ಆ್ಯಪ್ನಗರ

ನಿತ್ಯವೂ ಅಪಘಾತ, ಆಂಬ್ಯುಲೆನ್ಸ್‌ ಖಾತ್ರಿ

ರಾಜು ನದಾಫ ಹಾವೇರಿ: ಸವೂರ-ಫಕ್ಕೀರನಂದಿಹಳ್ಳಿ ರಸ್ತೆ ಸಾಕಷ್ಟು ಹದಗೆಟ್ಟಿದ್ದು, ಅಪಘಾತ ವಲಯವಾಗಿದೆ. ಈ ರಸ್ತೆಯಲ್ಲಿಬೈಕ್‌ನಿಂದ ಬಿದ್ದು ಸೊಂಟ ಮುರಿದುಕೊಂಡು ಆಂಬ್ಯುಲೆನ್ಸ್‌ ಮೂಲಕ ಪಕ್ಕದ ಬಂಕಾಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗುವುದು ಸಹ ನಿತ್ಯದ ಮಾತಾಗಿದೆ.

Vijaya Karnataka 4 Sep 2019, 5:00 am
ರಾಜು ನದಾಫ ಹಾವೇರಿ: ಸವೂರ-ಫಕ್ಕೀರನಂದಿಹಳ್ಳಿ ರಸ್ತೆ ಸಾಕಷ್ಟು ಹದಗೆಟ್ಟಿದ್ದು, ಅಪಘಾತ ವಲಯವಾಗಿದೆ. ಈ ರಸ್ತೆಯಲ್ಲಿಬೈಕ್‌ನಿಂದ ಬಿದ್ದು ಸೊಂಟ ಮುರಿದುಕೊಂಡು ಆಂಬ್ಯುಲೆನ್ಸ್‌ ಮೂಲಕ ಪಕ್ಕದ ಬಂಕಾಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗುವುದು ಸಹ ನಿತ್ಯದ ಮಾತಾಗಿದೆ.
Vijaya Karnataka Web accidents and ambulances are guaranteed
ನಿತ್ಯವೂ ಅಪಘಾತ, ಆಂಬ್ಯುಲೆನ್ಸ್‌ ಖಾತ್ರಿ


ಬಂಕಾಪುರದಿಂದ ಫಕ್ಕೀರನಂದಿಹಳ್ಳಿಗೆ ಮೂರು ಕಿ.ಮೀ. ರಸ್ತೆ ಇದೆ. ಇಕ್ಕಟ್ಟಾದರೂ ಸುಮಾರು 1.20 ಕಿ.ಮೀ. ಅಗಲ ಮತ್ತು ಕಾಂಕ್ರೀಟ್‌ ಕಂಡಿದೆ. ಮುಂದೆ ಸವೂರ-ಫಕ್ಕೀರನಂದಿಹಳ್ಳಿ ವರೆಗಿನ ಒಂದೂವರೆ ಕಿ.ಮೀ. ರಸ್ತೆ ಸಂಪೂರ್ಣ ತಗ್ಗು-ಗುಂಡಿಗಳ ಸಾಮ್ರಾಜ್ಯವಾಗಿ ಗಾಡಿಗಳ ಸಂಚಾರ ಕಷ್ಟ, ಕಷ್ಟ ಎನ್ನುವಂತಿದೆ. ಸುತ್ತುವರಿದು ಊರು ತಲಪುವ ಬಸ್‌ ಮಾರ್ಗದ ಬದಲಿ ಕಷ್ಟವಾದರೂ ಜನ ಈ ರಸ್ತೆಯಲ್ಲೇ ಅನಿವಾರ್ಯವಾಗಿ ಸಂಚರಿಸುವಂತಾಗಿದೆ. ಪಂಚಾಯಿತಿ ಸದಸ್ಯರಿಗೆ ಹಿಡಿಶಾಪ ಮಾತ್ರ ನಿತ್ಯದ ಮಾತಾಗಿದೆ.

ಆಗಿದ್ದೇನೆ?:
ಮೊಹರಂ ಹಬ್ಬಕ್ಕೆ ಊರಿಗೆ ಬಂಕಾಪುರದಿಂದ ಕಿರಾಣಿ ಖರೀದಿಸಿ ಸೋಮವಾರ ಬೈಕ್‌ನಲ್ಲಿಚಳ್ಯಾಳಕ್ಕೆ ಹೊರಟಿದ್ದ ದಂಪತಿ ಸವೂರ-ಫಕ್ಕೀರನಂದಿಹಳ್ಳಿ ಕ್ರಾಸ್‌ನಲ್ಲಿಬಿದ್ದಿದ್ದಾರೆ. ಈ ಸಮಯದಲ್ಲಿದಾರಿಯಲ್ಲಿರುವ ಡಾ.ಫೀರ್ಜಾದೆ ನರ್ಸ್‌ ಗಾಯಗೊಂಡಿದ್ದ ಹೆಣ್ಣುಮಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಬಟ್ಟೆ ಬದಲಾಯಿಸಲು ಅವಕಾಶ ಕೊಡುವ ಜತೆಗೆ ಸೊಂಟಕ್ಕೆ ಪೆಟ್ಟಾಗಿ ನಡೆದಾಡಲು ಸಹ ಸಾಧ್ಯವಾಗದ ಹಿನ್ನೆಲೆಯಲ್ಲಿತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದರು.

ಈ ಘಟನೆ ಮಾಸುವ ಮುನ್ನವೇ ಪುನಃ ಮಂಗಳವಾರ ವ್ಯಾಪಾರಿಯೊಬ್ಬರು ಈ ಜಾಗೆಯಲ್ಲೇ ಬೈಕ್‌ ಸ್ಕಿಡ್‌ ಆಗಿ ಬಿದ್ದಿದ್ದಾರೆ. ಅವರಿಗೂ ಸೊಂಟಕ್ಕೆ ಪೆಟ್ಟು ಬಿದ್ದಿದೆ. ಈ ಘಟನಾವಳಿಯಿಂದಾಗಿ ರಸ್ತೆ ಅವ್ಯವಸ್ಥೆ ಫಕ್ಕೀರನಂದಿಹಳ್ಳಿ ಗ್ರಾಮಕ್ಕೆ ಕಪ್ಪುಚುಕ್ಕೆ ತಂದಿಟ್ಟಿದೆ. ಶಾಸಕರನ್ನೂ ಸೇರಿದಂತೆ ಈ ಹಳ್ಳಿಯ ಪಂಚಾಯಿತಿ ಸದಸ್ಯರ ನಿರ್ಲಕ್ಷೆಗೆ ಗ್ರಾಮಸ್ಥರು ಆಕ್ರೋಶಗೊಳ್ಳುವಂತೆ ಮಾಡಿದೆ. ಇಂಥ ಅವಘಡಗಳು ಆಗೊಮ್ಮೆ-ಈಗೊಮ್ಮೆ ನಡೆದಿದ್ದರೆ ಗ್ರಾಮಸ್ಥರು ಅಷ್ಟಾಗಿ ತಲೆ ಕೆಡಸಿಕೊಳ್ಳುತ್ತಿರಲಿಲ್ಲ. ಕೇವಲ ಎರಡೇ ದಿನಗಳಲ್ಲಿಬೈಕ್‌ನಲ್ಲಿಸಂಚರಿಸುವವರನ್ನು ಅಂಗವಿಕಲರನ್ನಾಗಿಸುತ್ತಿರುವುದು ಕೆರಳುವಂತೆ ಮಾಡಿದೆ.

ನೆರೆಯೂ ಕಾರಣ?: ಊರಿನ ಮುಂಭಾಗದಲ್ಲೇ ಹರಿಯುವ ಬಾಜೀರಾಯನ ಹಳ್ಳದ ಜಲ ಪ್ರತಾಪಕ್ಕೆ ಈ ಫಕ್ಕೀರನಂದಿಹಳ್ಳಿಯ ಜನತೆ ಅಕ್ಷರಶಃ ಆತಂಕಗೊಂಡಿದ್ದರು. ಊರಲ್ಲಿನೀರು ನುಗ್ಗಿ ರಸ್ತೆಗಳು ಜಲಾವೃತಗೊಂಡಿದ್ದವು. ಈ ನೀರು ಇಳಿಮುಖಗೊಳ್ಳುವವರೆಗೂ ರಸ್ತೆಯ ಮಾರ್ಗದಲ್ಲಿರುವ ಮನೆಗಳ ಜನರು ಹೊರಗೆ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿಹರಿದಾಡುವ ಮೂಲಕ ಗ್ರಾಮಸ್ಥರ ದುಸ್ಥಿತಿಗೆ ಸಾಕ್ಷಿಯಾಗಿತ್ತು.

ಈಗ ನೆರೆ ಪರಿಸ್ಥಿತಿ ತೆರೆ ಕಂಡಿದೆ. ರಸ್ತೆ ಮಾತ್ರ ತಗ್ಗು-ಗುಂಡಿಗಳಿಂದಾಗಿ ಸಂಚಾರ ದುಸ್ತರಗೊಳ್ಳುವಂತೆ ಮಾಡಿದೆ. ಈ ರಸ್ತೆಯನ್ನು ದುರಸ್ತಿಗೊಳಿಸಿ ಎನ್ನುವ ಗ್ರಾಮಸ್ಥರ ಬೇಡಿಕೆಗೆ ಶಾಸಕರೂ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳೂ ಕವಡೆ ಕಾಸಿನ ಕಿಮ್ಮತ್ತೂ ಕೊಟ್ಟಿಲ್ಲಎನ್ನುವುದಕ್ಕೆ ಈ ಘಟನಾವಳಿಗಳೇ ಸಾಕ್ಷಿಯಾಗಿವೆ. ಈ ನಿಟ್ಟಿನಲ್ಲಿಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕ್ರಮ ಏನು? ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ