ಆ್ಯಪ್ನಗರ

ಎಸಿಬಿ ಬಲೆಗೆ ಉಪಖಜಾನೆ ಅಧಿಕಾರಿ

ಇಲ್ಲಿನ ಉಪಖಜಾನೆ ಕಾರಾರ‍ಯಲಯದಲ್ಲಿ ಗುರುವಾರ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೊಬ್ಬ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Vijaya Karnataka 30 Nov 2018, 5:00 am
ಹಾವೇರಿ : ಇಲ್ಲಿನ ಉಪಖಜಾನೆ ಕಾರಾರ‍ಯಲಯದಲ್ಲಿ ಗುರುವಾರ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೊಬ್ಬ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
Vijaya Karnataka Web acb trap subdivision officer
ಎಸಿಬಿ ಬಲೆಗೆ ಉಪಖಜಾನೆ ಅಧಿಕಾರಿ


ದಾಳಿ ವೇಳೆ ಉಪ ಖಜಾನೆ ಅಧಿಕಾರಿ ಅಶೋಕ ದೇವರಗುಡ್ಡ ಎಂಬವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬ್ಯಾಡಗಿ ಸಮಾಜ ಕಲ್ಯಾಣ ಇಲಾಖೆಗೆ ತನ್ನ ವಾಹನವನ್ನು ಮಾಸಿಕ 24 ಸಾವಿರ ರೂ. ಬಾಡಿಗೆ ಆಧಾರದ ಮೇಲೆ ಬಿಟ್ಟಿರುವ ಹಾನಗಲ್‌ ತಾಲೂಕಿನ ಪರಶುರಾಮ ಎಸ್‌. ಎಂಬವರಿಗೆ ಬಾಡಿಗೆ ಹಣದ ಚೆಕ್‌ ನೀಡಲು ಈ ಅಧಿಕಾರಿ 1500 ರೂ. ಬೇಡಿಕೆ ಇಟ್ಟಿದ್ದರು.

ಪದೇ ಪದೆ ಲಂಚಕ್ಕಾಗಿ ಪೀಡಿಸುತ್ತಿದ್ದ ಅಧಿಕಾರಿಯ ವಿರುದ್ಧ ಪರಶುರಾಮ ಹಾವೇರಿ ಜಿಲ್ಲಾ ಎಸಿಬಿಗೆ ದೂರು ಸಲ್ಲಿಸಿದ್ದರು. ಈ ಅಧಿಕಾರಿ ಗುರುವಾರ ಲಂಚ ಪಡೆಯುತ್ತಿದ್ದ ವೇಳೆ ಎಸಿಪಿ ಎಸ್‌.ಪಿ.ವಂಶಿಕೃಷ್ಣ ಹಾಗೂ ಡಿಎಸ್‌ಪಿ ಪ್ರಹ್ಲಾದ ನೇತೃತ್ವದ ಎಸಿಬಿ ತಂಡದ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಎಸಿಬಿಗೆ ದೂರು ಸಲ್ಲಿಸಿ: ಈ ಸಂದರ್ಭ ಮಾತನಾಡಿದ ಡಿಎಸ್‌ಪಿ ಪ್ರಹ್ಲಾದ, ಯಾವುದೇ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಗಳಿಗೆ ಅಧಿಕಾರಿಗಳು ಲಂಚ ಕೇಳುವುದು ಕಂಡು ಬಂದಲ್ಲಿ ಜಿಲ್ಲಾ ಎಸಿಬಿ ಕಚೇರಿ ಅಧಿಕಾರಿಗಳ ಮೊ:9480806289 ಹಾಗೂ 9480806229 ದೂರು ಸಲ್ಲಿಸುವಂತೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ