೈಲ್ವೆ ಸಚಿವರಿಗೆ ಸಾಮೂಹಿಕ ಪತ್ರ

ರಾಣೇಬೆನ್ನೂರ : ನಗರದ ಮೂರು ಸ್ಥಳಗಳಲ್ಲಿರೈಲ್ವೆ ಹಳಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ತಾಲೂಕು ರೈಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿ ನೇತೃತ್ವದಲ್ಲಿಸಾರ್ವಜನಿಕರು ಶುಕ್ರವಾರ ಕೇಂದ್ರ ರೈಲ್ವೆ ಸಚಿವರಿಗೆ ಸಾಮೂಹಿಕ ಪತ್ರ ಬರೆದು ಪ್ರತಿಭಟಿಸಿದರು.

Vijaya Karnataka 26 Oct 2019, 5:00 am
ರಾಣೇಬೆನ್ನೂರ : ನಗರದ ಮೂರು ಸ್ಥಳಗಳಲ್ಲಿರೈಲ್ವೆ ಹಳಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ತಾಲೂಕು ರೈಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿ ನೇತೃತ್ವದಲ್ಲಿಸಾರ್ವಜನಿಕರು ಶುಕ್ರವಾರ ಕೇಂದ್ರ ರೈಲ್ವೆ ಸಚಿವರಿಗೆ ಸಾಮೂಹಿಕ ಪತ್ರ ಬರೆದು ಪ್ರತಿಭಟಿಸಿದರು.
Vijaya Karnataka Web a collective letter to the union railway minister
ಕೇಂದ್ರ ರೈಲ್ವೆ ಸಚಿವರಿಗೆ ಸಾಮೂಹಿಕ ಪತ್ರ


ಈ ಸಮಯದಲ್ಲಿಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ನಗರದಲ್ಲಿಗುತ್ತಲ ರಸ್ತೆ, ಗಂಗಾಪುರ ರಸ್ತೆ ಹಾಗೂ ಮೆಡ್ಲೇರಿ ರಸ್ತೆಗಳಿಗೆ ಪ್ರತ್ಯೇಕವಾಗಿ ರೈಲ್ವೆ ಇಲಾಖೆಯು ಸೇತುವೆ ನಿರ್ಮಿಸಬೇಕಾಗಿದೆ. ಆ ಪೈಕಿ ಈಗಾಗಲೇ ಗುತ್ತಲ ರಸ್ತೆಯಲ್ಲಿಸಾಧಕ ಬಾಧಕಗಳನ್ನು ಪರಿಗಣಿಸದೇ ರೈಲ್ವೆ ಇಲಾಖೆ ಅಧಿಕಾರಿಗಳು ಕೆಳ ಸೇತುವೆ ನಿರ್ಮಿಸಿದ್ದಾರೆ. ಇದರಿಂದ ಮಳೆಗಾಲದಲ್ಲಿಸಾಕಷ್ಟು ತೊಂದರೆಯಾಗುತ್ತಿದ್ದು, ರಸ್ತೆ ಮೇಲೆ ದೊಡ್ಡ ಪ್ರಮಾಣದಲ್ಲಿನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ.

ಈ ಹಿನ್ನೆಲೆಯಲ್ಲಿನಗರದ ಮೂರು ಕಡೆ ಮೇಲ್ಸೇತುವೆ ನಿರ್ಮಿಸುವಂತೆ ಹೋರಾಟ ಸಮಿತಿ ವತಿಯಿಂದ ಅನೇಕ ಬಾರಿ ಮನವಿ ಸಲ್ಲಿಸುವ ಜತೆಗೆ ಪ್ರತಿಭಟನೆಗಳನ್ನು ನಡೆಸಲಾಗಿದೆ. ಮೇ 13ರಂದು ಗುತ್ತಲ ರಸ್ತೆಯ ಕೆಳ ಸೇತುವೆ ಬಳಿ ಪ್ರತಿಭಟನೆ ನಡೆಸಿದಾಗ ಸಂಸದ ಶಿವಕುಮಾರ ಉದಾಸಿ ಸ್ಥಳಕ್ಕೆ ಆಗಮಿಸಿ ಶೀಘ್ರವೇ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಇಂದಿನವರೆಗೂ ಅದು ಕಾರ್ಯಗತಕ್ಕೆ ಬಾರದ ಹಿನ್ನೆಲೆಯಲ್ಲಿರೈಲ್ವೆ ಸಚಿವರಿಗೆ ಸಮಸ್ಯೆ ಕುರಿತು ಪತ್ರ ಬರೆದು ಒತ್ತಾಯಿಸುತ್ತಿದ್ದೇವೆ. ಇದಲ್ಲದೆ ನ.4ರಂದು ನಗರದ ಪ್ರಮುಖ ರಸ್ತೆಗಳಲ್ಲಿಪ್ರತಿಭಟನಾ ಮೆರವಣಿಗೆ ಕೈಗೊಂಡು ಗುತ್ತಲ ರಸ್ತೆ ರೈಲ್ವೆ ಗೇಟ್‌ ಬಳಿ ರೈಲು ತಡೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಜಗದೀಶ ಕೆರೂಡಿ, ಉಮೇಶ ಹೊನ್ನಾಳಿ, ಹನುಮಂತಪ್ಪ ಕಬ್ಬಾರ, ಮಳ್ಳಪ್ಪ ಕಮದೋಡ, ಚಂದ್ರಣ್ಣ ಬೇಡರ, ನೀಲಕಂಠ ಭೂತೆ, ಅಮರ ಭೂತೆ, ಮೀರಾ, ಶಶಿಕಲಾ ಅರಿಕಟ್ಟಿ, ಜಗದೀಶ ಆನ್ವೇರಿ, ಬಸವರಾಜ ಕೊಂಗಿ, ಹರಿಹರಗೌಡ ಪಾಟೀಲ ಮತ್ತೀತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ