ಆ್ಯಪ್ನಗರ

ಎಸಿಬಿಯಿಂದ ದೂರು ಅಹವಾಲು ಸ್ವೀಕಾರ

ಹಾವೇರಿ: ಹಾವೇರಿಯ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ಫೆ.20 ಹಾಗೂ 24 ರಂದು ಜಿಲ್ಲೆಯ ಶಿಗ್ಗಾವಿ, ಸವಣೂರ ಹಾಗೂ ಹಾನಗಲ್‌ ತಾಲೂಕುಗಳ ಪ್ರವಾಸಿ ಮಂದಿರಗಳಲ್ಲಿಆಯಾ ತಾಲೂಕುಗಳ ಸರಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂದುಕೊರತೆ ಸಭೆ ಕೈಗೊಂಡು ಸಾರ್ವಜನಿಕರಿಂದ ದೂರು

Vijaya Karnataka 19 Feb 2020, 5:00 am
ಹಾವೇರಿ: ಹಾವೇರಿಯ ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ಫೆ.20 ಹಾಗೂ 24 ರಂದು ಜಿಲ್ಲೆಯ ಶಿಗ್ಗಾವಿ, ಸವಣೂರ ಹಾಗೂ ಹಾನಗಲ್‌ ತಾಲೂಕುಗಳ ಪ್ರವಾಸಿ ಮಂದಿರಗಳಲ್ಲಿಆಯಾ ತಾಲೂಕುಗಳ ಸರಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂದುಕೊರತೆ ಸಭೆ ಕೈಗೊಂಡು ಸಾರ್ವಜನಿಕರಿಂದ ದೂರು ಅಹವಾಲುಗಳನ್ನು ಸ್ವೀಕರಿಸಿ, ವಿಚಾರಣೆ ಕೈಕೊಳ್ಳಲಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಹಾವೇರಿ ವಿಭಾಗದ ಪೊಲೀಸ್‌ ಉಪ-ಅಧೀಕ್ಷಕರು ತಿಳಿಸಿದ್ದಾರೆ.
Vijaya Karnataka Web acceptance of complaint from acb
ಎಸಿಬಿಯಿಂದ ದೂರು ಅಹವಾಲು ಸ್ವೀಕಾರ


ಫೆ.20ರಂದು ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-30ರವರೆಗೆ ಶಿಗ್ಗಾವಿ ಪ್ರವಾಸಿ ಮಂದಿರದಲ್ಲಿ, ಮಧ್ಯಾಹ್ನ 2.30 ರಿಂದ 5 ಗಂಟೆವರೆಗೆ ಸವಣೂರು ಪ್ರವಾಸಿ ಮಂದಿರದಲ್ಲಿಪಿಐ ಕೆ. ರಾಮರೆಡ್ಡಿ ಅವರು ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕರಿಸುವರು.

ಫೆ. 24 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಬ್ಯಾಡಗಿ ಪ್ರವಾಸಿ ಮಂದಿರದಲ್ಲಿಪಿಐ ಕೆ.ರಾಮರೆಡ್ಡಿ ಅವರು ಸಾರ್ವಜನಿಕರಿಂದ ದೂರು ಹಾಗೂ ಅಹವಾಲುಗಳನ್ನು ಸ್ವೀಕರಿಸುವರು.

ಸಾರ್ವಜನಿಕರು ಆಯಾ ದಿನಗಳಂದು ಏರ್ಪಡಿಸಲಾಗುವ ಸಾರ್ವಜನಿಕ ಕುಂದುಕೊರತೆ ಸಭೆಗೆ ಹಾಜರಾಗಿ, ಸಂಬಂಧಪಟ್ಟ ತಾಲೂಕು ಮತ್ತು ಜಿಲ್ಲೆಯ ಸರಕಾರಿ ಕಾರ್ಯಾಲಯಗಳಲ್ಲಿನಡೆಯುತ್ತಿರುವ ದುರಾಡಳಿತ, ವಿಳಂಬ ನೀತಿ, ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ತಾರತಮ್ಯ ನೀತಿ ಅನುಸರಿಸುತ್ತಿರುವುದು, ಕಳಪೆ ಕಾಮಗಾರಿ, ಹಣ ದುರುಪಯೋಗ ಕುರಿತು ದೂರುಗಳನ್ನು ನಮೂನೆ 1 ಮತ್ತು 2 ರಲ್ಲಿಅಫಿಡೆವಿಟ್‌ನೊಂದಿಗೆ ಸಲ್ಲಿಸಿಕೊಳ್ಳಬಹುದು. ಮಾನ್ಯ ನ್ಯಾಯಾಲಯಗಳಲ್ಲಿವಿಚಾರಣೆಗೆ ಬಾಕಿ ಇದ್ದರೆ ಅಂತಹ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಉಪ-ಅಧೀಕ್ಷಕರು ತಿಳಿಸಿದ್ದಾರೆ.

ಹಾವೇರಿ ತಾಲೂಕಿಗೆ ಸಂಬಂಧಿಸಿದಂತೆ ಯಾವುದಾದರೂ ದೂರು ಅರ್ಜಿಗಳಿದ್ದಲ್ಲಿಹಾವೇರಿ ಜಿಲ್ಲಾಕೇಂದ್ರದಲ್ಲಿರುವ ಆರಕ್ಷಕ ಉಪಾಧೀಕ್ಷಕರು ಮತ್ತು ಪೊಲೀಸ್‌ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ ಕಚೇರಿಗೆ ಪ್ರತಿದಿನ ದೂರು ಸಲ್ಲಿಸಬಹುದಾಗಿದೆ.

ಮಾಹಿತಿಗಾಗಿ ಕರ್ನಾಟಕ ಲೋಕಾಯುಕ್ತ ಹಾವೇರಿ ಪೊಲೀಸ್‌ ಉಪಾಧೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ: 08375- 232121/237167ನ್ನು ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ